ಭಾನುವಾರ, 1 ನವೆಂಬರ್ 2026

ಚಿಕಿತ್ಸೆಗೆ ಬಂದ ಬಾಲಕಿಯ ಮೇಲೆ ಅತ್ಯಾಚಾರ: 78 ವರ್ಷದ ಮಕ್ಕಳ ತಜ್ಞ ವೈದ್ಯರಿಗೆ 47 ವರ್ಷ ಕಠಿಣ ಕಾರಾಗೃಹ ಶಿಕ್ಷೆ

Paper Leak Law
Advertisement
Advertisement

ಕಾಸರಗೋಡು: ಚಿಕಿತ್ಸಾಲಯಕ್ಕೆಂದು ಬಂದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಕಾಸರಗೋಡಿನ ಮಕ್ಕಳ ತಜ್ಞ ವೈದ್ಯರೊಬ್ಬರಿಗೆ 47 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಕಾಸರಗೋಡು ಜಿಲ್ಲಾ ಆಸ್ಪತ್ರೆಯ ಅಧೀಕ್ಷಕರಾಗಿ ನಿವೃತ್ತಗೊಂಡಿದ್ದ ಡಾ.ಪಿ.ಕೃಷ್ಣನ್‌ (78) ಶಿಕ್ಷೆಗೊಳಗಾದವರು.

Sponsored

ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಾಗುವುದರಿಂದ ಆರೋಪಿ 20 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯವು ತಿಳಿಸಿದೆ.

Advertisement
Advertisement

2020 ಜೂನ್‌ 25 ರಂದು ಈ ಘಟನೆ ನಡೆದಿತ್ತು. ಕಾಲಿನಲ್ಲಿದ್ದ ಸೋಂಕಿತ ಗಾಯಕ್ಕೆ ಚಿಕಿತ್ಸೆ ಪಡೆಯಲು ಬಾಲಕಿ ತನ್ನ ತಂದೆ ಜೊತೆ ಪೆರಿಯಾದಲ್ಲಿರುವ ವೈದ್ಯರ ಚಿಕಿತ್ಸಾಲಯಕ್ಕೆ ಬಂದಿದ್ದು, ವೈದ್ಯರು ಆಕೆಯನ್ನು ಪರೀಕ್ಷಾ ಕೊಠಡಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಬಾಲಕಿ ಮರುದಿನ ಈ ಘಟನೆಯನ್ನು ತನ್ನ ಪೋಷಕರಿಗೆ ತಿಳಿಸಿದ್ದಾಳೆ.

Advertisement

ವೈದ್ಯರಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, ಅಲ್ಲದೆ ಪೋಕ್ಸೋ ಕಾಯ್ದೆಯ ಸೆಕ್ಷನ್‌ ಜೊತೆಗೆ ಸೆಕ್ಷನ್‌ 10 ರ ಅಡಿ ಇನ್ನೂ ಏಳು ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯವು ಒಟ್ಟು 1.25 ಲಕ್ಷ ರೂ ದಂಡವನ್ನೂ ವಿಧಿಸಿದೆ. ದಂಡ ಪಾವತಿಸಲು ವಿಫಲರಾದರೆ ಹೆಚ್ಚುವರಿಯಾಗಿ 18 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ತೀರ್ಪು ಪ್ರಕಟವಾದ ನಂತರ ಅವರನ್ನು ವಶಕ್ಕೆ ಪಡೆದು ಜೈಲಿಗೆ ಕಳುಹಿಸಲಾಗಿದೆ.

Advertisement
Advertisement