ಮಂಗಳವಾರ, 3 ನವೆಂಬರ್ 2026

ಟೀಮ್ ದಕ್ಷಿಣ ಕಾಶಿ (ರಿ) ಉಪ್ಪಿನಂಗಡಿ ಹಾಗೂ ವಿದ್ಯಾಮಾತಾ ಅಕಾಡೆಮಿ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನಾಚರಣೆ

Advertisement
Advertisement

ಟೀಮ್ ದಕ್ಷಿಣ ಕಾಶಿ (ರಿ) ಉಪ್ಪಿನಂಗಡಿ ಹಾಗೂ ವಿದ್ಯಾಮಾತಾ ಅಕಾಡೆಮಿ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನಾಚರಣೆ ಯ ಪ್ರಯುಕ್ತ ರಾಷ್ಟ್ರೀಯ ಏಕತಾ ದಿನಾಚರಣೆಯನ್ನು 31 ಅಕ್ಟೋಬರ್ 2026 ರಂದು ವಿದ್ಯಾಮಾತಾ ಅಕಾಡೆಮಿ, ಪುತ್ತೂರು ಇಲ್ಲಿ ಆಯೋಜಿಸಲಾಗಿತ್ತು.

Sponsored

ಈ ಕಾರ್ಯಕ್ರಮದಲ್ಲಿ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಶ್ರೀ ಭಾಗ್ಯೇಶ್ ರೈ ಇವರು ಮಾತನಾಡಿ,ಸರ್ದಾರ್ ವಲ್ಲಭಭಾಯಿ ಪಟೇಲರ ತತ್ವ ಸಿದ್ಧಾಂತಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ವಾಟ್ಸಾಪ್ ಫೇಸ್ ಬುಕ್ ಇರುವಂತ ಈ ಯುಗದಲ್ಲಿ ವಿದ್ಯಾರ್ಥಿಗಳನ್ನು ಹಾಗೂ ಜನರನ್ನ ಒಟ್ಟು ಸೇರಿಸುವುದು ಬಹಳಷ್ಟು ಕಷ್ಟದ ಕೆಲಸ ಆದರೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಸ್ವಾತಂತ್ರ್ಯ ಹೋರಾಟಕ್ಕಾಗಿ ಅದೆಷ್ಟೋ ಸಂಘಟನೆಗಳನ್ನ ರಚಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ ಎಂಬ ಹಿತ ನುಡಿಗಳನ್ನು ಆಡಿದರು.

Advertisement
Advertisement

ವಿದ್ಯಾಮಾತಾ ಅಕಾಡೆಮಿಯ ಉಪನ್ಯಾಸಕರಾದ ಶ್ರೀ ಚಂದ್ರಕಾಂತ್ ಸ್ವಾಗತಿಸಿದರು. ಸಂಸ್ಥೆಯ ವಿದ್ಯಾರ್ಥಿ ನೇಹಾ ರಾವ್ ಕೆ ಏಕತಾ ದಿನದ ಪ್ರತಿಜ್ಞೆಯನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾಮಾತಾ ಅಕಾಡೆಮಿಯ ನಿರ್ದೇಶಕಿ ಶ್ರೀಮತಿ ರಮ್ಯಾ ಭಾಗ್ಯೇಶ್ ರೈ, ಮತ್ತು ತರಬೇತುದಾ ರರಾದ ಶ್ರೀ ಗಣೇಶ್ ಉಪಸ್ಥಿತರಿದ್ದರು. ಟೀಮ್ ದಕ್ಷಿಣ ಕಾಶಿಯ ಜೊತೆ ಕಾರ್ಯದರ್ಶಿಯಾಗಿರುವ ಶ್ರೀ ವಿಜೇತ್ ಕುಮಾರ್ ರವರು ವಂದಿಸಿದರು.

Advertisement
Advertisement
Advertisement