Women’s World Cup 2025: ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ಬಹುಮಾನ ಮೊತ್ತ ಘೋಷಣೆ!
Women’s World Cup 2025: ಸೆಪ್ಟೆಂಬರ್ 30 ರಿಂದ ನವೆಂಬರ್ 2ರ ವರೆಗೆ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್ (Womens World Cup 2025) ಟೂರ್ನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ದಾಖಲೆಯ 122.56 ಕೋಟಿ ರೂ. ಮೊತ್ತದ ಬಹುಮಾನ ಘೋಷಿಸಿದೆ
Women’s World Cup 2025: ಸೆಪ್ಟೆಂಬರ್ 30 ರಿಂದ ನವೆಂಬರ್ 2ರ ವರೆಗೆ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್ (Womens World Cup 2025) ಟೂರ್ನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ದಾಖಲೆಯ 122.56 ಕೋಟಿ ರೂ. ಮೊತ್ತದ ಬಹುಮಾನ ಘೋಷಿಸಿದೆ. ಇದು ಈವರೆಗಿನ ಬಹುಮಾನಕ್ಕಿಂತ 297% ಹೆಚ್ಚಳವಾದೆ ಎಂದು ಐಸಿಸಿ ಅಧ್ಯಕ್ಷ ಜಯ್ ಶಾ (Jay Shah) ಮಾಹಿತಿ ಹಂಚಿಕೊಂಡಿದ್ದಾರೆ.
Sponsoredಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಜಯ್ ಶಾ, ವಿಶ್ವಕಪ್ ಬಹುಮಾನದ ಒಟ್ಟು ಮೊತ್ತವನ್ನು 13.88 ಮಿಲಿಯನ್ ಅಂದ್ರೆ ಸರಿಸುಮಾರು 122.55 ಕೋಟಿ ರೂ. ಗಳಿಗೆ ಹೆಚ್ಚಿಸಲಾಗಿದೆ. ಈ ಪೈಕಿ ಪ್ರಶಸ್ತಿ ವಿಜೇಯರಿಗೆ 39.50 ಕೋಟಿ, ರನ್ನರ್ ಅಪ್ಗೆ 19.75 ಕೋಟಿ ಹಾಗೂ ಸೆಮಿಫೈನಲಿಸ್ಟ್ಗೆ 9.89 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಯಾರಿಗೆ ಎಷ್ಟು ಬಹುಮಾನ?
* ವಿಜೇತ ತಂಡಕ್ಕೆ – 39.50 ಕೋಟಿ ರೂ. (4.58 ದಶಲಕ್ಷ ಡಾಲರ್)
* ರನ್ನರ್ ಅಪ್ ತಂಡಕ್ಕೆ 19.75 ಕೋಟಿ ರೂ. (2.24 ದಶಲಕ್ಷ ಡಾಲರ್)
* ಸೆಮಿ ಫೈನಲ್ ತಲುಪುವ ತಂಡಕ್ಕೆ – 9.89 ಕೋಟಿ ರೂ. (1.12 ದಶಲಕ್ಷ ಡಾಲರ್)
* 5 &6ನೇ ಸ್ಥಾನ ಪಡೆದ ತಂಡಕ್ಕೆ – 6.17 ಕೋಟಿ ರೂ. (7,00,000 ಡಾಲರ್)
* ಗುಂಪು ಹಂತದಲ್ಲಿ ಗೆದ್ದ ತಂಡಕ್ಕೆ – 30.25 ಲಕ್ಷ ರೂ. (34,314 ಡಾಲರ್)
* 7-8ನೇ ಸ್ಥಾನ ಪಡೆದ ತಂಡಕ್ಕೆ – 2.46 ಕೋಟಿ ರೂ. (2,80,000 ಡಾಲರ್)
* ಯಾವುದೇ ಪಂದ್ಯ ಗೆದ್ದರೂ, ಗೆಲ್ಲದಿದ್ದರೂ ಪ್ರತಿ ತಂಡಕ್ಕೆ – 2.20 ಕೋಟಿ ರೂ. (2,50,000 ಡಾಲರ್).




