Viral video: ಹಲ್ಲಿಲ್ಲದ, ಬಚ್ಚು ಬಾಯಿ ಮುದಕನೊಂದಿಗೆ ಹರೆಯದ ಸುಂದರಿ ಮದುವೆ – ಫುಲ್ ಖುಷಿಯಾಗಿ ಈ ಅಜ್ಜಯ ಏನು ಮಾಡ್ದ ಗೊತ್ತಾ ?!

Viral Video : ಹಲ್ಲಿಲ್ಲದ, ಬಚ್ಚು ಬಾಯಿ ಮುದುಕನೊಂದಿಗೆ ಹರೆಯದ ಸುಂದರಿ ಮದುವೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಹರೆಯದ ಯುವತಿಯ ಮದುವೆಯಾದ ಖುಷಿಗೆ ಈ ಅಜ್ಜಯ ಏನು ಮಾಡ್ದ ಗೊತ್ತಾ ?! ಇಲ್ಲಿದೆ ನೋಡಿ ಮಾಹಿತಿ!!!
ಸದ್ಯ ಇವರ ಮದುವೆ ವಿಡಿಯೋ (Viral Video) ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ವರನು 80 ರಿಂದ 90 ರ ಹರೆಯದವರಂತೆ ಕಾಣುವ ವ್ಯಕ್ತಿ, ಅವನ ಕುತ್ತಿಗೆಗೆ ವರಮಾಲಾವನ್ನು ಹಾಕಿಕೊಂಡು ನಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ತನಗಿಂತ ತುಂಬಾ ಚಿಕ್ಕವಯಸ್ಸಿನ ತರುಣಿಯನ್ನು ಮದುವೆಯಾಗುತ್ತಿರೋದಕ್ಕೆ ತಾತ ಭಾರೀ ಖುಷಿಯಾಗಿದ್ದಾರೆ.
ಆದರೆ, ವಧು ನಾಚಿಕೆಯಿಂದ ಕಾಣುತ್ತಿದ್ದಾಳೆ. ಹಾಗೂ ಮದುವೆಯಾಗಲು ಉತ್ಸುಕಳಾಗಿಲ್ಲ ಎಂಬುದು ಮುಖದಲ್ಲಿ ಎದ್ದು ಕಾಣುತ್ತಿದೆ.
ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ವಧುವಿನ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದಾರೆ. ಈ ಮುದುಕನಿಗೆ ಅದೃಷ್ಟ ಒಲಿದು ಬಂದಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಹಾಗೇ ಹಲವರು ಹಲವು ರೀತಿಯ ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.