ಬಿಜೆಪಿ ಶಾಸಕಿ ಜೆನ್ನಿಫರ್ ಮಾನ್ಸೆರೇಟ್ ಕೊನೆಯುಸಿರೆಳೆದಿದ್ದಾರೆ. ಗೋವಾ ಸರ್ಕಾರದ ಮಾಜಿ ರಾಜ್ಯ ಕ್ಯಾಬಿನೆಟ್ ಸಚಿವೆಯೂ ಆಗಿದ್ದ ಜೆನ್ನಿಫರ್ ಮಾನ್ಸೆರೇಟ್, ತಮ್ಮ 56ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಜೆನ್ನಿಫರ್ ಮಾನ್ಸೆರೇಟ್ ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೆನ್ನಿಫರ್, ಇಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಅಂತ ಮೂಲಗಳು ತಿಳಿಸಿವೆ.
ಉತ್ತರ ಗೋವಾ ಜಿಲ್ಲೆಯ ತಲೈಗಾವೊ ವಿಧಾನಸಭಾ ಕ್ಷೇತ್ರವನ್ನುಅವರು ಪ್ರತಿನಿಧಿಸುತ್ತಿದ್ದರು. ಜೆನ್ನಿಫರ್ ಮಾನ್ಸೆರಾಟ್ಟೆ 2012 ರಿಂದ ತಲೈಗಾವೊ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಮೂರು ಭಾರಿ ಅವರು ಶಾಸಕಿಯಾಗಿದ್ದರು. 2019 ರಲ್ಲಿ ಅವರಿಗೆ ಸಚಿವೆ ಸ್ಥಾನ ಸಹ ಲಭಿಸಿತ್ತು. 2019 ರಲ್ಲಿ ಬಿಜೆಪಿಗೆ ಸೇರ್ಪಡೆಯಾದ 10 ಕಾಂಗ್ರೆಸ್ ಶಾಸಕರಲ್ಲಿ ಅವರು ಜೆನ್ನಿಫರ್ ಸಹ ಒಬ್ಬರು. ಅವರ ನಿಧನಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂತಾಪ ಸೂಚಿಸಿದ್ದಾರೆ.
ಜೆನ್ನಿಫರ್ ಅವರ ಪತಿ ಅಟನಾಸಿಯೊ ಮಾನ್ಸೆರಾಟ್ಟೆ ಸಚಿವರಾಗಿದ್ದಾರೆ ಮತ್ತು ಅವರ ಮಗ ರೋಹಿತ್ ಮಾನ್ಸೆರಾಟ್ಟೆ ಪಣಜಿ ನಗರ ಪಾಲಿಕೆಯ ಮೇಯರ್ ಆಗಿದ್ದಾರೆ.


