Husband wife Viral Video: ಲೇಟ್ ಆಗಿ ಮನೆಗೆ ಬಂದ ಗಂಡ – ಬಾಗಿಲು ತೆಗೆಯಲು ಹೆಂಡತಿಯಿಂದ ಬಂತು ವಿಚಿತ್ರ ಬೇಡಿಕೆ !!

Husband wife Viral Video: ದಾಂಪತ್ಯ ಎಂದ ಮೇಲೆ ಪತಿ ಪತ್ನಿಯ ನಡುವೆ ಸಣ್ಣ ಪುಟ್ಟ ಜಗಳ ಗಲಾಟೆ ನಡೆಯುವುದು ಸಾಮಾನ್ಯ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತು ಹೆಚ್ಚು ಪ್ರಚಲಿತ. ಪತಿ (Husband)ಪತ್ನಿಯರ (Wife)ನಡುವಿನ ಬಾಂಧವ್ಯ ಅತ್ಯಂತ ಪವಿತ್ರವಾದದ್ದು, ಹೀಗಾಗಿ, ಈ ಬಾಂಧವ್ಯವನ್ನು ಉಳಿಸಿಕೊಳ್ಳಲು ಇಬ್ಬರ ನಡುವೆ ಹೊಂದಾಣಿಕೆ (Mutual Understanding)ಅತ್ಯಗತ್ಯ. ಈ ನಡುವೆ, ಗಂಡ ಹೆಂಡತಿಯ ಹುಸಿ ಮುನಿಸಿನ ವೀಡಿಯೋವೊಂದು ವೈರಲ್ (Viral Video)ಆಗಿದ್ದು ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

 

ವೈರಲ್ ಆಗಿರುವ ವೀಡಿಯೋದಲ್ಲಿ ಪತಿಯನ್ನು ಪತ್ನಿ ಮನೆಯಿಂದ ಹೊರಗೆ ಹಾಕಿದಂತೆ ಕಂಡುಬರುತ್ತದೆ. ಗಂಡ ಮನೆಯ ಹೊರಗೆ ನಿಂತು ಡೋರ್ ಬೆಲ್ ಬಾರಿಸುತ್ತಲೇ ಇರುವುದನ್ನು ಕಾಣಬಹುದು. ಎಷ್ಟೇ ಬಾರಿ ಗಂಡ ಡೋರ್ ಬೆಲ್ ಬಾರಿಸಿದರು ಕೂಡ ಹೆಂಡತಿ ಬಾಗಿಲು ತೆರೆಯುವುದಿಲ್ಲ ಎಂದು ವಾದಿಸುತ್ತಾಳೆ. ಅಷ್ಟಕ್ಕೂ ಇಬ್ಬರ ನಡುವಿನ ಹುಸಿ ಮುನಿಸು ಯಾಕೆ ಗೊತ್ತಾ?

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

 

ಗಂಡ 12 ಗಂಟೆಗೆ ಮನೆಯಿಂದ ಹೊರಟು ಒಂದು ಗಂಟೆಗೆ ಬರುತ್ತೇನೆ ಎಂದು ಹೆಂಡತಿಗೆ ಹೇಳಿದ್ದಾನೆ. ಈ ನಡುವೆ ಹೆಂಡತಿ 1:30 ರಿಂದ ಕರೆ ಮಾಡಿದಾಗ ಗಂಡ ಬೇಗ ಬರುವುದಾಗಿ ಹೇಳಿದ್ದಾನೆ. ಆದರೆ ಗಂಡ 3 ಗಂಟೆಗೆ 10 ನಿಮಿಷ ಬಾಕಿಯಿದ್ದಾಗ ಮನೆಗೆ ಬಂದಿದ್ದಾರೆ. ಇದರಿಂದ ಹೆಂಡತಿ ಗಂಡನ ಮೇಲೆ ಕೋಪಿಸಿಕೊಂಡು ಮನೆಯ ಬಾಗಿಲು ತೆರೆಯದೇ ಗಂಡನನ್ನು ಹೊರಗೆ ನಿಲ್ಲಿಸಿದ್ದಾಳೆ. ಪತಿ ತನ್ನನ್ನು ಒಳಗೆ ಬರಲು ಅವಕಾಶ ಮಾಡಿಕೊಡು ಎಂದು ಪತ್ನಿಗೆ ವಿನಂತಿಸುತ್ತಾನೆ.ಈ ಸಂದರ್ಭ ಮೊದಲು 500 ರೂ ನೋಟು ನೀಡಿ ನಂತರ ಬಾಗಿಲು ತೆರೆಯುತ್ತೇನೆ ಎಂದು ಪತ್ನಿ ಹೇಳುತ್ತಾಳೆ. ಇದಕ್ಕೆ ಒಪ್ಪಿದ ಪತಿ ಪರ್ಸ್‌ನಿಂದ 500 ರೂ. ನೀಡಿದ್ದಾನೆ. ಮತ್ತೊಮ್ಮೆ ಹೀಗೆ ಮಾಡದಂತೆ ತಾಕೀತು ಮಾಡಿ ಪತ್ನಿ ಹಣ ವಸೂಲಿ ಮಾಡಿದ್ದಾಳೆ.

https://www.instagram.com/reel/C1Mt0lqowud/?igsh=dDdvOWppcmlpOGJo

ಇದನ್ನು ಓದಿ: BJP: ಬಿ. ಎಲ್ ಸಂತೋಷ್, ಬಸವನಗೌಡ ಯತ್ನಾಳ್’ಗೆ ಬಿಗ್ ಶಾಕ್ ಕೊಟ್ಟ ಬಿಜೆಪಿ ಹೈಕಮಾಂಡ್ !!

Leave A Reply

Your email address will not be published.