Kodagu: SSLC ಪಾಸಾದ ಖುಷಿಯಲ್ಲಿದ್ದ ಬಾಲಕಿಯ ತಲೆ ಕಡಿದು ಭೀಕರ ಹತ್ಯೆ!

Kodagu: ಕೊಡಗಿನ (Kodagu) ಸೋಮವಾರಪೇಟೆಯ (Somwarpet) ಸೂರ್ಲಬ್ಬಿ ಗ್ರಾಮದಲ್ಲಿ, ಅಪ್ರಾಪ್ತ ಬಾಲಕಿಯನ್ನು 35 ವರ್ಷದ ವ್ಯಕ್ತಿ ಒಬ್ಬ ಮದುವೆ ಕ್ಯಾನ್ಸಲ್ ಆದ ಕೋಪಕ್ಕೆ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಹೌದು, ಎಸ್ ಎಸ್ ಎಲ್ಸಿ ಪರೀಕ್ಷೆಯಲ್ಲಿ (SSLC Exam) ಶಾಲೆಗೆ 100% ಫಲಿತಾಂಶ ತಂದುಕೊಟ್ಟಿದ್ದ ವಿದ್ಯಾರ್ಥಿನಿಯ (Minor girl) ತಲೆಯನ್ನೇ ಕತ್ತರಿಸಿ ರುಂಡ-ಮುಂಡ ಬೇರ್ಪಡಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ: Karnataka Draught Fund: ಗ್ರಾ.ಪಂ.ಗಳಲ್ಲಿ ಬರ ಪರಿಹಾರ ಪಟ್ಟಿ- ಕಂದಾಯ ಸಚಿವ
ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯಲ್ಲಿ 2023-24 ನೇ ಸಾಲಿನಲ್ಲಿ ಎಸ್ ಎಸ್ ಎಲ್ಸಿ ವ್ಯಾಸಂಗ ಮಾಡುತ್ತಿದ್ದ ಆಕೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಗುರುವಾರವಷ್ಟೇ ಫಲಿತಾಂಶ ಪ್ರಕಟಗೊಂಡಿತ್ತು. ಸದ್ಯ ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಖುಷಿಯಲ್ಲಿದ್ದ ಸಂದರ್ಭದಲ್ಲಿ ಬಾಲಕಿಯನ್ನು 35 ವರ್ಷದ ಓಂಕಾರಪ್ಪ ಅಮಾನುಷವಾಗಿ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ: Farmers: ರೈತನ ವರಿಸುವ ಕನ್ಯೆಗೆ 5 ಲಕ್ಷ ರೂ.
ಎಸ್ ಎಸ್ ಎಲ್ಸಿ ಪಾಸ್ ಆಗಿದ್ದ ವಿದ್ಯಾರ್ಥಿನಿಗೆ ಆರೋಪಿಯೊಂದಿಗೆ ನಿನ್ನೆ ನಿಶ್ಚಿತಾರ್ಥ ಫಿಕ್ಸ್ ಮಾಡಿದ್ದು, ಆದರೆ ಪೊಲೀಸರು ಅಪ್ರಾಪ್ತ ಬಾಲಕಿ ಆಗಿರುವ ಕಾರಣ ನಿಶ್ಚಿತಾರ್ಥ ನಿಲ್ಲಿಸಿದ್ದರು. ಘಟನೆ ಬಳಿಕ ಬಾಲಕಿಯನ್ನು ಆಕೆಯ ಪೋಷಕರು ಮನೆಗೆ ವಾಪಸ್ ಕರೆ ತಂದಿದ್ದು,
ಆರೋಪಿ ಕೂಡ ಮನೆಗೆ ವಾಪಸ್ ಆಗಿದ್ದ.
ಬಳಿಕ ತನ್ನ ಮದುವೆ ಕ್ಯಾನ್ಸಲ್ ಆದ ಕೋಪಕ್ಕೆ ಬಾಲಕಿಯೊಬ್ಬಳನ್ನು ಮನೆಯಿಂದ ಎಳೆದೊಯ್ದು ರುಂಡ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ವಿದ್ಯಾರ್ಥಿನಿ ತಲೆ ಕತ್ತರಿಸಿ ರುಂಡ ಮುಂಡ ಬೇರೆ ಮಾಡಿ ರುಂಡ ಒಂದು ಕಡೆ ಮುಂಡ ಒಂದು ಕಡೆ ಬಿಸಾಡಿ ಆರೋಪಿ ಎಸ್ಕೇಪ್ ಆಗಿದ್ದಾನೆ.
ಸದ್ಯ ಅಪ್ರಾಪ್ತ ಬಾಲಕಿ ಹತ್ಯೆ ಬಗ್ಗೆ ಕೊಡಗು ಪೋಲಿಸರು ತನಿಖೆ ಕೈಗೊಂಡಿದ್ದು, ಸ್ಥಳಕ್ಕೆ ಕೊಡಗು ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಬಳಿಕ ಸವಿವರ ದೊರಕಲಿದೆ.
70918248
References:
Testosteron Rückenschmerzen
70918248
References:
where can you find steroids (abbet88.Com)
70918248
References:
arnold schwarzenegger use steroid (http://www.wakeup-radio.com)
70918248
References:
Examples Of Anabolic Steroids
70918248
References:
steroid definition (http://www.bigdaddy9711.com)