ಶನಿವಾರ, 24 ಅಕ್ಟೋಬರ್ 2026

ಕೇರಳದಲ್ಲಿ ಭಾರೀ ಮಳೆ, ಭೂಕುಸಿತ, ಮೂವರ ಸಾವು

ಇಡುಕ್ಕಿ, ಆಗಸ್ಟ್‌ 1: ಕೇರಳದಲ್ಲಿ ಭಾರೀ ಮಳೆ ಉಂಟಾಗಿದ್ದು, ಹಲವು ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಸಂಭವಿಸಿದ ಪ್ರತ್ಯೇಕ ಭೂಕುಸಿತಗಳಲ್ಲಿ ಮೂವರು ಮೃತಪಟ್ಟಿದ್ದು ಹಲವು ಮಂದಿ ಮಣ್ಣಿನಡಿ ಸಿಲುಕಿಕೊಂಡಿರುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂದು (ಶನಿವಾರ) ಮುಂಜಾನೆ ಇಡುಕ್ಕಿ ಜಿಲ್ಲೆಯ ಕೂಡಯತ್ತೂರು ಸಮೀಪದ ಆದೂರ್ಮಲ ಪ್ರದೇಶದಲ್ಲಿ ಭೂಕುಸಿತ ಉಂಟಾಗಿ ಸುಮತಿ ಎನ್ನುವವರು ಮೃತ ಹೊಂದಿದ್ದಾರೆ. ಸ್ಥಳೀಯ ಮಂದಿ ಅವರ ಪತಿ ಹಾಗೂ ಪುತ್ರನನ್ನು ರಕ್ಷಣೆ ಮಾಡಿದ್ದು, ಇಬ್ಬರಿಗೂ ಗಾಯಗಳಾಗಿದೆ. ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಎನ್‌ಡಿಆರ್‌ಎಫ್‌, ಅಗ್ನಿಶಾಮಕ ಮತ್ತು ರಕ್ಷಣ ಸಿಬ್ಬಂದಿ, ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ನಡೆಸಿದ ಶೋಧ ಕಾರ್ಯದಲ್ಲಿ ಸುಮತಿ ಅವರ ಮೃತದೇಹ ಪತ್ತೆಯಾಗಿದೆ. ಮನೆ ಸಂಪೂರ್ಣ ಹಾನಿಗೊಳಗಾಗಿದೆ.

ಈ ಸಂದರ್ಭದಲ್ಲಿ ಕೊಟ್ಟಾಯಂ ಜಿಲ್ಲೆಯ ಪೂಂಜಾರ್‌ನ ಪಯ್ಯನಿತೊಟ್ಟಂನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಜೋಹ್ನಿ ಅವರ ಪುತ್ರ ಜೋಸೆಫ್‌ ಮೃತ ಹೊಂದಿದ್ದಾರೆ. ಇವರ ತಾಯಿ ಅವಶೇಷಗಳಡಿ ಸಿಲುಕಿರುವ ಶಂಕೆಯಿದ್ದು, ಶೋಧ ಕಾರ್ಯ ಮುಂದುವರಿದಿದೆ. ಜೋಸೆಫ್‌ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಗಾಯಗಳಿಂದಾಗಿ ಮೃತ ಹೊಂದಿದ್ದಾರೆ.