Honour Killing: ಅನ್ಯಜಾತಿ ಯುವಕನ ಜೊತೆ ಪ್ರೀತಿ! ಮಗಳ ಕತ್ತು ಕೊಯ್ದು ಕೊಂದೇ ಬಿಟ್ಟ ತಂದೆ!!!

Bengaluru crime news father killed brutally his own daughter for intercaste love honor killing news

Honour Killing : ಪ್ರೀತಿ ಕುರುಡು ಎಂಬಂತೆ ಪ್ರೀತಿಸಿ(Love) ಮದುವೆಯಾಗುವ (Marriage)ಕನಸು ಹೊತ್ತು ಕೊನೆಗೆ ಮನೆಯವರ ವಿರೋಧ ಕಟ್ಟಿಕೊಂಡು ಜಗಳ, ಗಲಾಟೆ ಆಗುವ ಪ್ರಮೇಯಗಳು ಮಾಮೂಲಿ. ಇದರ ಜೊತೆಗೆ ಮನೆಯವರಿಂದ ಪ್ರಣಯ ಜೋಡಿಗಳು ದೂರಾದ ಅದೇ ರೀತಿ ಸಾವಿನ ಕದ ತಟ್ಟಿದ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದೀಗ, ಅನ್ಯ ಜಾತಿಯ ಹುಡುಗನನ್ನು ಮಗಳು ಪ್ರೀತಿಸುತ್ತಿರುವ ವಿಚಾರ ತಿಳಿದು ತಂದೆಯೇ ಮಗಳನ್ನು ಅಮಾನುಷವಾಗಿ ಹತ್ಯೆ(honour killing) ಮಾಡಿದ ಘಟನೆ ವರದಿಯಾಗಿದೆ.

ಬೆಂಗಳೂರು ಹೊರವಲಯದ ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದಲ್ಲಿ ಮಗಳು ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಾಳೆ (Daughters love with boy from other Caste) ಎಂಬುದನ್ನು ಸಹಿಸದೇ ತಂದೆ ತನ್ನ ಕರುಳ ಕುಡಿ ಎಂಬುದನ್ನು ಮರೆತು ಆಕೆಯನ್ನು ಕೊಂದು (Honour killing) ಹಾಕಿರುವ ಘಟನೆ (Man kills his own daughter) ನಡೆದಿದೆ. ದೇವನಹಳ್ಳಿಯ ಬಿದನೂರು ಗ್ರಾಮದ ಮಂಜುನಾಥ್‌ ಎಂಬುವವರ ಮಗಳು ಕವನ(20)ಕಾಲೇಜಿನಲ್ಲಿ ಓದುತ್ತಿದ್ದು, ಈ ವೇಳೆ ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ತಂದೆ ಮಂಜುನಾಥನಿಗೆ ಮಗಳು ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾಳೆ ಎಂಬ ವಿಚಾರ ತಿಳಿದು ಮಗಳಿಗೆ ಆತನಿಂದ ದೂರ ಇರುವಂತೆ ತಂದೆ ಎಚ್ಚರಿಕೆ ನೀಡಿದ್ದಾರೆ. ಹೀಗಿದ್ದರೂ ಕೂಡ ಆಕೆ ಅಪ್ಪನ ಮಾತನ್ನು ಮೀರಿ ಕದ್ದು ಮುಚ್ಚಿ ಅವನ ಜತೆ ಸಂಬಂಧ ಮುಂದುವರಿಸಿದ್ದು, ಈ ವಿಚಾರ ಬೇರೆ ವ್ಯಕ್ತಿಯಿಂದ ಮಂಜುನಾಥ್ ಅವರಿಗೆ ತಿಳಿದಿದೆ.

ಬುಧವಾರ ರಾತ್ರಿ ಮನೆಯಲ್ಲಿ ಇದೇ ವಿಚಾರದ ಬಗ್ಗೆ ಚರ್ಚೆ ನಡೆದಿದ್ದು, ತಾನು ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿಲ್ಲ ಎಂದು ಮಗಳು ಸುಳ್ಳು ಹೇಳಿದ್ದು, ಆದರೆ ತಂದೆಯ ಬಳಿ ಮಗಳ ಪ್ರೀತಿಗೆ ಪೂರಕ ಮಾಹಿತಿ ಇದ್ದ ಹಿನ್ನೆಲೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.ಕೊನೆಗೆ ಕೋಪಗೊಂಡ ಮಂಜುನಾಥ ತನ್ನ ಮಾತು ಮೀರಿ ಬೇರೆ ಜಾತಿಯ ಹುಡುಗನನ್ನು ಪ್ರೀತಿಸುತ್ತಿರುವ ಮಗಳನ್ನು ಕೊಲೆ ಮಾಡಲು ತೀರ್ಮಾನಿಸಿ, ಅಲ್ಲೇ ಇದ್ದ ಕತ್ತಿಯಿಂದ ಆಕೆಯ ಕತ್ತನ್ನೇ ಸೀಳಿ ಬಿಟ್ಟಿದ್ದಾನೆ. ಇದರ ಜೊತೆಗೆ ಕಾಲು ಸೇರಿದಂತೆ ಬೇರೆ ಭಾಗಗಳಿಗೂ ದಾಳಿ ಮಾಡಿದ್ದಾನೆ ಎನ್ನಲಾಗಿದೆ. ಅಪ್ಪನ ಕ್ರೌರ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

 

ಇದನ್ನು ಓದಿ: ಬಿಗ್ ಬಾಸ್ ಮನೆಯಲ್ಲೂ ಹಾರದ ‘ಡ್ರೋನ್’ !! ಹಾರಿಸಲು ಹೋದ್ರೆ ಹಲವರಿಂದಾಗುತ್ತಿದೆ ‘ಪ್ರತಾಪ’ ಪ್ರಹಾರ

Leave A Reply

Your email address will not be published.