ಸೋಮವಾರ, 26 ಅಕ್ಟೋಬರ್ 2026
Trending

ಈ ನಾಲ್ಕು ರಾಶಿಯವರಿಗೆ ಈ ಉಂಗುರ ಬೆಸ್ಟ್ | ಅದೃಷ್ಟ ನಿಮ್ಮ ಕಾಲ ಬುಡದಲ್ಲಿ!

Advertisement

ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರವು ಮಹತ್ವದ ಸ್ಥಾನವನ್ನು ಪಡೆದಿದೆ. ಈ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಾನವನ ಬದುಕಿನ ಆಗು ಹೋಗುಗಳ ಕುರಿತು ಅನೇಕ ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಜೊತೆಗೆ ಇದು ಮುಂಬರುವ ದಿನಗಳ ಸಮಸ್ಯೆಯ ಬಗ್ಗೆ ಎಚ್ಚರವನ್ನು , ಪರಿಹಾರವನ್ನೂ ನೀಡುತ್ತದೆ. ಅಲ್ಲದೇ ತಮ್ಮ ಅದೃಷ್ಟದ ಸಂಕೇತಗಳನ್ನೂ ಗೊತ್ತು ಮಾಡಿ, ಯಾವ ರಾಶಿಯ ಜನರಿಗೆ ಯಾವ ದಿನಗಳು, ಯಾವ ಬಣ್ಣಗಳು, ಎಂತಹ ಲೋಹಗಳು ಅದೃಷ್ಟಶಾಲಿ ಎಂಬುವುದನ್ನು ತಿಳಿಸುತ್ತದೆ. ಅಂತೆಯೇ ಈ ನಿಟ್ಟಿನಲ್ಲಿ ಕೆಲವು ರಾಶಿಯವರು ಚಿನ್ನ ಧರಿಸಿದರೆ ಅದೃಷ್ಟ ತಂದುಕೊಡುತ್ತದೆಯಂತೆ. ಹಾಗಿದ್ದರೆ ಯಾವ ರಾಶಿಯವರಿಗೆ ಚಿನ್ನ ಧರಿಸುವುದು ಅದೃಷ್ಟ ನೀಡುತ್ತೆ? ಯಾರು ಚಿನ್ನವನ್ನು ಧರಿಸಬಾರದು ಎಂಬುದರ ಮಾಹಿತಿ ಇಲ್ಲಿದೆ.

Sponsored

ಬಂಗಾರವನ್ನು ಧರಿಸುವುದರಿಂದ ಆಧ್ಯಾತ್ಮಿಕವಾಗಿ ಮತ್ತು ಆರೋಗ್ಯಕರವಾಗಿ ವಿವಿಧ ಪ್ರಯೋಜನಗಳನ್ನು ಪಡೆಯಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತೋರು ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದ ನಮ್ಮ ಗಮನ ಹೆಚ್ಚುತ್ತದೆ ಮತ್ತು ರಾಜಯೋಗ ಪ್ರಾಪ್ತವಾಗಲು ಸಹಕಾರಿಯಾಗುತ್ತದೆ. ಉಂಗುರದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದ ಸಂತೋಷವನ್ನು ನೀಡುತ್ತದೆ, ಮಕ್ಕಳ ಸಂತೋಷದಲ್ಲಿ ಬರುವ ಅಡೆತಡೆಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ, ಧನಲಾಭ ಮತ್ತು ವೃತ್ತಿ ಪ್ರಗತಿಯನ್ನು ಕೂಡಾ ಸಾಧಿಸಬಹುದು ಎಂದು ಹೇಳಲಾಗುತ್ತದೆ. ನೆಗಡಿ ಮತ್ತು ಉಸಿರಾಟದ ಕಾಯಿಲೆಗಳನ್ನು ತೊಡೆದುಹಾಕಲು ಕಿರುಬೆರಳಿಗೆ ಚಿನ್ನದ ಆಭರಣಗಳನ್ನು ಧರಿಸಿದರೆ ಪ್ರಯೋಜನ ಪಡೆಯಬಹುದು.

