Marriage invitation: ‘ತಮ್ಮ ಆಗಮನಕ್ಕಾಗಿ ಕಾಯುತ್ತಿದ್ದೇವೆ’ – ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಸತ್ತವರ ಹೆಸರು ಪ್ರಿಂಟ್ ಮಾಡಿದ ಕುಟುಂಬ!!

Marriage invitation : ಮದುವೆಯ ಆಮಂತ್ರಣ ಪತ್ರಿಕೆಗಳಿಗೆ ತನ್ನದೇ ಆದ ಮಹತ್ವವಿದೆ. ಸಂಬಂಧಿಕರ ಮನೆಮನೆಗಳಿಗೆ ತೆರಳಿ ಆಮಂತ್ರಣ ಪತ್ರಿಕೆಗಳನ್ನು ಹಂಚಿ ಮದುವೆಗೆ ಆಮಂತ್ರಿಸುವುದು ನಮ್ಮ ಸಂಪ್ರದಾಯದ ವಾಡಿಕೆ. ಇನ್ನು ಮದುವೆ ಪತ್ರಿಕೆಯಲ್ಲಿ ಏನೆಲ್ಲ ಇರುತ್ತೆ ಎಂಬುದಾಗಿ ಯಾರಿಗೂ ವಿವರಿಸಿ ಹೇಳಬೇಕೆಂದೇನಿಲ್ಲ. ವಧು ವರರ ಹೆಸರು, ಕುಟುಂಬದ ವಿವರ, ಜೊತೆಗೆ ಸುಖಾಗಮನವನ್ನು ಬಯಸುವವರ ವಿವರಗಳು ಇದ್ದೇ ಇರುತ್ತವೆ. ಆದರೆ ಇಲ್ಲೊಂದು ಮದುವೆ ಪತ್ರಿಕೆಯಲ್ಲಿ ಪ್ರಿಂಟ್ ಆಗಿರುವುದನ್ನು ಕಂಡರೆ ನೀವೆಲ್ಲರೂ ಶಾಕ್ ಆಗುತ್ತೀರಿ.
ಹೌದು, ಸಾಮಾನ್ಯವಾಗಿ ಮದುವೆ ಆಮಂತ್ರಣ ಪತ್ರಿಕೆಗಳಲ್ಲಿ ತಮ್ಮ ಸುಖಾಗಮನವನ್ನು ಬಯಸುವವರು ಎಂದು ಮನೆಯ ಸದಸ್ಯರ ಹೆಸರನ್ನು ಪ್ರಿಂಟ್ ಮಾಡಿಸುತ್ತಾರೆ. ಆದ್ರೆ ಇಲ್ಲೊಂದು ಮದುವೆ ಪತ್ರಿಕೆಯಲ್ಲಿ ಸುಖಾಗಮನವನ್ನು ಬಯಸುವವರು ಎಂದು ಮೃತ ಕುಟುಂಬ ಸದಸ್ಯರ ಹೆಸರನ್ನು ಬರೆಸಿದ್ದಾರೆ. ಹೌದು ತಮ್ಮ ಆಗಮನಕ್ಕಾಗಿ ಕಾಯುತ್ತಿದ್ದೇವೆ ಎಂದು ಸತ್ತವರ ಹೆಸರನ್ನು ಪ್ರಿಂಟ್ ಮಾಡಿಸಿದ್ದಾರೆ.
ಫೈಕ್ ಅತೀಕ್ ಕಿದ್ವಾಯಿ (Faiq Ateeq Kidwai) ಎಂಬ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಈ ಕುರಿತ ಫೋಟೋವನ್ನು ಶೇರ್ ಮಾಡಲಾಗಿದ್ದು, “ಸತ್ತವರು ಕಾಯುತ್ತಿದ್ದರೆ ಸಹೋದರ ನಾನು ಮದುವೆಗೆ ಹೋಗುವುದಿಲ್ಲ” ಎಂದು ತಮಾಷೆಯ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ಫೋಟೋದಲ್ಲಿ ನಿಮ್ಮ ಆಗಮನಕ್ಕಾಗಿ ಕಾಯುತ್ತಿರುವವರು ಎಂದು ದಿವಂಗತ ನೂರುಲ್ ಹಕ್, ಲೇಟ್ ಲಾಲು ಹಕ್, ಲೇಟ್ ಬಾಬು ಹಕ್, ಲೇಟ್ ಎಜಾಜ್ ಹಕ್ ಫಾರೂಕ್, ಮೊಹಮ್ಮದ್. ಇಕ್ಬಾಲ್, ಮೊ. ಲಿಯಾಕತ್ ಮೊಹಮ್ಮದ್ ಶೋಕೃತ್, ಮೊಹಮ್ಮದ್. ಫರ್ಹಾನ್, ಮೊಹಮ್ಮದ್. ಫೈಜಾನ್, ಮೊಹಮ್ಮದ್. ಅನಸ್, ಮೊಹಮ್ಮದ್. ಆಕಿಬ್, ತಾಯಿ. ತೌಸಿಫ್, ಅಬ್ಬಾಸ್, ಮೊಹಮ್ಮದ್ ಇನ್ನಿತರರ ಹೆಸರನ್ನು ಬರೆದಿರುವ ದೃಶ್ಯವನ್ನು ಕಾಣಬಹುದು.
Comments are closed.