ಮಂಗಳವಾರ, 27 ಅಕ್ಟೋಬರ್ 2026
Trending

ಮೇ 2025

News

Book Release: ಮೇ 31ಕ್ಕೆ ಕಾವೇರಿ ಕಾಲೇಜಿನಲ್ಲಿ ಮೂರು ಪುಸ್ತಕ ಬಿಡುಗಡೆ ಹಾಗೂ ದತ್ತಿನಿಧಿ ಕಾರ್ಯಕ್ರಮ

Book Release: ನಾಡಿನ ಪ್ರತಿಷ್ಠಿತ ಸಾಹಿತ್ಯಿಕ ಸಂಸ್ಥೆಯಾದ ಕೊಡವ ತಕ್ಕ್ ಎಳ್ತ್‌ಕಾರಡ ಕೂಟ ಹಾಗೂ ಗೋಣಿಕೊಪ್ಪ ಕಾವೇರಿ ಕಾಲೇಜಿನ ಜಂಟಿ ಆಶ್ರಯದಲ್ಲಿ ಇದೇ ತಾರೀಖು 31ರ ಶನಿವಾರ ಪೂರ್ವಾಹ್ನ 10-00 ಗಂಟೆಗೆ ಗೋಣಿಕೊಪ್ಪ ಕಾವೇರಿ ಕಾಲೇಜಿನ ಸೆಮಿನಾರ್ ಹಾಲ್'ನಲ್ಲಿ 'ಕೊಡವ ತಕ್ಕ್ ಎಳ್ತ್‌ಕಾರಡ ಕೂಟ'ದ 'ಜನಪ್ರಿಯ ಕೊಡವ ಸಾಹಿತ್ಯ ಮಾಲೆ ಯೋಜನೆ'ಯಲ್ಲಿ ಲೇಖಕಿ ಉಳುವಂಗಡ ಕಾವೇರಿ ಉದಯ ಬರೆದ 190ನೆ ಹೆಜ್ಜೆಯ ಪುಸ್ತಕ, 17 ಲೇಖಕರು ಬರೆದ 191ನೆ ಹೆಜ್ಜೆಯ ಪುಸ್ತಕ ಹಾಗೂ ಲೇಖಕಿ ಕೊಟ್ಟಂಗಡ ಕವಿತ ವಾಸುದೇವ ಬರೆದ 192ನೇ ಹೆಜ್ಜೆಯ ನೂತನ ಮೂರು ಪುಸ್ತಕಗಳನ್ನು ಬಿಡುಗಡೆಗೊಳಿಸುವುದು, ಸಾಹಿತಿ ಮುದ್ದಿಯಡ ಕುಶ ಪೊನ್ನಪ್ಪ ದತ್ತಿನಿಧಿ ಕಥಾ ಸ್ಪರ್ಧೆಯ ಬಹುಮಾನ ವಿತರಿಸುವುದು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೊಡವ ಭಾಷೆಯ ಹಾಡುಗಾರಿಕೆ, ಓದುವುದು ಮತ್ತು ಹಾಸ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

News

Heavy Rain: ಕೊಡಗು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಇಂದೂ ರಜೆ – ಜಿಲ್ಲಾಧಿಕಾರಿಗಳ ಆದೇಶ

Heavy Rain: ಕೊಡಗು ಜಿಲ್ಲೆಯಲ್ಲಿ, ಹೆಚ್ಚಿನ ಗಾಳಿ-ಮಳೆ ಮುಂದುವರೆದಿರುವುದರಿಂದ ಅಂಗನವಾಡಿ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ, ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಮುಂಜಾಗೃತಾ ಕ್ರಮವಾಗಿ ದಿನಾಂಕ 28.05.2025 ರ ಒಂದು ದಿನಕ್ಕೆ ಸೀಮಿತವಾಗಿ ಅಂಗನವಾಡಿ ಕೇಂದ್ರಗಳಿಗೆ ರಜೆ ವಿಸ್ತರಿಸಿ ರಜೆ ದಿನಗಳ ಪೂರಕ ಪೌಷ್ಟಿಕ ಆಹಾರವನ್ನು THR ರೂಪದಲ್ಲಿ ಫಲಾನುಭವಿಗಳಿಗೆ ನೀಡುವುದು ಮತ್ತು ಅದನ್ನ ಪೋಷಣ್ ಟ್ರಾಕರ್ ನಲ್ಲಿ ನಮೂದಿಸುವುದಂತೆ ಜಿಲ್ಲಾಧಿಕಾರಿಗಳು,ಪ್ರಕಟಣೆ ಹೊರಡಿಸಿದ್ದಾರೆ.

News

Madikeri: ಮೂವರು ಕಾಫಿ ಕಳ್ಳರು ಅಂದರ್ – ಎಸ್ಪಿ ಶ್ಲಾಘನೆ

Madikeri: ಇತ್ತೀಚಿಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧೆಡೆ ನಡೆದಿದ್ದ ಮೂರು ಪ್ರತ್ಯೇಕ ಕಾಫಿ ಕಳವು ಪ್ರಕರಣವನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

