ಬೆಂಗಳೂರು: ನಗರದ ಎಚ್‌ಎಸ್‌ಆರ್ ಲೇಔಟ್‌ನ 6ನೇ ಸೆಕ್ಟರ್‌ನಲ್ಲಿರುವ ಪ್ರತಿಷ್ಠಿತ ಐಪಿಎಸ್ ಲೇಔಟ್‌ನ ಸಿ-9 ಸರ್ವಿಸ್ ವಿಲ್ಲಾದಲ್ಲಿ ಭರ್ಜರಿ ರೇವ್ ಪಾರ್ಟಿ ನಡೆದಿದ್ದು, ಸಿಸಿಬಿಯ ಮಹಿಳಾ ಘಟಕದ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಿಢೀರ್ ದಾಳಿ ಮಾಡಿದ್ದಾರೆ.
Sponsoredಪೊಲೀಸರ ರೇಡ್ ಬೆದರಿಕೆಯಿಂದ ಪಾರಾಗಲು ಐಪಿಎಸ್ ಲೇಔಟ್ ಸುರಕ್ಷಿತ ಎಂದು ಭಾವಿಸಿದ್ದ ಆಯೋಜಕರು, ಅಮಿಗೋಸ್ ಆಪ್ ಮೂಲಕ ಯುವಕ ಯುವತಿಯರನ್ನು ಆಹ್ವಾನಿಸಿದ್ದು, ಪಾರ್ಟಿಗೆ ಯುವಕರಿಗೆ 1099ರೂ, ಹಾಗೂ ಯುವತಿಯರಿಂದ ರೂ.499 ರೂ. ಪ್ರವೇಶ ಶುಲ್ಕವನ್ನು ವಸೂಲಿ ಮಾಡಲಾಗಿತ್ತು. ದಿನಕ್ಕೆ ರೂ.20000 ಬಾಡಿಗೆಗೆ ರೇವ್ ಕೀ ಹಾಸ್ಪಿಟಾಲಿಟಿ ವಿಲ್ಲಾ ಬುಕ್ ಮಾಡಿದ್ದಾರೆ. ರಾತ್ರಿ ಪೂರ್ತಿ ಮದ್ಯ, ನಿಷೇಧಿತ ಹುಕ್ಕಾ ಹಾಗೂ ಇ-ಸಿಗರೇಟ್‌ಗಳೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿದ್ದರು ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪಾರ್ಟಿ ಆಯೋಜನೆ ಮಾಡಿದ್ದ ದೀಕ್ಷಿತ್, ವೇದಾಂತ್ ಪಂಡಿತ್ ಮತ್ತು ಶಂಕರ್ ಎಂಬ ಮೂವರು ಆರೋಪಿಗಳನ್ನು ಸಿಸಿಬಿ ಅರೆಸ್ಟ್ ಮಾಡಿದೆ. ಜೊತೆಗೆ ನಿಯಮ ಉಲ್ಲಂಘನೆ ಮಾಡಿ ವಿಲ್ಲಾ ನೀಡಿದ ಮನೆ ಮಾಲೀಕರ ವಿರುದ್ಧ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದೆ.