Advertisement
Advertisement

ಚಿನ್ನದ ಉಂಗುರ ಈ ರಾಶಿಯವರ ಅದೃಷ್ಟವನ್ನು ಹೆಚ್ಚಿಸುತ್ತದೆ
ಸಿಂಹ ರಾಶಿ:- ಸಿಂಹ ರಾಶಿಯವರಿಗೆ ಚಿನ್ನದ ಉಂಗುರ ಅತ್ಯಂತ ಮಂಗಳಕರ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಿನ್ನದ ಚಿಹ್ನೆಯಾದ ಗುರುವು ಸಿಂಹ, ಅಗ್ನಿ ರಾಶಿ ಮತ್ತು ಸೂರ್ಯ ಅಧಿಪತಿಗೆ ಸ್ನೇಹಪರವಾಗಿದೆ. ಆದ್ದರಿಂದ, ಈ ರಾಶಿಚಕ್ರ ಚಿಹ್ನೆಗಳು ಚಿನ್ನವನ್ನು ಧರಿಸುವುದರಿಂದ, ಅವರ ಶಕ್ತಿ ಮತ್ತು ಉತ್ಸಾಹವು ಹೆಚ್ಚಾಗುತ್ತದೆ ಮತ್ತು ಅವರು ಎಲ್ಲಾ ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.

ಕನ್ಯಾ ರಾಶಿ:- ಕನ್ಯಾ ರಾಶಿಯಲ್ಲಿ ಜನಿಸಿದವರು ಚಿನ್ನದ ಉಂಗುರವನ್ನು ಧರಿಸಿದರೆ, ಅವರ ಬಯಕೆಗಳು ಕ್ರಮೇಣ ಈಡೇರುತ್ತವೆ. ಅವರ ಜೀವನವು ಸಮೃದ್ಧವಾಗಿರುತ್ತದೆ. ಚಿನ್ನದ ಉಂಗುರವನ್ನು ಧರಿಸಲು ಸಾಧ್ಯವಾಗದಿದ್ದರೆ, ಚಿನ್ನದ ಸರ ಅಥವಾ ಬಳೆಯಾಗಿ ಧರಿಸಬಹುದು. ಯಾವುದೇ ಆಭರಣ ಧರಿಸಿದರೂ ಅದೃಷ್ಟ ಅವರ ಕೈಹಿಡಿಯುತ್ತದೆ.

ತುಲಾ ರಾಶಿ:- ತುಲಾ ರಾಶಿಯ ಜನರಿಗೂ ಚಿನ್ನ ಶುಭ ಫಲವನ್ನೇ ನೀಡುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಿನ್ನದ ಉಂಗುರವು ತುಲಾ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯುತ್ತದೆ. ಈ ರಾಶಿಯ ಅಧಿಪತಿ ಶುಕ್ರ. ಚಿನ್ನ ಶುಕ್ರನಿಗೆ ಲಾಭದಾಯಕ ಎಂದು ಹೇಳಲಾಗುತ್ತದೆ.

ಮೀನ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನವನ್ನು ಧರಿಸುವುದು ಮೀನ ರಾಶಿಯವರಿಗೆ ಕೂಡಾ ಅತ್ಯಂತ ಶುಭ. ಚಿನ್ನವನ್ನು ಧರಿಸುವುದು ಈ ರಾಶಿಯವರಿಗೆ
ಮಂಗಳಕರ ಲಾಭವನ್ನು ನೀಡುತ್ತದೆ.ಇವರು ಚಿನ್ನ ಧರಿಸಿದರೆ ಜೀವನದಲ್ಲಿ ಎದುರಾಗುವ ಅಡೆತಡೆಗಳು ನಿರ್ಣಾಮವಾಗುತ್ತದೆಯಂತೆ.

Advertisement
div class="ere-sticky">