116
ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ನಟಿ ಲಲಿತಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇವರಿಗೆ 65 ವರ್ಷ ವಯಸ್ಸಾಗಿತ್ತು. ಕಳೆದ ಎರಡೂವರೆ ತಿಂಗಳಿನಿಂದ ಸ್ಟ್ರೋಕ್ ಆಗಿದ್ದ ಇವರನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಕಷ್ಟದ ಪರಿಸ್ಥಿತಿಯಲ್ಲಿದ್ದ ಲಲಿತಮ್ಮ ಅವರಿಗೆ ʼಅಮ್ಮನ ಮಡಿಲು ಟ್ರಸ್ಟ್ʼ ಆಸರೆ ನೀಡಿತ್ತು.


ಲಲಿತಮ್ಮ ಅವರು ಸುಂಟರಗಾಳಿ, ಲೈಫ್ ಇಷ್ಟೇನೆ, ಜಂಗ್ಲಿ ಸಿನಿಮಾದಲ್ಲಿ ಅಭಿನಯ ಮಾಡಿದ್ದರು. ಲಲಿತಮ್ಮ ಅವರ ನಿಧನದ ಸುದ್ದಿಯನ್ನು ಆಶ್ರಮದವರು ಖಚಿತ ಪಡಿಸಿದ್ದಾರೆ.