ಶನಿವಾರ, 24 ಅಕ್ಟೋಬರ್ 2026

ಸಾಕು ನಾಯಿಯನ್ನು ಉರಿಬಿಸಿಲಿನಲ್ಲಿ ಕಟ್ಟಿದ ಮಾಲೀಕ: ಬಿತ್ತು ಭಾರೀ ದಂಡ

Children Marriage with Dogs

ಸುಡುವ ಬಿಸಿಲಿನಲ್ಲಿ ತನ್ನ ಸಾಕು ನಾಯಿಯನ್ನು ಹೊರಗಡೆ ಕಟ್ಟಿಹಾಕಿ ಹಿಂಸೆ ನೀಡಿದ ವ್ಯಕ್ತಿಯೋರ್ವನಿಗೆ ಸ್ಥಳೀಯ ಆಡಳಿತವು ರೂ.1000 ದಂಡವನ್ನು ವಿಧಿಸಿದೆ. ಈ ಘಟನೆ ಫರಿದಾಬಾದ್‌ನಲ್ಲಿ ನಡೆದಿದೆ.

ತಾಪಮಾನವು ಇತ್ತೀಚಿನ ದಿನಗಳಲ್ಲಿ ಭಾರೀ ಏರುತ್ತಿದ್ದು, ಮನುಷ್ಯರೇ ಮನೆಯಿಂದ ಹೊರಗೆ ಬರಲು ಆಗದ ಸಂದರ್ಭದಲ್ಲಿ ಫರಿದಾಬಾದ್‌ನ ನಿವಾಸಿಯೊಬ್ಬರು ತೀವ್ರವಾದ ಬಿಸಿಲಿನಲ್ಲಿ ತಮ್ಮ ಸಾಕು ನಾಯಿಯನ್ನು ಮನೆಯ ಹೊರಭಾಗದಲ್ಲಿ ಕಟ್ಟಿ ಹಾಕಿದ್ದು, ಬಿಸಿಲ ಧಗೆಗೆ ನಾಯಿ ತತ್ತರಿಸುವುದನ್ನು ಕಂಡ ಸ್ಥಳೀಯರು ಮತ್ತು ಪ್ರಾಣಿ ಹಿತರಕ್ಷಣಾ ಕಾರ್ಯಕರ್ತರು ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರನ್ನು ನೀಡಿದ್ದರು.

ದೂರಿನ ಆಧಾರದ ಮೇಲೆ ಸ್ಥಳಕ್ಕೆ ಬಂದ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲನೆ ಮಾಡಿ, ಪ್ರಾಣಿ ದಯಾ ಕಾಯ್ದೆಯಡಿ ಮಾಲೀಕನಿಗೆ ದಂಡ ವಿಧಿಸಿದ್ದಾರೆ.