Love Jihad: ಅನ್ಯಕೋಮಿನ ಯುವಕ-ಯುವತಿ ನಡುವಿನ ಮದುವೆ; ಹಿಂದೂ ಕಾರ್ಯಕರ್ತರು, ಪೊಲೀಸರ ನಡುವೆ ಘರ್ಷಣೆ

Love Jihad: ಅನ್ಯಕೋಮಿನ ಯುವಕ-ಯುವತಿ ನಡುವಿನ ಪ್ರೇಮ ವಿವಾಹವೊಂದಕ್ಕೆ ಸಂಬಂಧಪಟ್ಟಂತೆ ಹಿಂದೂಪರ ಸಂಘಟನೆ ಹಾಗೂ ಪೊಲೀಸರ ನಡುವೆ ಸಂಘಟನೆ ಹಾಗೂ ಪೊಲೀಸರ ನಡುವೆ ಸಂಘರ್ಷಕ್ಕೆ ಕಾರಣವಾದ ಘಟನೆಯೊಂದು ಬಾಗಲಕೋಟೆಯ ನವನಗರದ ನಗರಸಭೆ ಎದುರು ನಡೆದಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: JEE advanced 2024: ದಾಖಲೆಯ ನೋಂದಣಿ ಸಂಖ್ಯೆ, 1.91 ಲಕ್ಷಕ್ಕೂ ಹೆಚ್ಚು ಅರ್ಜಿ, ಎಂದೂ ಇಲ್ಲದ ಕಠಿಣ ಸ್ಪರ್ಧೆ !

ಬಾದಾಮಿ ಮೂಲದ ಯುವಕ ಹಾಗೂ ಯುವತಿ ಇಬ್ಬರೂ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಹಾಗೂ ರಕ್ಷಣೆ ಕೋರಿ ಎಸ್‌ಪಿ ಕಚೇರಿಗೆ ಬಂದಿದ್ದಾರೆ. ಇದನ್ನು ತಿಳಿದ ಹಿಂದೂ ಸಂಘಟನೆ ಕಾರ್ಯಕರ್ತರು ಎಸ್ಪಿ ಕಚೇರಿ ಬಂದಿದ್ದು, ಆ ಸಮಯದಲ್ಲಿ ಯುವತಿಯ ಮನೆಯವರೂ ಅಲ್ಲಿಗೆ ಬಂದಿದ್ದಾರೆ.

ಇದನ್ನೂ ಓದಿ: KPCL KSFC Recruitment: ಕೆಪಿಸಿಎಲ್‌- ಕೆಎಸ್‌ಎಫ್‌ಸಿ ನೇಮಕಾತಿಯ ಲಿಖಿತ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಮಹತ್ವದ ಸುದ್ದಿ

ಈ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರು-ಯುವತಿ ಮನೆಯವರ ನಡುವೆ ವಾಗ್ವಾದ ಉಂಟಾಗಿದೆ. ಆವಾಗ ನವನಗರ ಸಿಪಿಐ ರಾಮಣ್ಣ ಬಿರಾದರ್‌ ಅವರು ಎರಡೂ ಗುಂಪಿನವರನ್ನು ಚದುರಿಸಲು ಪ್ರಯತ್ನ ಪಟ್ಟಾಗ, ಹಿಂದೂ ಕಾರ್ಯಕರ್ತರಾದ ಕುಮಾರಸ್ವಾಮಿ ಹಾಗೂ ಸಿಪಿಐ ಬಿರಾದಾರ್‌ ನಡುವೆ ವಾಗ್ವಾದ ಉಂಟಾಗಿದೆ. ಹಾಗಾಗಿ ಸ್ವಲ್ಪ ಹೊತ್ತು ಅಲ್ಲಿ ಆತಂಕದ ವಾತಾವರಣ ಉಂಟಾಗಿದೆ.

ಈ ಮದುವೆಗೆ ಒಪ್ಪದ ಹಿಂದೂ ಕಾರ್ಯಕರ್ತರು ಸಿಪಿಐ ಬಿರಾದರ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ನಂತರ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದ್ದು, ವಾತಾವರಣ ಪ್ರಕ್ಷುಬ್ಧಗೊಂಡಿತ್ತು. ಈ ಘಟನೆಯಿಂದ ಪೊಲೀಸರು ಕೆಲವರನ್ನು ವಶಕ್ಕೆ ಪಡೆಯಲೆಂದು ಮುಂದಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಿ, ಹಿಂದೂ ಕಾರ್ಯಕರ್ತರು ರೊಚ್ಚಿಗೆದ್ದು ಪ್ರತಿಭಟನೆಗೆ ಮುಂದಾಗಿದ್ದಾರೆ.

ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಲಘು ಲಾಠಿ ಪ್ರಹಾರ ಮಾಡಿದ್ದು, ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಿದ್ದಾರೆ.

Leave A Reply

Your email address will not be published.