News

Boys missing: ಇಬ್ಬರು ಬಾಲಕರು ಕಾಣೆ – ಮಕ್ಕಳನ್ನು ಹುಡುಕಿಕೊಡಲು ನೊಂದ ಪೋಷಕರ ಮನವಿ

Boys missing: ಮಡಿಕೇರಿ ತಾಲೂಕಿನ ಮೂರ್ನಾಡು ಕೋಡಂಬೂರು ಗ್ರಾಮದ ಯೋಗೇಶ್ ಎಂಬುವರ ಮಗ "ಧನುಷ್"(15 ವರ್ಷ) ಹತ್ತನೇ ತರಗತಿ MHS ಶಾಲೆ ಮೂರ್ನಾಡ್ ಹಾಗೂ ಬಿಪಿನ್ ಎಂಬುವರ ಮಗ "ದ್ರೋಣ"(14ವರ್ಷ) 9ನೇ ತರಗತಿ ಜ್ಞಾನ ಜ್ಯೋತಿ ಶಾಲೆ ಮೂರ್ನಾಡ್, ಈ ಇಬ್ಬರು ಮಕ್ಕಳು ಮೇ27ರಂದು ಮಧ್ಯಾಹ್ನ ಮೂರು ಗಂಟೆ ಸಮಯಕ್ಕೆ ಅದೇ ಗ್ರಾಮದಲ್ಲಿ ಇರುವ ಶ್ರೀ ಭದ್ರಕಾಲಿ ದೇವಾಲಯಕ್ಕೆ ಹೋಗಿಬರುತೇವೆ ಎಂದು ಹೋದವರು ಮರಳಿ ಮನೆಗೆ ಬಂದಿರುವುದಿಲ್ಲ.

News

Covid -19: ಏಷ್ಯಾದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ – ಕಾರಣವಾಗುತ್ತಿರುವ ಜೆಎನ್.1 ಕೋವಿಡ್-19 ರೂಪಾಂತರ ಯಾವುದು? 

Covid -19: ಏಷ್ಯಾದಲ್ಲಿ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗುತ್ತಿರುವ ಜೆಎನ್.1 ಕೋವಿಡ್-19 ರೂಪಾಂತರವು ಒಮೈಕ್ರಾನ್ ರೂಪಾಂತರ ತಳಿಯ ಬಿಎ.2.86ರ ತಳಿಗೆ ಸೇರಿದ್ದು, ಇದು ಹೆಚ್ಚುವರಿ ಒಂದು ಅಥವಾ ಎರಡು ರೂಪಾಂತರಗಳ ಮೂಲಕ ಪರಿಣಾಮಕಾರಿಯಾಗಿ ಹರಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

Crime

Puttur: ಪುತ್ತೂರು: ಯುವಕನ ಮೇಲೆ ಬಿಯರ್‌ ಬಾಟಲಿಯಿಂದ ಹಲ್ಲೆ: ಕೇಸು ದಾಖಲು

Puttur: ಯುವಕನೋರ್ವನ ಮೇಲೆ ಪರಿಚಯಸ್ಥರು ಹಲ್ಲೆ ಮಾಡಿ ಗಾಯಗೊಳಿಸಿದ ಘಟನೆ ಪಾಣಾಜೆ ಗ್ರಾಮದಲ್ಲಿ ಮೇ 25 ರಂದು ನಡೆದಿರುವ ಕುರಿತು ವರದಿಯಾಗಿದೆ. ಆರ್ಲಪದವು ನಿವಾಸಿ ಪ್ರಕಾಶ್‌ (28) ಹಲ್ಲೆಗೊಳಗಾದ ವ್ಯಕ್ತಿ.

News

CM Siddaramiah : ದಕ್ಷಿಣ ಕನ್ನಡದಲ್ಲಿ ಮುಸ್ಲಿಂ ಯುವಕನ ಬರ್ಬರ ಹತ್ಯೆ – ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

CM Siddaramiah : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ನೆಕ್ತರು ಹರಿಯುತ್ತಲೇ ಇದೆ. ಇದೀಗ ಪಿಕಪ್ ಚಾಲಕನನ್ನು ಬರ್ಬರವಾಗಿ ಕಡಿದು ಕೊಲೆ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪದ ಕಾಂಬೋಡಿಯ ಇರಾಕೋಡಿ ಎಂಬಲ್ಲಿ ನಡೆದಿದೆ.

Crime

Mangalore: ಕೊಲೆ ಪ್ರಕರಣದಿಂದ ಮಂಗಳೂರು ಉದ್ವಿಗ್ನ ಹಿನ್ನೆಲೆ: ಶವಯಾತ್ರೆಗೆ ಪೊಲೀಸ್‌ ಭದ್ರತೆ

Mangalore: ನಿನ್ನೆ ನಡೆದ ಕೊಲೆ ಪ್ರಕರಣದಿಂದಾಗಿ ಮಂಗಳೂರು ಉದ್ವಿಗ್ನಗೊಂಡಿರುವ ಕಾರಣ ರಹೀಮ್‌ ಶವಯಾತ್ರೆಗೆ ಪೊಲೀಸ್‌ ಭದ್ರತೆಯನ್ನು ಕಲ್ಪಿಸಲಾಗಿದೆ. ಮಸೀದಿಯಿಂದ ಮೆರವಣಿಗೆ ಹೊರಟಿದ್ದು, ದಾರಿಯುದ್ದಕ್ಕೂ ಬಿಗಿ ಬಂದೋಬಸ್ತ್‌ ನಿಯೋಜನೆ ಮಾಡಲಾಗಿದೆ.

Crime

Bantwala: ಅಬ್ದುಲ್‌ ರಹಿಮಾನ್‌ ಬರ್ಬರ ಹತ್ಯೆ ಪ್ರಕರಣ: 15 ಮಂದಿ ವಿರುದ್ಧ ಪ್ರಕರಣ ದಾಖಲು

Bantwala: ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಕೊಳತ್ತಮಜಲು ಜುಮ್ಮಾ ಮಸೀದಿ ಕಾರ್ಯದರ್ಶಿ ಹಾಗೂ ಪಿಕಪ್‌ ಚಾಲಕ ಅಬ್ದುಲ್‌ ರಹಿಮಾನ್‌ ಎಂಬುವವರನ್ನು ಬರ್ಬರವಾಗಿ ಹತ್ಯೆ ಘಟನೆ ನಡೆದಿದೆ.