ಶನಿವಾರ, 24 ಅಕ್ಟೋಬರ್ 2026

21 ವರ್ಷ ತುಂಬಲಿ ಈಗ ಮದುವೆ ಬೇಡ ಎಂದ ತಂದೆಯ ಗುಂಡಿಟ್ಟು ಕೊಂದ 18ರ ಮಗ

ಪ್ರೀತಿಸಿದ ಹುಡುಗಿಯನ್ನು ಈ ಕೂಡಲೇ ಮದುವೆ ಮಾಡುವಂತೆ ಪಟ್ಟು ಹಿಡಿದ 18 ವರ್ಷದ ಮಗನಿಗೆ 21 ವರ್ಷ ತುಂಬುವವರೆಗೆ ಕಾಯು ಎಂದು ಹೇಳಿದ ತಂದೆಯನ್ನೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಚಂಢೀಗಢದ ಸೆಕ್ಟರ್‌ 22 ರಲ್ಲಿ ನಡೆದಿದೆ.

ನಿತಿನ್‌ ಸಿಂಗ್‌ ಎಂಬ ಹೆಡ್‌ಕಾನ್ಸ್‌ಸ್ಟೇಬಲ್‌ ಮೃತ ವ್ಯಕ್ತಿ. ಅರ್ಮಾನ್‌ ತಂದೆಯನ್ನೇ ಕೊಲೆಗೈದ ಆರೋಪಿ. ತಂದೆಯನ್ನು ಕೊಲೆ ಮಾಡಿದ ನಂತರ ತನ್ನ ತಾಯಿಯ ಮೇಲೂ ಅರ್ಮಾನ್‌ ಹಲ್ಲೆಗೆ ಯತ್ನ ಯತ್ನಿಸಿದ್ದ. ತಾಯಿ ಹೇಗೋ ಮನೆಯಿಂದ ಓಡಿಬಂದು ನೆರೆಹೊರೆಯವರಿಗೆ ವಿಷಯ ತಿಳಿಸಿ ಪ್ರಾಣ ಉಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಚಂಡೀಗಢ ಪೊಲೀಸರು ಆರೋಪಿ ಅರ್ಮಾನ್‌ ಬಂಧನ ಮಾಡಿದ್ದಾರೆ.