ಮಂಗಳೂರು: ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕ ಎಂಬಲ್ಲಿ ಅಕ್ರಮವಾಗಿ ನೆಲೆಸಿ, ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಸುರತ್ಕಲ್ ಪೊಲೀಸರು ಶುಕ್ರವಾರ ಕಾರ್ಯಾಚರಣೆ ನಡೆಸಿದ ಪತ್ತೆ ಹಚ್ಚಿದ್ದಾರೆ.
Sponsoredಪತ್ತೆಯಾದ ಆರು ಮಂದಿ ಬಾಂಗ್ಲಾ ಪ್ರಜೆಗಳ ಸಂಪೂರ್ಣ ವಿವರ ಹಾಗೂ ಅವರ ವಿರುದ್ಧದ ತನಿಖಾ ವರದಿಯನ್ನು ಮಂಗಳೂರು ನಗರ ಪೊಲೀಸರು ಈಗಾಗಲೇ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ ಸಲ್ಲಿಕೆ ಮಾಡಿದ್ದಾರೆ.
Marriage AdSponsoredಈ ಕುರಿತು ಮಾಹಿತಿ ನೀಡಿರುವ ಮಂಗಳೂರು ಪೊಲೀಸ್ ಕಮಿಷನರ್ ಅವರು, ವಶಕ್ಕೆ ಪಡೆದಿರುವ ವಿದೇಶಿ ಪ್ರಜೆಗಳನ್ನು ಸದ್ಯದಲ್ಲೇ ಭಾರತದಿಂದ ಕಾನೂನುಬದ್ಧವಾಗಿ ತಾಯ್ನಾಡಿಗೆ ಗಡಿಪಾರು ಮಾಡುವ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು ಎಂದು ವರದಿಯಾಗಿದೆ.




