ಮಂಗಳೂರಿನ ಅಳಕೆ ಕಂಬ್ಲ ಕ್ರಾಸ್ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್ ಒಂದಕ್ಕೆ ಹಾಡು ಹಗಲೇ ನುಗ್ಗಿದ ಕಳ್ಳರು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಸೆಪ್ಟೆಂಬರ್ 28ರಂದು ನಡೆದಿದೆ.

ಅಳಕೆ ಕಂಬ್ಲ ಕ್ರಾಸ್ ರಸ್ತೆಯ ‘ಸಹಯೋಗ್ ರೆಸಿಡೆನ್ಷಿಯಲ್ ಕಾಂಪ್ಲೆಕ್ಸ್’ ಎ-ವಿಂಗ್‌ನ ಫ್ಲ್ಯಾಟ್ ನಂಬರ್ 202ರ ನಿವಾಸಿ ವರ್ಷಾಬೆನ್ ಮಿಥಾಲ್‌ಭಾಯ್ ಎಂಬವರು ತಮ್ಮ ಮಗನೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಸೆಪ್ಟೆಂಬರ್ 28ರಂದು ಮಧ್ಯಾಹ್ನ 3:00 ಗಂಟೆಗೆ ಮಂಗಳೂರು ಕಾರ್ ಸ್ಟ್ರೀಟ್ ನ ಟೈಲರ್ ಅಂಗಡಿಗೆ ಮನೆಗೆ ಬೀಗ ಹಾಕಿ ತೆರಳಿದ್ದರು. ಬಳಿಕ ಸಂಜೆ 5:10 ಗಂಟೆಗೆ ವಾಪಸ್ ಮನೆಗೆ ಬಂದಾಗ, ಮನೆಯ ಮುಖ್ಯ ಬಾಗಿಲಿನ ಬೀಗವನ್ನು ಒಡೆದಿರುವುದು ಕಂಡುಬಂದಿದೆ. ಮನೆ ಪ್ರವೇಶಿಸಿ ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಸುಮಾರು 181 ಗ್ರಾಂ ತೂಕದ ಚಿನ್ನಾಭರಣಗಳು (ಮೌಲ್ಯ ₹ 14,50,000/-) ನಗದು: ₹ 42,000/- ಗಡಿಯಾರಗಳು: 2 ಫಾಸ್ಟ್‌ಟ್ರ್ಯಾಕ್ ವಾಚ್‌ಗಳು (ಮೌಲ್ಯ ₹ 8,600/-) ಹಾಗೂ 1 ಟೈಟಾನ್ ವಾಚ್ (ಮೌಲ್ಯ ₹ 4,100/-) ಇತರ: ₹ 500/- ಮೌಲ್ಯದ ನೀಲಿ ಬಣ್ಣದ ಸೂಟ್‌ಕೇಸ್ ಒಟ್ಟಾರೆಯಾಗಿ ₹ 15 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತುಗಳನ್ನು ಕಳ್ಳರು ದೋಚಿದ್ದಾರೆ. ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.