ವಿಟ್ಲ: ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಸಾಗಿಸುತ್ತಿದ್ದ ಲಾರಿಯೊಂದರನ್ನು ವಿಟ್ಲ ಠಾಣಾ ಪೊಲೀಸರು ಸಾಲೆತ್ತೂರು ಚೆಕ್ ಪೋಸ್ಟ್‌ನಲ್ಲಿ ತಡೆದು ವಶಪಡಿಸಿರುವ ಘಟನೆ ನಡೆದಿದೆ.
Sponsoredಆ.7 ರ ರಾತ್ರಿ ವಿಟ್ಲ ಪೊಲೀಸರು ಸಾಲೆತ್ತೂರು ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದು, ಮರುದಿನ ಬೆಳಿಗ್ಗೆ ಆನೆಕಲ್ಲು ಕಡೆಯಿಂದ ಬಂದ ಲಾರಿಯನ್ನು ತಡೆದು ತಪಾಸಣೆ ಮಾಡಿದಾಗ ಅದರಲ್ಲಿ ಅಕ್ರಮವಾಗಿ ಸುಮಾರು 200 ಕೆಂಪು ಕಲ್ಲುಗಳನ್ನು ಲೋಡ್ ಮಾಡಿರುವುದಾಗಿ ಕಂಡು ಬಂದಿದೆ.
ಈ ಕುರಿತು ಲಾರಿ ಚಾಲಕನನ್ನು ವಿಚಾರಿಸಿದಾಗ, ಕಲ್ಲು ಸಾಗಾಟಕ್ಕೆ ಬೇಕಾದ ಪರವಾನಿಗೆ ಅಧಿದೃತ ದಾಖಲೆಗಳನ್ನು ಹಾಜರುಪಡಿಸಲು ಸೂಚಿಸಿದಾಗ, ಚಾಲಕನ ಬಳಿ ಯಾವುದೇ ದಾಖಲೆಗಳು ಇಲ್ಲದಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.



