ನವದೆಹಲಿ: ಸರತಿ ಸಾಲಿನಲ್ಲಿ ಕಾಯುತ್ತಿರದ್ದ ಇತರೆ ಗ್ರಾಹಕರ ಮುಂದೆ ಜಿಲೇಬಿ ನೀಡಲು ನಿರಾಕರಿಸಿದ ವ್ಯಾಪಾರಿಯನ್ನು ಗುಂಡಿಕ್ಕಿ ಕೊಂದ ವ್ಯಕ್ತಿಗೆ ದೆಹಲಿ ನ್ಯಾಯಾಲಯವು 12 ವರ್ಷಗಳ ಬಳಿಕ ಜೀವಾವಧಿ ಶಿಕ್ಷೆ ವಿಧಿಸಿದೆ.
ನೀರಜ್ ಎನ್ನುವ ಆರೋಪಿ ಜೀವಾವಧಿ ಶಿಕ್ಷೆಗೆ ಒಳಪಟ್ಟ ವ್ಯಕ್ತಿ.
2014 ರ ಫೆ.18 ರಂದು ಇಲ್ಲಿನ ಬಾಂಗ್ಲಾ ಸಾಹಿಬ್ ಗುರುದ್ವಾರ ಬಳಿಯ ಸಿಹಿತಿಂಡಿ ಅಂಗಡಿಯಲ್ಲಿ ವ್ಯಾಪಾರಿ ವ್ಯಕ್ತಿಗೆ ಸರತಿ ಸಾಲಿನಲ್ಲಿ ನಿಲ್ಲಲು ಸೂಚಿಸಿದಾಗ ನೀರಜ್ ನಿರಾಕರಿಸಿದ್ದು, ವ್ಯಾಪಾರಿಯ ಕೆನ್ನೆಗೆ ಬಾರಿಸಿದ್ದು, ಪಿಸ್ತೂಲು ತೆಗೆದುಕೊಂಡು ಆತನ ತಲೆಗೆ ಗುಂಡು ಹಾರಿಸಿದ್ದಾನೆ.
2014 ರಿಂದ ನಡೆದ ಸುದೀರ್ಘ ವಿಚಾರಣೆಯ ನಂತರ ಇದೀಗ ಕೋರ್ಟ್ ಆರೋಪಿಗೆ ಜೀವಿತಾವಧಿ ಶಿಕ್ಷೆಯನ್ನು ವಿಧಿಸಿದೆ.



