ಶನಿವಾರ, 24 ಅಕ್ಟೋಬರ್ 2026

ಸೇಡಿಯಾಪು: ರಸ್ತೆಯ ಕಾಂಕ್ರೀಟ್‌ ಎಡ್ಜ್‌ಗೆ ಸಿಲುಕಿ ಟಾಟಾ ಏಎಸ್‌ ಪಲ್ಟಿ

ಉಪ್ಪಿನಂಗಡಿ: ಸೇಡಿಯಾಪಿನ ಕಾಪು ಎಂಬಲ್ಲಿ ಜು.23 ರಂದು ಟಾಟಾ ಏಸ್‌ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ.

ಉಪ್ಪಿನಂಗಡಿಯಿಂದ ಪುತ್ತೂರು ಕಡೆಗೆ ಸಾಗುತ್ತಿದ್ದ ಈ ವಾಹನವು, ಸೇಡಿಯಾಪು ಕಾಪು ತಲುಪಿದಾಗ ರಸ್ತೆಯ ಕಾಂಕ್ರಿಟ್‌ ಬದಿಗೆ ಸಿಲುಕಿದ್ದು, ಮಗುಚಿ ಬಿದ್ದಿದೆ. ಅಪಘಾತದ ತೀವ್ರತೆ ವಾಹನದಲ್ಲಿದ್ದ 12 ವರ್ಷದ ಬಾಲಕನಿಗೆ ಗಾಯಗಳಾಗಿದ್ದು, ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದಿಂದ ಟಾಟಾ ಏಸ್‌ ವಾಹನವು ಜಖಂಗೊಂಡಿದೆ.