Love Jihad: ಸುಲಭ್‌ ಶೌಚಾಲಯದಲ್ಲಿ ಹಿಂದೂ ಯುವತಿ ಜೊತೆ ಮುಸ್ಲಿಂ ಯುವಕನ ಅಶ್ಲೀಲ ಕೃತ್ಯ!!! ಹೆಸರು ಮರೆಮಾಚಿ, ಪ್ರೀತಿ ಬಲೆಯಲ್ಲಿ ಬೀಳಿಸ್ತಿದ್ದ ಮುಸ್ಲಿಂ ಯುವಕ!!!

madhya pradesh indore police bajrangdal and love jihad case in madhyapradesh

Love Jihad: ಯುವಕನೋರ್ವ ತನ್ನ ಗುರುತನ್ನು ಮರೆಮಾಚಿ ಹಿಂದೂ ಯುವತಿಯರ ಜೊತೆ ಸ್ನೇಹ ಬೆಳಸಿ, ನಂತರ ಪ್ರೀತಿ ಎಂಬ ಬಲೆಯಲ್ಲಿ ಬೀಳಿಸಿ, ಕೊನೆಯದಾಗಿ ಸುಲಭ್‌ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಅಶ್ಲೀಲ ಕೆಲಸ ಮಾಡುತ್ತಿದ್ದ ಘಟನೆಯೊಂದು ನಡೆದಿದೆ. ಈ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಇದೊಂದು ರೀತಿಯಲ್ಲಿ ಲವ್‌ಜಿಹಾದ್‌ (Love Jihad) ಪ್ರಕರಣ ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಸುಲಭ್‌ ಶೌಚಾಲಯಕ್ಕೆ ಕರೆದುಕೊಂಡು ಹೋಗುವ ಈತ ಅಲ್ಲಿನ ನೌಕರರಿಗೆ 200ರೂ. ನೀಡಿ ಈ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈತನ ಈ ಕುಕೃತ್ಯ ಬುಧವಾರವೂ ಮುಂದುವರಿದಿತ್ತು. ಆದರೆ ಗ್ರಹಚಾರ ಕೆಟ್ಟಿದ್ದರಿಂದ ಏನೋ ಈ ಸುದ್ದಿ ಬಜರಂಗದಳದ ಕಾರ್ಯಕರ್ತರಿಗೆ ಮಾಹಿತಿ ದೊರಕಿದೆ. ಇದು ಅನಂತರ ಬಹಳ ಕೋಲಾಹಲಕ್ಕೆ ಕಾರಣವಾಗಿದ್ದು, ಆರೋಪಿ ಸಾಹಿಲ್‌ ಎಂಬಾತ ಅಲ್ಲಿಂದ ಓಡಿ ಹೋಗಿರುವ ಆರೋಪಿ ಎಂದು ವರದಿಯಾಗಿದೆ.

ಬಜರಂಗದಳದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕಿಯ ವಿಚಾರಣೆ ಹಾಗೂ ಕೌನ್ಸಿಲಿಂಗ್ ಪ್ರಕ್ರಿಯೆ ಆರಂಭಿಸಿದ್ದಾರೆ. ಇಂದೋರ್‌ನ ಪರದೇಸಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜನತಾ ಕ್ವಾರ್ಟರ್‌ನಲ್ಲಿ ಈ ಘಟನೆ ನಡೆದಿದೆ. ಆರೋಪಿ ಜನತಾ ಕ್ವಾರ್ಟರ್ ಬಳಿ ಇರುವ ಸರ್ಕಾರಿ ಶೌಚಾಲಯದಲ್ಲಿ ಈ ಕೃತ್ಯ ಎಸಗಲು ಯತ್ನಿಸಿದ ಸಂದರ್ಭ ಈ ಘಟನೆ ನಡೆದಿದೆ.

ಬಜರಂಗದಳದ ಕಾರ್ಯಕರ್ತರ ಪ್ರಕಾರ ಆರೋಪಿ ಸಾಹಿಲ್‌, ಹಾಗೂ ಈ ಶೌಚಾಲಯದ ನೌಕರರು ಸ್ನೇಹಿತರು. ಸಾಹಿಲ್‌ ತನ್ನ ಹೆಸರನ್ನು ಹಿಂದೂ ಹೆಸರಿನಿಂದ ಸುಳ್ಳು ಹೇಳಿ, ತಿರುಗಾಡುತ್ತಿದ್ದು, ಹಿಂದೂ ಹುಡುಗಿಯರ ಸ್ನೇಹ ಬೆಳೆಸುತ್ತಿದ್ದ. ನಂತರ ಅವರನ್ನು ಪ್ರೀತಿಯಲ್ಲಿ ಸಿಲುಕಿಸಿ ಲೈಂಗಿಕವಾಗಿ ಬಳಸುತ್ತಿದ್ದ.

ಬಜರಂಗದಳದ ಕಾರ್ಯಕರ್ತರ ಪ್ರಕಾರ, ಬುಧವಾರ ತಡರಾತ್ರಿ ಆತ ಮತ್ತೊಬ್ಬ ಹುಡುಗಿಯೊಂದಿಗೆ ಶೌಚಾಲಯಕ್ಕೆ ಬಂದಿರುವ ಮಾಹಿತಿ ದೊರಕಿದ ಕಾರಣ, ಕೂಡಲೇ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದಾರೆ. ಇಲ್ಲಿನ ಅಂಗವಿಕಲರ ಶೌಚಾಲಯದ ಗೇಟ್ ತೆರೆಯಲು ಯತ್ನಿಸಿದಾಗ ತೆರೆಯಲಿಲ್ಲ. ಬಹಳ ಹೊತ್ತು ಬಾಗಿಲು ಬಡಿದ ನಂತರ, ಆರೋಪಿ ಗೇಟ್‌ ತೆರೆದಿದ್ದು, ವಿಚಾರಣೆ ಮಾಡಿದಾಗ ಆರೋಪಿ ತನ್ನ ಹಿಂದೂ ಹೆಸರು ಹೇಳಿದ್ದು, ಆಧಾರ್‌ಕಾರ್ಡ್‌ ಕೇಳಿದಾಗ, ಅಲ್ಲಿಂದ ಓಡಲು ಪ್ರಯತ್ನ ಪಟ್ಟಿದ್ದಾನೆ. ಕೂಡಲೇ ಆತನನ್ನು ಹಿಡಿದ ಬಜರಂಗದಳ ಕಾರ್ಯಕರ್ತರು ಥಳಿಸಿದಾಗ ತನ್ನ ನಿಜ ಹೆಸರನ್ನು ಹೇಳಿದ್ದಾನೆ. ಅಷ್ಟರಲ್ಲಿ ಶೌಚಾಲಯದ ನೌಕರ ಹಾಗೂ ಆರೋಪಿಗಳು ಪರಾರಿಯಾಗಿದ್ದಾರೆ.

ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಗಳ ವಿರುದ್ಧ ಸೂಕ್ತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಶೀಘ್ರವೇ ಹಿಂದೂ ಸಮುದಾಯದ ಜನರು ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: LPG Gas Cylinder: ಇವರಿಗೆ ಖಾಲಿ 500 ರೂ. ಗೆ ಸಿಗ್ತಿದೆ LPG ಸಿಲಿಂಡರ್ – ಪಡೆಯಲು ಮುಗಿ ಬಿದ್ದ ಜನ

[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]

Leave A Reply

Your email address will not be published.