Advertisement
Advertisement
ಖ್ಯಾತ ಗಾಯಕ ಹಾಗೂ ರಾಪರ್ ಯೋ ಯೋ ಹನಿ ಸಿಂಗ್ ಅವರ ಸೋದರಳಿಯ ವಿದಿತ್ ಓಲಾಕ್ ಪಂಜಾಬ್‌ನ ಜಲಂಧರ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.
Sponsoredನವೆಂಬರ್ 1 ರಂದು ಮುಂಜಾನೆ ಜಲಂಧರ್‌ನ ಫ್ಲೈಓವರ್ ಮೇಲೆ ವಿದಿತ್ ಓಲಾಕ್ ಹಾಗೂ ಅವರ ಸ್ನೇಹಿತ ಆರ್ವ್ ತಲ್ವಾರ್ ಅವರು ಹುಟ್ಟುಹಬ್ಬದ ಪಾರ್ಟಿ ಮುಗಿಸಿ ವಾಪಸ್ಸಾಗುತ್ತಿದ್ದಾಗ ಇವರು ಪ್ರಯಾಣಿಸುತ್ತಿದ್ದ ಕಾರು ಅತಿವೇಗದಿಂದ ಬಂದು ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್ ಟ್ರೇಲರ್‌ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಹನಿ ಸಿಂಗ್ ಸೋದರಳಿಯ ವಿದಿತ್ ಓಲಾಕ್ ಹಾಗೂ ಅವರ ಸ್ನೇಹಿತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಅನಿರೀಕ್ಷಿತ ದುರ್ಘಟನೆಯಿಂದ ತೀವ್ರವಾಗಿ ನೊಂದಿರುವ ಹನಿ ಸಿಂಗ್, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು, “ಇದು ನನ್ನ ಜೀವನದ ಅತ್ಯಂತ ಕತ್ತಲೆಯಾದ ಹಾಗೂ ಕಷ್ಟದ ದಶಕವಾಗಿದೆ” ಎಂದು ದುಃಖ ವ್ಯಕ್ತಪಡಿಸಿದ್ದಾರೆ.