ಶನಿವಾರ, 24 ಅಕ್ಟೋಬರ್ 2026

ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

ಮಂಗಳೂರು; ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2025 ಹಾಗೂ 2026 ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಯನ್ನು ಪ್ರಕಟ ಮಾಡಲಾಗಿದೆ.

2025 ನೇ ಸಾಲಿನ ಗೌರವ ಪ್ರಶಸ್ತಿಗೆ ಪ್ರೊ. ಬಿ.ಶಿವರಾಮ ಶೆಟ್ಟಿ (ಸಾಹಿತ್ಯ/ಸಂಶೋಧನೆ), ಕುಡ್ಡು ಕೊರಗ (ಜಾನಪದ) ಹಾಗೂ ಉಷಾ ಭಂಡಾರಿ ಬೆಂಗಳೂರು (ನಾಟಕ/ಸಿನೆಮಾ) ಅವರು ಆಯ್ಕೆಗೊಂಡಿದ್ದಾರೆ.

2026ನೇ ಸಾಲಿನ ಗೌರವ ಪ್ರಶಸ್ತಿಗೆ ಕೆ.ಪಿ.ರಾವ್‌ (ಸಾಹಿತ್ಯ/ಸಂಶೋಧನೆ), ನೇಮು ಪರವ (ಜಾನಪದ), ಸುಧಾಕರ ಬನ್ನಂಜೆ ಬೆಂಗಳೂರು (ನಾಟಕ/ಸಿನೆಮಾ) ಅವರು ಆಯ್ಕೆಯಾಗಿದ್ದಾರೆ.

ಗೌರವ ಪ್ರಶಸ್ತಿಯು 50 ಸಾವಿರ ರೂ. ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಅ.4 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್‌ ತಿಳಿಸಿದ್ದಾರೆ.