KPCL KSFC Recruitment: ಕೆಪಿಸಿಎಲ್‌- ಕೆಎಸ್‌ಎಫ್‌ಸಿ ನೇಮಕಾತಿಯ ಲಿಖಿತ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಮಹತ್ವದ ಸುದ್ದಿ

KPCL KSFC Recruitment: ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿಎಲ್‌) ಹಾಗೂ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆಎಸ್‌ಎಫ್‌ಸಿ) ಹುದ್ದೆಗಳ ನೇಮಕಾತಿ ಕುರಿತು ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯೊಂದನ್ನು ನೀಡಲಾಗಿದೆ. ಲಿಖಿತ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ಪಡೆದ ಅಂಕಗಳ ತಾತ್ಕಾಲಿಕ ಪಟ್ಟಿಯನ್ನು ಪ್ರಕಟ ಮಾಡಲಾಗಿದ್ದು, ಪ್ರತಿ ತಪ್ಪು ಉತ್ತರಕ್ಕೆ 1/3 ರಷ್ಟು ನಕರಾತ್ಮಕ ಅಂಕ ಕಡಿತ ಮಾಡಲಾಗಿದೆ.

ಇದನ್ನೂ ಓದಿ: Health Tips for pregnant women: ಹುಟ್ಟುವ ಮಕ್ಕಳ ನೋಟಕ್ಕೂ ತಾಯಿಯ ಆಹಾರ ಪದ್ಧತಿಗೂ ಇದೇ ಬಲವಾದ ಲಿಂಕ್ : ಏನದು ಗೊತ್ತ? : ಇಲ್ಲಿ ನೋಡಿ

ಈ ಬಗ್ಗೆ ಯಾವುದೇ ಆಕ್ಷೇಪಣೆ ಇದ್ದರೆ ಮೇ. 15 ರ ಒಳಗೆ ಇ-ಮೇಲ್‌ ಮೂಲಕ kea2023exam@gmail.com ಗೆ ಕಳುಹಿಸಬೇಕೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಇದನ್ನೂ ಓದಿ: JEE advanced 2024: ದಾಖಲೆಯ ನೋಂದಣಿ ಸಂಖ್ಯೆ, 1.91 ಲಕ್ಷಕ್ಕೂ ಹೆಚ್ಚು ಅರ್ಜಿ, ಎಂದೂ ಇಲ್ಲದ ಕಠಿಣ ಸ್ಪರ್ಧೆ !

ಕರ್ನಾಟಕ ವಿದ್ಯುತ್‌ ನಿಗಮದ (ಕೆಪಿಸಿಎಲ್‌) ಸಹಾಯಕ ಇಂಜಿನಿಯರ್‌, ಕಿರಿಯ ಎಂಜಿನಿಯರ್‌ ಸೇರಿದಂತೆ 622 ಹುದ್ದೆಗಳು ಹಾಗೂ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ (ಕೆಎಸ್‌ಎಫ್‌ಸಿ) 41 ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮಾಡಲಾಗಿತ್ತು.

Leave A Reply

Your email address will not be published.