ಸೋಮವಾರ, 26 ಅಕ್ಟೋಬರ್ 2026
Trending

ಪವಿತ್ರಾ ಗೌಡ ಮಾಜಿ ಪತಿ ಸಂಜಯ್‌ ಸಿಂಗ್‌ ನಿಧನ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-1 ಆರೋಪಿಯಾಗಿ ಜೈಲು ಸೇರಿರುವ ನಟಿ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್‌ ಸಿಂಗ್‌ (42) ನಿಧನ ಹೊಂದಿದ್ದಾರೆ. ರಾಜಸ್ಥಾನದಲ್ಲಿ ಅವರು ಏಳೆಂಟು ತಿಂಗಳ ಹಿಂದೆಯೇ ಕೊನೆಯುಸಿರೆಳೆದಿದ್ದು, ಈ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

Sponsored

ಸಂಜಯ್‌ ಸಿಂಗ್‌ ರಾಜಸ್ಥಾನಕ್ಕೆ ತೆರಳಿದ ನಂತರ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಿದರೂ, ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಪವಿತ್ರಾ ಗೌಡ ಅವರಿಂದ ವಿಚ್ಛೇದನ ಪಡೆದ ನಂತರ ತೀವ್ರ ಮಾನಸಿಕ ಅಭದ್ರತೆ ಹಾಗೂ ಖಿನ್ನತೆಗೆ ಒಳಗಾಗಿದ್ದ ಸಂಜಯ್‌ ಮದ್ಯಪಾನದ ದಾಸರಾಗಿದ್ದರು. ಈ ಕುಡಿತದ ಚಟದಿಂದಲೇ ಅವರ ಆರೋಗ್ಯ ಕ್ಷೀಣಿಸಿ ಸಾವನ್ನಪ್ಪಲು ಕಾರಣ ಎನ್ನಲಾಗಿದೆ.