ಸೋಮವಾರ, 26 ಅಕ್ಟೋಬರ್ 2026
Trending

Rave Party: ಬೆಂಗಳೂರಿನಲ್ಲಿ ರೇವ್‌ಪಾರ್ಟಿ ಮೇಲೆ ಸಿಸಿಬಿ ರೇಡ್‌; ಮಾದಕ ನಶೆಯಲ್ಲಿ ತೆಲುಗು ನಟ, ನಟಿಯರು?

Rave Party: ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಬಳಿಯ ಜಿ ಆರ್‌ ಫಾರ್ಮ್‌ ಹೌಸ್‌ನಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿ ಮೇಲೆ ಪೊಲೀಸರು ರೇಡ್‌ ಮಾಡಿದ್ದಾರೆ

Rava party
Advertisement

Rave Party: ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಬಳಿಯ ಜಿ ಆರ್‌ ಫಾರ್ಮ್‌ ಹೌಸ್‌ನಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿ ಮೇಲೆ ಪೊಲೀಸರು ರೇಡ್‌ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ಡ್ರಗ್ಸ್‌, ಎಂಡಿಎಂ ಮಾತ್ರೆಗಳು ಪತ್ತೆಯಾಗಿದೆ. ಈ ಪಾರ್ಟಿಯಲ್ಲಿ ಆಂಧ್ರ ಮತ್ತು ಬೆಂಗಳೂರಿನ 100 ಕ್ಕೂ ಹೆಚ್ಚು ಜನ ಪತ್ತೆಯಾಗಿದ್ದು, 25ಕ್ಕೂ ಹೆಚ್ಚು ಯುವತಿಯರು ಪಾರ್ಟಿಯಲ್ಲಿ ಇದ್ದರು ಎನ್ನಲಾಗಿದೆ.

Sponsored

ಇದನ್ನೂ ಓದಿ: Death: ರೆಸಾರ್ಟ್‌ ನಲ್ಲಿ ಜಿಪ್ ಲೈನ್ ಆಡಲು ಹೋದ ಯುವತಿ ಕೆಳಗೆ ಬಿದ್ದು ದಾರುಣ ಸಾವು! ಪ್ರಕರಣ ದಾಖಲು

Advertisement
Advertisement

ಡಿಸಿಪಿ ಶ್ರೀನಿವಾಸ್‌ ಗೌಡ ಮತ್ತು ಎಸಿಪಿ ಪರಮೇಶ್ವರ್‌ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಹೈದರಬಾದ್‌ನ ವಾಸು ಎಂಬಾತ ಪಾರ್ಟಿ ಆಯೋಜನೆ ಮಾಡಿರುವುದಾಗಿ ತಿಳಿದು ಬಂದಿದೆ. ಈ ದಾಳಿ ಸಂದರ್ಭ ಬೆಂಜ್‌ ಕಾರಿನಲ್ಲಿ ಆಂಧ್ರ ಶಾಸಕ ಕಾಕನಿ ಗೋವರ್ಧನ ರೆಡ್ಡಿ ಎಂಬುವವರ ಹೆಸರಿರುವ ಪಾಸ್‌ ಪತ್ತೆಯಾಗಿದೆ.

ಇದನ್ನೂ ಓದಿ: 7th Pay Commission: ರಾಜ್ಯ ಸರ್ಕಾರಿ ನೌಕರರ ವೇತನದಲ್ಲಿ 25.5% ಹೆಚ್ಚಳ ಬಹುತೇಕ ಫಿಕ್ಸ್!!

ಈ ಪಾರ್ಟಿಯಲ್ಲಿ ಡಿಜೆಗಳು, ಮಾಡೆಲ್‌ಗಳು, ಬೆಂಗಳೂರು ಹಾಗೂ ಹೈದರಬಾದ್‌ ಮೂಲದ ಟೆಕ್ಕಿಗಳು ಹಾಗೂ ಟಾಲಿವುಡ್‌ನ ನಟ-ನಟಿಯರು ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಕುರಿತು ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.

Advertisement

Comments are closed.

div class="ere-sticky">