ಶನಿವಾರ, 24 ಅಕ್ಟೋಬರ್ 2026

Ranjani Raghavan : ಹಸಿರು ಸೀರೆ, ಮೂಗುತಿ ತೊಟ್ಟು ಸಿಂಗಾರದ ಫೋಟೋ ಶೂಟ್‌ ಮಾಡಿದ ಕಿರುತೆರೆ ಸ್ಟಾರ್‌ ! ಟ್ರೆಡಿಶನಲ್‌ ಲುಕ್‌ನಲ್ಲಿಯೂ ಮಾಡರ್ನ್‌ ಆಗಿ ಕಂಡ ಕನ್ನಡತಿ!

ಕನ್ನಡತಿ ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್ (Ranjani Raghavan) ಯುಗಾದಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.

Ranjani Raghavan

Ranjani Raghavan: ಕನ್ನಡತಿ ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್ (Ranjani Raghavan) ಯುಗಾದಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಹಸಿರು ಸೀರೆ, ಮೂಗುತಿ ತೊಟ್ಟು ಸಿಂಗಾರದ ಫೋಟೋ ಶೂಟ್‌ Ranjani Raghavan photoshoot) ಮಾಡಿದ್ಧು, ಈ ಮೂಲಕ ಶೋಭಕೃತ್ ನಾಮ ಸಂವತ್ಸರದ ಶುಭಾಶಯಗಳು. ಹೊಸ ವರ್ಷ ಹೊಸ ಹರುಷ ತರಲಿ ಎಂದು ನಟಿ ರಂಜನಿ ರಾಘವನ್ ಪೋಸ್ಟ್ ಹಾಕಿಕೊಂಡಿದ್ದಾರೆ.

ನಟಿ ಕನ್ನಡತಿ ಧಾರವಾಹಿಯಿಂದ (kannadathi serial) ಸಾಕಷ್ಟು ಜನಪ್ರಿಯತೆ ಪಡೆದಿದ್ದು, ಜನಮನಗೆದ್ದಿದ್ದಾರೆ. ಇನ್ನಷ್ಟು ಜನರಿಗೆ ಕನ್ನಡ ಮಾತನಾಡಲು ಹುರುಪು ತುಂಬಿದ್ದಾರೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇರುವ ಕನ್ನಡತಿ ಇದೀಗ ಫೋಟೋವೊಂದನ್ನು ಯುಗಾದಿ ಪ್ರಯುಕ್ತ ಶೇರ್ ಮಾಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

ಈ ಬಾರಿ ರಂಜನಿ ರಾಘವನ್ ಟ್ರೆಡಿಷನಲ್ ಲುಕ್‌ನಲ್ಲಿ ಫೋಟೊಶೂಟ್ ಮಾಡಿಸಿದ್ದಾರೆ. ಹಸಿರು ಸೀರೆಯುಟ್ಟು, ಆಕರ್ಷಣೀಯವಾದ ಮೂಗುತಿ ತೊಟ್ಟು, ಕೈಯಲ್ಲಿ ಪುಸ್ತಕ ಹಿಡಿದು, ಕಿರುನಗೆ ಬೀರಿದ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

ಶಶಾಂಕ್ ಶಿವಪುರಪು ಪರಿಕಲ್ಪನೆಯಲ್ಲಿ ಈ ಫೋಟೊಶೂಟ್ ನಡೆದಿದೆ. ಸ್ಟೈಲಿಂಗ್ ಪೂಜಾನಾಡಿಗ್, ಹೇರ್ ಸ್ಟೈಲ್ ಹಾಗೂ ಮೇಕಪ್ ಯಶಸ್ವಿನಿ ಮಾಡಿದ್ದಾರೆ. ಚಿತ್ರಪ್ರಿಯ ದರ್ಶನಿ ಫೋಟೊ ಕ್ಲಿಕ್ಕಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಹಾಗೇ “ಶೋಭಕೃತ್ ನಾಮ ಸಂವತ್ಸರದ ಶುಭಾಶಯಗಳು. ಹೊಸ ವರ್ಷ ಹೊಸ ಹರುಷ ತರಲಿ” ಎಂದು ಬರೆದಿದ್ದಾರೆ. ನೆಟ್ಟಿಗರು ಕನ್ನಡತಿಯ ಅಂದ ಚೆಂದಕ್ಕೆ, ಅದರಲ್ಲೂ ಸೀರೆಯಲ್ಲಿ ಅಪ್ಪಟ ಕನ್ನಡತಿ ಯಂತೇ ಕಾಣುತ್ತಿದ್ದ ನಟಿಗೆ ನೆಟ್ಟಿಗರು ಮಾರು ಹೋಗಿದ್ದಾರೆ. ವಿಭಿನ್ನ ವಿಭಿನ್ನ ಕಮೆಂಟ್ ಮಾಡಿದ್ದಾರೆ.

ರಂಜನಿ ರಾಘವನ್ ನಟಿ ಮಾತ್ರ ಅಲ್ಲ, ಒಳ್ಳೆಯ ಬರಹಗಾರ್ತಿ ಕೂಡ ಹೌದು. ‘ಕತೆ ಡಬ್ಬಿ (kathe dabbi)’, ‘ಸ್ವೈಪ್ ರೈಟ್’ (swie right) ಪುಸ್ತಕಗಳನ್ನು ಬರೆದಿದ್ದಾರೆ. ಇನ್ನು ಹಲವು ಪುಸ್ತಕಗಳನ್ನು ಬರೆಯಲಿದ್ದಾರೆ. ಸದ್ಯ ‘ಕನ್ನಡತಿ’ ಮುಕ್ತಾಯಗೊಂಡ ಬಳಿಕ ‘ಸತ್ಯಂ’ (sathyam) ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆಯು ಕೆಲವು ಸಿನಿಮಾದಲ್ಲಿ ನಟಿಸಿದ್ದಾರೆ.

 

https://www.instagram.com/p/CqE-QX0pQyX/?igshid=YmMyMTA2M2Y=

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