ಬೆಂಗಳೂರು: ಶುಕ್ರವಾರ ರಾತ್ರಿ ಎಚ್‌ಎಎಲ್ ಮುಖ್ಯರಸ್ತೆಯ ಪೆಟ್ರೋಲ್ ಬಂಕ್ ಬಳಿ, ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದ ಆರ್ಕೆಸ್ಟ್ರಾ ಕಾರ್ಯಕ್ರಮ ನೋಡುತ್ತಿದ್ದ ವೇಳೆ, ರಸ್ತೆಬದಿ ವಿದ್ಯುತ್ ಕಂಬ ಏಕಾಏಕಿ ಬಿದ್ದ ಪರಿಣಾಮ ನೇಪಾಳ ಮೂಲದ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


ನೇಪಾಳ ಮೂಲದ 26 ವರ್ಷದ ಯುವಕ ಮೃತ ವ್ಯಕ್ತಿ. ಈತನ ಗುರುತು ಪತ್ತೆಯಾಗಿಲ್ಲ. ವಿದ್ಯುತ್ ಕಂಬ ತುಂಬಾ ಹಳೆಯದಾಗಿದ್ದು, ವಿದ್ಯುತ್ ಸಂಪರ್ಕ ಇರಲಿಲ್ಲ. ಕಂಬ ಹಾಗೇ ಇತ್ತು. ಈ ಕುರಿತು ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.