ಸೋಮವಾರ, 26 ಅಕ್ಟೋಬರ್ 2026
Trending

ಇಂದು ಭಾರತಕ್ಕೆ ಮತ್ತೆರಡು ತೈಲ ಹಡಗು: ಮಂಗಳೂರಿನಲ್ಲಿ 26 ಸಾವಿರ ಮೆಟ್ರಿಕ್‌ ಟನ್‌ ಎಲ್‌ಪಿಜಿ ಅನ್‌ಲೋಡ್

Second world war ship
Image source : DT next
Advertisement

ಮಂಗಳೂರು: ಇರಾನ್‌, ಅಮೆರಿಕ, ಇಸ್ರೇಲ್‌ ನಡುವಿನ ಉದ್ವಿಗ್ನತೆಯ ಕಾರಣದಿಂದ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ನೂರಾರು ತೈಲ ಮತ್ತು ಎಲ್‌ಪಿಜಿ ಸಾಗಿಸುತ್ತಿದ್ದ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ಆದರೆ ಭಾರತದ ರಾಜತಾಂತ್ರಿಕ ಪ್ರಯತ್ನಗಳ ಕಾರಣದಿಂದ ಇರಾನ್‌ ಈಗಾಗಲೇ ನಾಲ್ಕು ಹಡಗುಗಳಿಗೆ ಅನುಮತಿ ನೀಡಿತ್ತು. ಅವುಗಳಲ್ಲಿ ಎರಡು ಹಡಗುಗಳು ಈಗಾಗಲೇ ಭಾರತ ತಲುಪಿದೆ.

Sponsored

ಮಾ.12 ರಂದು ಕಚ್ಚಾ ತೈಲ ಹೊತ್ತ ಮೊದಲ ಹಡಗು ಮುಂಬೈ ತಲುಪಿತ್ತು. ಇದೀಗ ಮಾ.16 ರಂದು ಎಲ್‌ಪಿಜಿ ಸಾಗಿಸುತ್ತಿದ್ದ ʼಶಿವಾಲಿಕ್‌ʼ ಹಡಗು ಗುಜರಾತ್‌ನ ಮುಂದ್ರಾ ಬಂದರಿಗೆ ಬಂದಿದ್ದು, ಇದರಲ್ಲಿ ಒಟ್ಟು 46 ಸಾವಿರ ಮೆಟ್ರಿಕ್‌ ಟನ್‌ ಎಲ್‌ಪಿಜಿ ಇದ್ದು, ಸುಮಾರು 20 ಸಾವಿರ ಮೆಟ್ರಿಕ್‌ ಟನ್‌ ಮುಂದ್ರಾ ಬಂದರ್‌ನಲ್ಲಿ ಅನ್‌ಲೋಡ್‌ ಮಾಡಲಾಗಿದೆ. ಉಳಿದ 26 ಸಾವಿರ ಮೆಟ್ರಿಕ್‌ ಟನ್‌ ಎಲ್‌ಪಿಜಿಯನ್ನು ಇಂದೇ ಮಂಗಳೂರಿಗೆ ಬಂದರಿಗೆ ತಂದು ಅನ್‌ಲೋಡ್‌ ಮಾಡುವ ಸಾಧ್ಯತೆ ಇದೆ.

Advertisement
Advertisement

ಇದರ ಜೊತೆಗೆ ʼನಂದಾದೇವಿʼ ಮತ್ತು ʼಜಗ್‌ ಲಾಡ್ಕಿʼ ಎನ್ನುವ ಇನ್ನೆರಡು ಹಡಗುಗಳು ಭಾರತ ತಲುಪುವ ಸಾಧ್ಯತೆ ಇದೆ. ನಂದಾದೇವಿ ಹಡಗಿನಲ್ಲಿ 40 ಸಾವಿರ ಮೆಟ್ರಿಕ್‌ ಟನ್‌ ಎಲ್‌ಪಿಜಿ ಇದ್ದು, ಜಗ್‌ ಲಾಡ್ಕಿ ಹಡಗು ಸುಮಾರು 81 ಸಾವಿರ ಟನ್‌ ಕಚ್ಚಾ ತೈಲವನ್ನು ಹೊಂದಿದೆ.

ಪೆಟ್ರೋಲಿಯಂ ಡೀಲರ್ಸ್‌ಗಳ ಅಂದಾಜಿನ ಅನುಸಾರ ಒಟ್ಟು ಸುಮಾರು 92,700 ಮೆಟ್ರಿಕ್‌ ಟನ್‌ ಎಲ್‌ಪಿಜಿ ಲಭ್ಯವಾಗಲಿದ್ದು, ಇದು ದೇಶದ ಅವಶ್ಯಕತೆಗೆ ಕೇವಲ ಎರಡು ದಿನಗಳ ಮಟ್ಟಿಗೆ ಮಾತ್ರ ಸಾಕಾಗಬಹುದು ಎನ್ನಲಾಗಿದೆ.

Advertisement
div class="ere-sticky">