ಭಾನುವಾರ, 25 ಅಕ್ಟೋಬರ್ 2026
Trending

ಮೆಟ್ರೋ ಮಹಿಳಾ ಶೌಚಾಲಯದಿಂದ ಬರುತ್ತಿತ್ತು ಗಬ್ಬು ವಾಸನೆ – ಬಾಗಿಲು ಒಡೆದ ಪೊಲೀಸರಿಗೆ ಕಾದಿತ್ತು ಶಾಕ್

ದೆಹಲಿಯ ಇಂದ್ರಲೋಕ್ ಮೆಟ್ರೋ ನಿಲ್ದಾಣದ ಮಹಿಳಾ ಶೌಚಾಲಯದಲ್ಲಿ ದುರ್ವಾಸನೆ ಬರುತ್ತಿದ್ದ ಕಾರಣ ಬಾಗಿಲು ಒಡೆದು ನೋಡಿದ ಪೊಲೀಸರಿಗೆ ಶಾಕ್ ಎದುರಾಗಿದೆ.

Sponsored

ಯಸ್, ದೆಹಲಿಯ ಇಂದ್ರಲೋಕ್ ಮೆಟ್ರೋ ನಿಲ್ದಾಣದಲ್ಲಿ ಶನಿವಾರ ಸಂಜೆ 5:33 ರ ಸುಮಾರಿಗೆ ಮಹಿಳಾ ಶೌಚಾಲಯವನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು. ಬಳಿಕ ಶೌಚಾಲಯದಿಂದ ಕೊಳೆತ ದುರ್ವಾಸನೆ ಬರುತ್ತಿದೆ ಎಂದು ವರದಿ ಬಂದ ನಂತರ ಶೌಚಾಲಯದ ಬಾಗಿಲು ಮುರಿದು ನೋಡಿದಾಗ ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

ಕೆಲ ಮಾಹಿತಿಯ ಪ್ರಕಾರ ಮೃತ ವ್ಯಕ್ತಿ ಶೌಚಾಲಯದ ಮೇಲ್ವಿಚಾರಣೆ ಮಾಡುತ್ತಿದ್ದ ವ್ಯಕ್ತಿಯಾಗಿದ್ದು, ಕಳೆದೆರಡು ದಿನಗಳಿಂದ ಆತ ಕಾಣಿಸುತ್ತಿರಲಿಲ್ಲ. ಘಟನಾ ಸ್ಥಳಕ್ಕೆ ಅಪರಾಧದಳದ ಸಿಬ್ಬಂದಿಯನ್ನು ಕರೆಸಿ ಮಾಹಿತಿ ಸಂಗ್ರಹಿಸಲಾಗಿದೆ. ನಂತರ ಮೃತದೇಹವನ್ನು ಸಮೀಪದ ಬಿಎಸ್‌ಎ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗುತ್ತಿದ್ದು, ಅಲ್ಲಿ 72 ಗಂಟೆಗಳ ಕಾಲ ಅವರ ಶವವನ್ನು ಸಂರಕ್ಷಿಸುವ ಸಾಧ್ಯತೆ ಇದೆ. ಮೆಟ್ರೋ ಅಧಿಕಾರಿಗಳ ಸಹಾಯದಿಂದ ವ್ಯಕ್ತಿಯ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.