Puttur: ಮದುವೆ ಸಮಾರಂಭದಲ್ಲಿ ಕರೆಯೋಲೆ ಇಲ್ಲದೆ ಎಂಟ್ರಿ ನೀಡಿದ ವ್ಯಕ್ತಿಗಳು; ಹುಡುಗಿಯರ ಫೋಟೋ ಕ್ಲಿಕ್‌; ಬಿತ್ತು ಧರ್ಮದೇಟು

Puttur: ಮದುವೆ ಇನ್ವಿಟೇಷನ್‌ ಇಲ್ಲದೆ ಮದುವೆ ಸಮಾರಂಭಕ್ಕೆಂದು ಬಂದಿದ್ದ ಇಬ್ಬರು ಕದ್ದು ಮುಚ್ಚಿ ಹುಡುಗಿಯರ ಫೋಟೋ ಕ್ಲಿಕ್ಕಿಸಿ ಸಿಕ್ಕಿಬಿದ್ದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Love Jihad: ಅನ್ಯಕೋಮಿನ ಯುವಕ-ಯುವತಿ ನಡುವಿನ ಮದುವೆ; ಹಿಂದೂ ಕಾರ್ಯಕರ್ತರು, ಪೊಲೀಸರ ನಡುವೆ ಘರ್ಷಣೆ

ಪುತ್ತೂರು ಕಾವು ದೇವಸ್ಥಾನವೊಂದರ ಸಭಾಭವನದಲ್ಲಿ ಮದುವೆ ಸಮಾರಂಭವೊಂದು ನಡೆಯುತಿತ್ತು. ಈ ಮದುವೆ ಸಮಾರಂಭಕ್ಕೆ ಸಂಬಂಧವೇ ಇಲ್ಲದ ಅಪರಿಚಿತ ವ್ಯಕ್ತಿಗಳಿಬ್ಬರು ಬಂದು ಹುಡುಗಿಯರ ಫೋಟೋ ತೆಗೆಯುತ್ತಿದ್ದರು. ಇದನ್ನು ಗಮನಿಸಿದ ಮಹಿಳೆಯೊಬ್ಬರು ಅವರಿಂದ ಮೊಬೈಲ್‌ ಫೋನನ್ನು ಕಸಿದಿದ್ದಾರೆ. ಕೂಡಲೇ ಗ್ಯಾಲರಿ ಪರಿಶೀಲನೆ ಮಾಡಿದಾಗ ನೂರಾರು ಹುಡುಗಿಯ ಫೋಟೋ ಇರುವುದು ಕಂಡು ಬಂದಿದೆ.

ಇದನ್ನೂ ಓದಿ: Pune: ಹಾಸ್ಟೆಲ್‌ ಬಾತ್‌ರೂಮ್‌ನಲ್ಲಿ ಯುವತಿಯ ಬೆತ್ತಲೆ ವೀಡಿಯೋ ಮಾಡಿ ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ

ಈ ಕುರಿತು ಅಲ್ಲಿ ನೆರೆದಿದ್ದವರು ವಿಚಾರಣೆ ಮಾಡಿದಾಗ ಸಂಪ್ರದಾಯಸ್ಥರೊಬ್ಬರ ಪುತ್ರ ಹೇಳಿದ್ದಕ್ಕೆ ಫೋಟೋ ಕ್ಲಿಕ್‌ ಮಾಡಿದ್ದೇವೆ ಎಂದು ಹೇಳಿದ್ದಾರೆ. ಏಟು ತಿಂದವರು ತಪ್ಪೊಪ್ಪಿಕೊಂಡಿದ್ದು, ನಂತರ ಅಲ್ಲಿಂದ ಕಾಲ್ಕಿತ್ತಿದ್ದಾರೆ.

Leave A Reply

Your email address will not be published.