ಮಂಗಳವಾರ, 3 ನವೆಂಬರ್ 2026

Youtuber Zara Dar: ಪಿಎಚ್‌ಡಿ ತೊರೆದು ʼವಯಸ್ಕರʼ ಕಂಟೆಂಟ್‌ ಕ್ರಿಯೇಟರ್‌ ಆಗಲು ಹೊರಟ ಯೂಟ್ಯೂಬರ್‌ ಚೆಲುವೆ ಜರಾದಾರ್

Youtuber Zara Dar: ಇತ್ತೀಚೆಗೆ ಯುವ ಜನತೆ ಸಾಮಾಜಿಕ ಜಾಲತಾಣಗಳತ್ತ ಆಕರ್ಷಣೆಗೊಳ್ಳುವುದು ಹೆಚ್ಚಿದೆ. ಅದೇ ರೀತಿ ಯೂಟ್ಯೂಬರೊಬ್ಬರು ʼವಯಸ್ಕರʼ ಕಂಟೆಂಟ್‌ ಕ್ರಿಯೇಟರ್‌ ಆಗಬೇಕೆಂಬ ಹಂಬಲದಿಂದ ತಮ್ಮ ಪಿಎಚ್‌ಡಿ ಪದವಿಯನ್ನೇ ತೊರೆದಿದ್ದಾರೆ.

Advertisement
Advertisement

Youtuber Zara Dar: ಇತ್ತೀಚೆಗೆ ಯುವ ಜನತೆ ಸಾಮಾಜಿಕ ಜಾಲತಾಣಗಳತ್ತ ಆಕರ್ಷಣೆಗೊಳ್ಳುವುದು ಹೆಚ್ಚಿದೆ. ಅದೇ ರೀತಿ ಯೂಟ್ಯೂಬರೊಬ್ಬರು ʼವಯಸ್ಕರʼ ಕಂಟೆಂಟ್‌ ಕ್ರಿಯೇಟರ್‌ ಆಗಬೇಕೆಂಬ ಹಂಬಲದಿಂದ ತಮ್ಮ ಪಿಎಚ್‌ಡಿ ಪದವಿಯನ್ನೇ ತೊರೆದಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದತ್ತ ಮಹಿಳೆಯರನ್ನು ಪ್ರೇರೇಪಿಸುವ ಯೂಟ್ಯೂಬರ್ ಜರಾ ದಾರ್ ಎನ್ನುವಾಕೆಯೇ ಈ ನಿರ್ಧಾರ ಕೈಗೊಂಡಿರುವುದು. ಪಿಎಚ್‌ಡಿ ವ್ಯಾಸಂಗವನ್ನು ಬಿಟ್ಟು ಓನ್ಲಿ ಫ್ಯಾನ್ಸ್ ಮಾಡೆಲ್ ಆಗುವ ನಿರ್ಧಾರ ಮಾಡಿದ್ದಾಳೆ ಈಕೆ.

Sponsored

Advertisement
Advertisement

ಜಾರಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದು, ಅದರಲ್ಲಿ ಅವಳು ತನ್ನ ಶೈಕ್ಷಣಿಕ ಅಧ್ಯಯನವನ್ನು ಮಧ್ಯದಲ್ಲಿ ಬಿಟ್ಟು ವಯಸ್ಕರ ಕಂಟೆಂಟ್‌ ಕ್ರಿಯೇಟರ್‌ ಆಗುವ ಪ್ರಯಾಣದ ಬಗ್ಗೆ ಹೇಳಿದ್ದಾಳೆ. ಜರಾದಾರ್‌ ಮಾಜಿ ವಕೀಲೆಯಾಗಿದ್ದು, ಈಕೆಗೆ ಯೂಟ್ಯೂಬ್‌ನಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ ಇದ್ದಾರೆ. ಅಮೇರಿಕನ್ ನಿವಾಸಿ ಜಾರಾ ಯೂಟ್ಯೂಬ್‌ನಲ್ಲಿ ವೀಡಿಯೊಗಳು ಯಂತ್ರ ಕಲಿಕೆ ಮತ್ತು ನ್ಯೂರಲ್ ನೆಟ್‌ವರ್ಕ್‌ಗಳಂತಹ ತಾಂತ್ರಿಕ ವಿಷಯಗಳ ಮೇಲೆ ವೀಡಿಯೋ ಮಾಡುತ್ತಿದ್ದಳು. ಆದರೆ ಆಕೆಯ ಸೌಂದರ್ಯಕ್ಕೆನೇ ಅಭಿಮಾನಿಗಳು ಹೆಚ್ಚು ಹೆಚ್ಚು ಬರತೊಡಗಿದರು.

Advertisement

ಆದರೆ ಈಗ ಅವರು ಪಿಎಚ್‌ಡಿ ಜೊತೆಗೆ ತಮ್ಮ ಶೈಕ್ಷಣಿಕ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.

