Vitla: ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವಿಗೀಡಾದಂತ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ(Vitla)ದಲ್ಲಿ ಬೆಳಕಿಗೆ ಬಂದಿದೆ.
Sponsored
Marriage AdSponsoredಸಾವಿಗೀಡಾದ ವ್ಯಕ್ತಿಯನ್ನು ಕುಡ್ತಡ್ಕ ನಿವಾಸಿ ಸಿಪ್ರಿಯಾನ್ ಮೊಂತೆರೋ (55)ಎಂದು ಗುರುತಿಸಲಾಗಿದೆ. ಸಿಪ್ರಿಯಾನ್ ಸೋಮವಾರದಿಂದ ಮನೆಗೆ ಹೋಗದೇ ನಾಪತ್ತೆಯಾಗಿದ್ದರು ಇಂದು ಬೆಳಗ್ಗೆ ಹುಡುಕಾಡಿದಾಗ ದಾರಿ ಮಧ್ಯದ ತೋಟದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ.
ಬಳಿಕ ಸ್ಥಳಕ್ಕೆ ಫ್ರೆಂಡ್ಸ್ ವಿಟ್ಲದ ಮುರುಳೀಧರ್ ವಿಟ್ಲ ತಂಡದಿಂದ ಕಾರ್ಯಾಚರಣೆ ನಡೆಸಿ ಮೃತದೇಹ ಮೇಲಕ್ಕೆತ್ತಲಾಯಿತು. ವಿಟ್ಲ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





Comments are closed.