Bengaluru: ಧೋನಿ ಬಾರಿಸಿದ ಸಿಕ್ಸರ್ CSK ಸೋಲಿಗೆ ಮತ್ತು ರಾಯಲ್ ಚಾಲೆಂಜರ್ಸ್ ಗೆಲುವಿಗೆ ಕಾರಣವೇ ? ಆಶ್ಚರ್ಯ ಆದ್ರೂ ಇದು ಸತ್ಯ !

Share the Article

ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಗೆಲುವು ಸಾಧಿಸಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಜೈ ಗಳಿಸಿ ಪ್ಲೇ ಆಫ್ ಹಂತಕ್ಕೆ ಏರಿದ ಖುಷಿಯಲ್ಲಿದೆ.

https://www.instagram.com/reel/C7IqLpVL7jM/?utm_source=ig_web_button_share_sheet

ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಹಬ್ಬವೇ ನಡೆದು ಹೋಗಿತ್ತು. ಪಂದ್ಯದ ಕೊನೆಯ ಓವರ್‌ನಲ್ಲಿ ನಡೆದ ಬೆಳವಣಿಗೆಯಲ್ಲಿ ಗೆಲುವು ಆರ್‌ಸಿಬಿ ಪಾಲಾಯಿತು. ಕೊನೆಯ ಓವರ್‌ನಲ್ಲಿ ಧೋನಿ ಹೊಡೆದ 110 ಮೀಟರ್ ಸಿಕ್ಸ್ ಆರ್‌ಸಿಬಿಗೆ ವರವಾಗಿ ಪರಿಣಮಿಸಿತು ಎನ್ನುವ ವಿಶ್ಲೇಷಣೆಗಳು ಬರುತ್ತಿವೆ. ಅರೆ, ಇದು ಹೇಗೆ ? ಸಿಕ್ಸ್ ಬಾರಿಸಿದರೆ ಎದುರಿನ ತಂಡ ವಿಜಯಿಯಾಗುವುದು ಹೇಗೆ ಸಾಧ್ಯ ಅಂತೀರಾ ? ಇಲ್ಲಿ ಓದಿ.

ಇದನ್ನೂ ಓದಿ: English Speaking: Then Vs Than ಮತ್ತು Each Vs Every ಪದಗಳನ್ನು ಬಳಸುವುದು ಹೇಗೆ ?

ಪ್ಲೇಆಫ್‌ಗೆ ಪ್ರವೇಶಿಸಲು ರಾಯಲ್ ಚಾಲೆಂಜರ್ಸ್ ಗೆ ಚೆನ್ನೈ ಸೂಪರ್ ಕಿಂಗ್ಸ್ ಪ್ರಬಲ ಪ್ರತಿರೋಧ ಒಡ್ಡಿತ್ತು. ಕೊನೆಯ ಓವರ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ಅಮೂಲ್ಯ17 ರನ್‌ಗಳ ಅವಶ್ಯಕತೆಯಿತ್ತು. ಚೆನ್ನೈ ಸೂಪರ್ ತಂಡದ ದೈತ್ಯ ಹಿಟ್ಟರ್ ಧೋನಿ ಕ್ರೀಸಿನಲ್ಲಿ ನಿಂತು ಆಡುತ್ತಿದ್ದರು. ಆಗ ಯಶ್ ದಯಾಳ್ ರ ಕಡೆಯಿಂದ ಮೊದಲ ಎಸೆತ ಬಂತು. ಅದನ್ನು ಧೋನಿ ಮೈದಾನದ ಆಚೆಗೆ ಸಿಕ್ಸರ್‌ಗೆ ಅಟ್ಟಿದರು. ಮೋದಿಯವರು ಬ್ಯಾಟ್ ಬೀಸಿದ ಪವರ್ ಗೆ ಬಾಲ್ ಕಳೆದು ಹೋಗಿತ್ತು. ಈ ವೇಳೆ ಸಿಎಸ್‌ಕೆ ಗೆಲುವು ಖಚಿತ ಎಂದು ಭಾವಿಸಲಾಗಿತ್ತು.