ಡಿಸೆಂಬರ್ 12 ರಂದು, ಜಾರಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದರು – “ಪಿಎಚ್‌ಡಿ ಡ್ರಾಪ್‌ಔಟ್ ಟು ಓನ್ಲಿ ಫ್ಯಾನ್ಸ್ ಮಾಡೆಲ್”. ಈ ವೀಡಿಯೊದಲ್ಲಿ ಅವರು ತಮ್ಮ ಶೈಕ್ಷಣಿಕ ವೃತ್ತಿಜೀವನವನ್ನು ತೊರೆಯುವ ನಿರ್ಧಾರದ ಬಗ್ಗೆ ಮಾತನಾಡುತ್ತಾರೆ. ಇದು ಅವಳಿಗೆ ಸುಲಭವಲ್ಲ ಎಂದು ಜರಾ ಹೇಳುತ್ತಾಳೆ, ಆದರೆ ಈಗ ಅದರ ಬಗ್ಗೆ ಪಶ್ಚಾತ್ತಾಪವಿಲ್ಲ ಜಾರಾ ಹೇಳಿದ್ದಾಳೆ.

ಅಂದ ಹಾಗೆ ಜರಾದಾರ್‌ ಟೆಕ್ಸಾಸ್‌ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್‌ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದಾಳೆ. ಈ ಪ್ಲಾಟ್‌ಫಾರ್ಮ್‌ನಿಂದ ತಾನು ಪ್ರತಿ ತಿಂಗಳು ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದೇನೆ ಎಂದು ಜಾರಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದರೊಂದಿಗೆ, ಅವಳು ತನ್ನ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಆದರೆ ತನ್ನ ಕನಸುಗಳನ್ನು ನನಸಾಗಿಸಿಕೊಳ್ಳುತ್ತಿದ್ದಾಳೆ.

ತಮ್ಮ ಸ್ವಂತ ನಿಯಮಗಳಲ್ಲಿ ಕೆಲಸ ಮಾಡಲು ಬಯಸುವವರಿಗೆ ಓನ್ಲಿ ಫ್ಯಾನ್ಸ್‌ನಂತಹ ಪ್ಲಾಟ್‌ಫಾರ್ಮ್‌ಗಳು ಉತ್ತಮ ಅವಕಾಶ ಎಂದು ಜರಾ ಹೇಳುತ್ತಾಳೆ. ಆದರೆ ಇದು ಏನು? ಅದು ಹೇಗೆ ಕಾರ್ಯನಿರ್ವಹಿಸುತ್ತದೆ? ಎಂಬುವುದಕ್ಕೆ ಇಲ್ಲಿದೆ ಉತ್ತರ.
ಇದರ ಮೂಲಕ ಕಂಟೆಂಟ್‌ ಕ್ರಿಯೇಟರ್‌ಗಳು ತಮ್ಮ ಚಂದಾದಾರರೊಂದಿಗೆ ನೇರ ಸಂಪರ್ಕದಲ್ಲಿರುತ್ತಾರೆ. ಇಲ್ಲಿ ರಚನೆಕಾರರು ತಮ್ಮದೇ ಆದ ನಿಯಮಗಳಲ್ಲಿ ವಿಷಯವನ್ನು ರಚಿಸಬಹುದು. ಈ ಪ್ಲಾಟ್‌ಫಾರ್ಮ್ ಕಂಟೆಂಟ್ ಕ್ರಿಯೇಟರ್‌ ಆದಾಯದ ಮೂಲವೂ ಆಗುತ್ತಿದೆ ಮತ್ತು ಈ ಕಾರಣದಿಂದಾಗಿ ಜಾರಾ ತನ್ನ ಅಧ್ಯಯನವನ್ನು ಮಧ್ಯದಲ್ಲಿಯೇ ಬಿಟ್ಟಿದ್ದಾಳೆ.

ಓನ್ಲಿ ಫ್ಯಾನ್ಸ್‌ನ ಜನಪ್ರಿಯತೆಯ ಜೊತೆಗೆ ವಿವಾದಗಳೂ ಇದೆ ಎನ್ನಲಾಗಿದೆ. ಇದನ್ನು ಸಾಮಾನ್ಯವಾಗಿ ವಯಸ್ಕರ ವಿಷಯ ವೇದಿಕೆಯಾಗಿ ನೋಡಲಾಗುತ್ತದೆ. ಇದರಿಂದಾಗಿ ಅನೇಕ ದೇಶಗಳಲ್ಲಿ ಅದರ ಬಗ್ಗೆ ನೈತಿಕ ಮತ್ತು ಕಾನೂನು ಚರ್ಚೆಗಳು ನಡೆಯುತ್ತಿವೆ.

Advertisement
Advertisement

Comments are closed.