ಸೋಮವಾರ, 26 ಅಕ್ಟೋಬರ್ 2026
Trending

Death :ವ್ಯಕ್ತಿಯ ಜೀವ ತೆಗೆದ ‘ರಸಗುಲ್ಲ’

Death: ರಸಗುಲ್ಲ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಶುಗರ್ ಪೇಷಂಟ್ಗಳಿಗೂ ಕೂಡ ರಸಗೊಲ್ಲ ಹೆಸರು ಕೇಳಿದ ತಕ್ಷಣ ಬಾಯಿ ನೀರು ಬರುತ್ತದೆ. ಆದರೆ ಇದೀಗ ಈ ರಸಗುಲ್ಲ ಒಬ್ಬ ವ್ಯಕ್ತಿಯ ಪ್ರಾಣ ತೆಗೆದಿದೆ.

Sponsored

ಹೌದು, ರಸಗುಲ್ಲ ತಿನ್ನುವ ವೇಳೆ ಅದು ಗಂಟಲಲ್ಲಿ ಸಿಲುಕಿ 41 ವರ್ಷದ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ಜಾರ್ಖಂಡ್‌ನ ಹಳ್ಳಿಯೊಂದರಲ್ಲಿ ನಡೆದ ಮದುವೆ ಸಮಾರಂಭದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು 41 ವರ್ಷದ ಲಲಿತ್ ಸಿಂಗ್ ಎಂದು ಗುರುತಿಸಲಾಗಿದೆ.

Advertisement

ಲಲಿತ್ ಸಿಂಗ್ ಅವರು ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದರು. ಮದುವೆಯಲ್ಲಿ ಲಲಿತ್ ಸಿಂಗ್ ಸಹ ಇತರರಂತೆ ಊಟವನ್ನು ಸವಿದ ಬಳಿಕ ರಸಗುಲ್ಲವನ್ನು ತಿನ್ನಲು ಮುಂದಾಗಿದ್ದಾನೆ. ಲಲಿತ್ ಸಿಂಗ್ ರಸಗುಲ್ಲವನ್ನು ತಿನ್ನುತ್ತಿದ್ದಾಗ ಅದು ಅಕಸ್ಮಾತ್ ಅವರ ಗಂಟಲಲ್ಲಿ ಸಿಲುಕಿಕೊಂಡಿದೆ. ಕೆಲವು ಕ್ಷಣಗಳಲ್ಲೇ ಅವರ ಮುಖ ಬಿಳಿಯಾಗತೊಡಗಿತು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.

ಕುಟುಂಬದವರು ಹಾಗೂ ಅಲ್ಲಿದ್ದವರು ತಕ್ಷಣವೇ ಲಲಿತ್ ಸಿಂಗ್‌ಗೆ ಸಹಾಯ ಮಾಡಲು ಮುಂದಾದರು. ಅವರ ಗಂಟಲಲ್ಲಿ ಸಿಲುಕಿದ್ದ ರಸಗುಲ್ಲವನ್ನು ಹೊರತೆಗೆಯಲು ಪ್ರಯತ್ನಿಸಿದರು. ನಂತರ ನೀರು ಕುಡಿಸಲು ಪ್ರಯತ್ನಿಸಿದರು. ಕೆಲವರು ಬೆನ್ನಿಗೆ ತಟ್ಟುವ ಮೂಲಕ ಆಹಾರ ಹೊರಬರುವಂತೆ ಮಾಡಲು ಯತ್ನಿಸಿದರು. ಆದರೆ ಯಾವುದೂ ಸಾದ್ಯವಾಗಲಿಲ್ಲ. ರಸಗುಲ್ಲ ಗಂಟಲಲ್ಲಿ ಸಿಲುಕಿಕೊಂಡ ಪರಿಣಾಮ ಉಸಿರಿನ ಮಾರ್ಗ ಸಂಪೂರ್ಣವಾಗಿ ತಡೆಹಿಡಿದಿತ್ತು. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋದರು ಕೂಡ ಅವರನ್ನು ಉಳಿಸಲು ಆಗಲಿಲ್ಲ.