Kantara -2: ವಿದೇಶದಲ್ಲಿ ನಡೆಯಲಿದೆ ಕಾಂತಾರ-2 ‘ಪಂಜುರ್ಲಿ’ ದೈವದ ಚಿತ್ರೀಕರಣ, ಇದೆನಾ ಕಾರಣ ?

Entertainment sandalwood news actor Rishabh Shetty's Kantara 2 cinema shooting in London

Kantara -2: ಇಡೀ ವಿಶ್ವವೇ ಕನ್ನಡ ಸಿನಿಮಾ ಇಂಡಸ್ಟ್ರಿಯತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಅಂದ್ರೆ ಅದು ಕಾಂತಾರ. ಇದೀಗ ನಾಡಿನ ಜನ ಭಾರೀ ಕುತೂಹಲದಿಂದ ಕಾದಿರುವ ಕಾಂತಾರ-2(Kantara -2) ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ. ಇದರೊಂದಿಗೆ ಕಾಂತಾರ-2 ಕಾಣುವ ಪಂಜುರ್ಲಿ ದೈವದ ಚಿತ್ರೀಕರಣ ವಿದೇಶದಲ್ಲಿ ನಡೆಯುತ್ತದೆ ಎನ್ನುವ ಸುದ್ದಿಯೊಂದು ಬಂದಿದೆ.

ಹೌದು, ಕಾಂತಾರ 2 ಸಿನಿಮಾದ ಮುಹೂರ್ತದ ಡೇಟ್​ ಕೂಡ ಫಿಕ್ಸ್ ಆಗಿದೆ. ನವೆಂಬರ್​ 27ರಂದು ಕಾಂತಾರ ಪ್ರಿಕ್ವೆಲ್ ಸೆಟ್ಟೇರುತ್ತಿದ್ದು, ಈ ಹಿಂದೆ ಕಾಂತಾರ ಸಿನಿಮಾದ ಮುಹೂರ್ತ ನಡೆದಿದ್ದ ಕೆರಾಡಿಯ ಆನೆಗುಡ್ಡೆ ದೇವಸ್ಥಾನದಲ್ಲಿ ಕಾಂತಾರ 2 ಮುಹೂರ್ತ ನೆರವೇರಲಿದೆ. ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಅನೇಕ ಚಂದನವನದ ಗಣ್ಯರು ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿಯಿದೆ.

ಅಂದಹಾಗೆ ಕಾಂತಾರ ಪ್ರೀಕ್ವೆಲ್​​ಗಾಗಿ ಅದ್ಭುತವಾಗಿ ಕಥೆ ಹೆಣೆದಿರುವ ನಟ ರಿಷಬ್ ಶೆಟ್ಟಿ(Rishab shetty), ಚಿತ್ರದ ಮುಹೂರ್ತ ಪೂಜೆ ಬಳಿಕ ಡಿಸೆಂಬರ್ 2ನೇ ವಾರದಲ್ಲಿ ಶೂಟಿಂಗ್ ಆರಂಭಿಸಲು ಪ್ಲಾನ್ ಮಾಡಿದ್ದು ಎಲ್ಲಾ ಸಿದ್ದತೆಗಳು ನಡೆದಿವೆ. ಇನ್ನು ಕಾಂತಾರ-2 ಹೆಚ್ಚಾಗಿ ವಿದೇಶದಲ್ಲೇ ಚಿತ್ರೀಕರಣಗೊಳ್ಳಲಿದೆಯಂತೆ. ಈಗಾಗಲೇ ಶ್ರೀಲಂಕಾ, ಕರಾವಳಿ ಸುತ್ತಮುತ್ತ ಪ್ರದೇಶಗಳಲ್ಲಿ ಶೂಟಿಂಗ್‌ಗಾಗಿ ಲೊಕೇಶನ್ ಕೂಡ ಫಿಕ್ಸ್ ಮಾಡಿದ್ದು, ಈ ಸಿನಿಮಾದ ಬಹುತೇಕ ಚಿತ್ರೀಕರಣ​ ಶ್ರೀಲಂಕಾದಲ್ಲಿಯೇ ನಡೆಯಲಿದೆ ಎನ್ನಲಾಗ್ತಿದೆ.

ಇದನ್ನೂ ಓದಿ : ಮಂಗಳೂರು:ಶೋಧ ನಡೆಸಿದರೂ ಸಿಗದ ವ್ಯಕ್ತಿಯ ಮೃತದೇಹ, ಮುದ್ದಿನ ನಾಯಿ ಬಂದೊಡನೆ ತೇಲಿ ಬಂತು!! ಪೊಳಲಿ ಫಲ್ಗುಣಿ ನದಿಯಲ್ಲಿ ಹೀಗೊಂದು ಪವಾಡ

1 Comment
  1. RAJESH PADMAR says

    ಇದೆನಾ ಕಾರಣ ?

Leave A Reply

Your email address will not be published.