Sprouted Ragi: ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಕೊನೆಯದಾಗಿ ಈ ಒಂದು ಪ್ರಯತ್ನ ಮಾಡಿ ನೋಡಿ!

Sprouted Ragi: ಈ ಮೊದಲು ನೀವು ನಿಮ್ಮ ದೇಹದ ಅತಿಯಾದ ತೂಕವನ್ನು ಇಳಿಸಿಕೊಳ್ಳಲು ನಾನಾ ಪ್ರಯತ್ನಗಳನ್ನು ಮಾಡಿರಬಹುದು. ಆದರೆ ಅಂತಹ ಪ್ರಯತ್ನಗಳು ವ್ಯರ್ಥ ಆಗಿರಬಹುದು. ಸದ್ಯ ಅಂಥವರಿಗಾಗಿ ಇದೀಗ ಕೊನೆಯದಾಗಿ ತೂಕವನ್ನು ಸುಲಭವಾಗಿ ಕಡಿಮೆ ಮಾಡಲು ಸೂಪರ್ ಟಿಪ್ಸ್ ಒಂದು ನೀಡಲಾಗಿದೆ.

ಕುಟುಂಬವನ್ನೇ ತೊರೆದು 80ರ ತಾತನನ್ನು ಮದುವೆಯಾದ 23ರ ಸುಂದರಿ !! ಕೊಟ್ಟ ಕಾರಣ ಮಾತ್ರ ನಿಜಕ್ಕೂ ಶಾಕಿಂಗ್ !!

ಮುಖ್ಯವಾಗಿ ಆರೋಗ್ಯಕರ ಆಹಾರವಾಗರುವ (Healthy Food)  ರಾಗಿ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಅಂಶಗಳು ಇವೆ. ರಾಗಿಯಲ್ಲಿ ಕ್ಯಾಲ್ಸಿಯಂ, ಫೈಬರ್, ಕಬ್ಬಿಣ, ಪ್ರೋಟೀನ್, ಖನಿಜಗಳು ಮತ್ತು ಅಯೋಡಿನ್ ಸಮೃದ್ಧವಾಗಿದೆ.  ಆದರೆ ಇವೆಲ್ಲಕ್ಕಿಂತ ವಿಶೇಷವಾಗಿರುವುದು ಮೊಳಕೆ ಕಟ್ಟಿದ ರಾಗಿ. ಮೊಳಕೆ ಕಾಳು ಆರೋಗ್ಯಕ್ಕೆ ಉತ್ತಮವಾಗಿವೆ ಅನ್ನೋದು ಈಗಾಗಲೇ ನಿಮಗೆ ಗೊತ್ತಿರುವ ವಿಚಾರ. ಮುಖ್ಯವಾಗಿ ಮೊಳಕೆ ಕಟ್ಟಿದ ರಾಗಿ (Sprouted Ragi)  ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವ ಮಹಿಳೆಯರಿಗೆ ಸೂಕ್ತ ಆಹಾರ. ಇನ್ನು ಮೊಳಕೆ ಕಟ್ಟಿದ ರಾಗಿಯನ್ನು (Sprouted Ragi)  ಹೀಗೆಲ್ಲಾ ತಿನ್ಬೋದು ಅನ್ನೋದು ಇಲ್ಲಿದೆ ನೋಡಿ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಹಾಲು ಅಥವಾ ನೀರಿನಿಂದ ಬೇಯಿಸಿ ತಿನ್ನಬಹುದು, ಗಂಜಿ ಮಾಡ್ಕೊಬಹುದು, ದೋಸೆ, ಸಲಾಡ್‌, ಉಪ್ಮಾಗಳು, ಪ್ಯಾನ್‌ಕೇಕ್‌ಗಳು, ಇಡ್ಲಿಗಳು, ರೊಟ್ಟಿಗಳು, ಸ್ಮೂಥಿ, ಖಿಚಡಿ ಹೀಗೆ ಬೇರೆ ಬೇರೆ ತರದಲ್ಲಿ ಮೊಳಕೆ ಕಟ್ಟಿದ ರಾಗಿಯನ್ನು ಸವಿಯಬಹುದು.

ಮೊಳಕೆ ಕಟ್ಟಿದ ರಾಗಿಯು ಮಹಿಳೆಯರಿಗೆ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ ಮತ್ತು ಆಸ್ಟಿಯೊಪೊರೋಸಿಸ್ ಮತ್ತು ವಯಸ್ಸಿಗೆ ತಕ್ಕಂತೆ ಬರುವ ಇತರ ಮೂಳೆ ಸಮಸ್ಯೆಗಳ ಅಪಾಯಗಳನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ. ಹೆರಿಗೆಯ ಸಮಯದಲ್ಲಿ, ಕಬ್ಬಿಣದ ಕೊರತೆಯ ರಕ್ತಹೀನತೆ, ದೌರ್ಬಲ್ಯ ಮತ್ತು ಆಯಾಸದ ವಿರುದ್ಧ ಹೋರಾಡುತ್ತದೆ.

ನಾರಿನಂಶ ಹೆಚ್ಚಿರುವುದರಿಂದ, ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಸಕ್ಕರೆ, ಎಣ್ಣೆ ಪದಾರ್ಥಗಳ ಕಡುಬಯಕೆಗಳನ್ನು ಕಡಿಮೆ ಮಾಡಿ, ತೂಕ ನಿರ್ವಹಣೆಯಲ್ಲಿ ನಿಮಗೆ ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮ ದೈನಂದಿನ ಪೌಷ್ಠಿಕಾಂಶದ ಅವಶ್ಯಕತೆಗಳನ್ನು ನಿಮಗೆ ಪೂರೈಸುತ್ತದೆ.

ಮೊಳಕೆಯೊಡೆದ ರಾಗಿಯು  ನಿಮ್ಮ ಹಾರ್ಮೋನುಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಋತುಬಂಧ ಮತ್ತು ಮುಟ್ಟಿನ ಸಮಸ್ಯೆಗಳನ್ನು ನಿಭಾಯಿಸಲು ಸಹಕರಿಸುತ್ತದೆ.

ಮೊಳಕೆಯೊಡೆದ ರಾಗಿ ಇದು ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು, ಪ್ರೋಟೀನ್ ಮತ್ತು ಸಾಕಷ್ಟು ಚರ್ಮಕ್ಕೆ ಜಲಸಂಚಯನವನ್ನು ನೀಡುತ್ತದೆ. ಜೊತೆಗೆ ಕಾಲಜನ್ ಉತ್ಪಾದನೆ ಮಾಡುತ್ತದೆ.

ಈ ಎಲ್ಲಾ ಅಂಶಗಳಿಂದ ನೀವು ನಿಮ್ಮ ಅತಿಯಾದ ತೂಕವನ್ನು ಹತೋಟಿಯಲ್ಲಿಡಲು ಮೊಳಕೆ ಒಡೆದ ರಾಗಿ ಖಂಡಿತವಾಗಿ ಸಹಾಯ ಮಾಡುತ್ತೆ.

ಹಾರ್ಟ್​ ಪ್ರಾಬ್ಲಂ ಬರದೇ ಇರಲು ಇಡ್ಲಿ ಹಿಟ್ಟಿಗೆ ಅಕ್ಕಿ ಬದಲು ಇದನ್ನು ಮಿಕ್ಸ್​ ಮಾಡಿ!

Leave A Reply

Your email address will not be published.