ಇದನ್ನೂ ಓದಿ: Election Commission: ರಾಜ್ಯದಲ್ಲಿ ನೀತಿ ಸಂಹಿತೆ ಸಡಿಲಿಕೆ: ನಿರ್ಮಾಣ ಕಾಮಗಾರಿಗಳಿಗೆ ಚುನಾವಣಾ ಆಯೋಗ ಅಸ್ತು

ಆದರೆ ಅದೇ ಸಿಕ್ಸ‌ರ್ ಸಿಎಸ್‌ಕೆಗೆ ದುಬಾರಿಯಾಯಿತು ಅನ್ನಲಾಗುತ್ತಿದೆ. ಧೋನಿ ಅಟ್ಟಿದ ಸಿಕ್ಸ‌ರ್ ಮೈದಾನದ ಆಚೆಗೆ ಹೋಗಿ ಕಳೆದು ಹೋಗಿದ್ದರಿಂದ ಅಷ್ಟೇ ಹಳತಾದ ಮತ್ತೊಂದು ಬಾಲ್ ಅನ್ನು ಬೌಲಿಂಗ್ ಮಾಡಲು ತೆಗೆದುಕೊಳ್ಳಲಾಯಿತು. ಅದೇ ಚೆನ್ನೈ ಸೂಪರ್ ಕಿಂಗ್ಸ್ ಗೆ ದುಬಾರಿಯಾದದ್ದು. ಮುಂದಿನ ಎಸೆತವನ್ನು ಕೂಡಾ ಸಿಕ್ಸರ್‌ಗೆ ಅಟ್ಟುವ ಧೋನಿ ಪ್ರಯತ್ನ ವಿಫಲವಾಗಿತ್ತು. ಅವರು ಕ್ಯಾಚಿತ್ತು ನಿರ್ಗಮಿಸಿದರು. ಬಳಿಕದ ಎಸೆತಗಳಲ್ಲಿ ಸಿಎಸ್‌ಕೆ ತಂಡಕ್ಕೆ ನಿರೀಕ್ಷಿತ ರನ್ ಒದಗಿ ಬರಲಿಲ್ಲ. ರಾಯಲ್ ಚಾಲೆಂಜರ್ಸ್ ಪ್ಲೇ ಆಫ್ ಹಾದಿ ಸುಗಮವಾಯಿತು.

ಮೊದಲಿದ್ದ ಬಾಲ್ ಬದಲಿಗೆ ಮತ್ತೊಂದು ಬಾಲ್ ತೆಗೆದುಕೊಂಡಿದ್ದೇ ಪಂದ್ಯದ ತಿರುವು ಎನ್ನುವುದು ಹಲವರ ವಿಶ್ಲೇಷಣೆ. ಇದನ್ನೇ ಡ್ರೆಸಿಂಗ್ ರೂಮ್ ಭಾಷಣದಲ್ಲಿ ದಿನೇಶ್ ಕಾರ್ತಿಕ್ ಕೂಡ ಉಲ್ಲೇಖಿಸಿದ್ದಾರೆ. ಮಳೆ ನಿಮಿತ್ತ ಚೆಂಡು ಒದ್ದೆಯಾಗಿತ್ತು. ಇದೇ ಚೆಂಡನ್ನು ಧೋನಿ ಮೈದಾನದ ಹೊರಗೆ ಬಾರಿಸಿದರು. ಹೊಸ ಬಾಲ್ (ಇಷ್ಟೇ ಓವರ್ ಹಳತಾದ) ತೆಗೆದುಕೊಳ್ಳಲಾಯಿತು. ಇದರಿಂದ ಬೌಲರ್‌ಗೆ ಚೆಂಡಿನ ಮೇಲೆ ಹಿಡಿತ ಸಿಗುವಂತಾಯಿತು. ಬ್ಯಾಟರ್‌ಗಳಿಗೆ ಇದು ಕಷ್ಟವಾಯಿತು ಎoದಿದ್ದಾರೆ ವಿಶ್ಲೇಷಕರು.

‘ಇಂದು ನಡೆದ ಅತ್ಯುತ್ತಮ ವಿಷಯವೆಂದರೆ ಧೋನಿ ಮೈದಾನದ ಹೊರಗೆ ಸಿಕ್ಸ‌ರ್ ಬಾರಿಸಿದ್ದು. ನಮಗೆ ಹೊಸ ಚೆಂಡು ಸಿಕ್ಕಿತು. ಉತ್ತಮವಾಗಿ ಬೌಲಿಂಗ್ ಮಾಡಲು ಸಾಧ್ಯವಾಯಿತು’ ಎಂದು ಕಾರ್ತಿಕ್ ಡ್ರೆಸಿಂಗ್ ರೂಂ ಭಾಷಣದಲ್ಲಿ ಎಂದು ಹೇಳಿದ್ದರು.

2 Comments
  1. www.simplytiffanychalk.com says

    70918248

    References:

    what steroids should i take (http://www.simplytiffanychalk.com)

  2. Https://ancee-racee.org/ says

    70918248

    References:

    steroids are good For you (https://ancee-racee.org/)

Leave A Reply

Your email address will not be published.