ಸೋಮವಾರ, 26 ಅಕ್ಟೋಬರ್ 2026
Trending

Govt job: ರಾಜ್ಯದಲ್ಲಿ ಬಂಪರ್‌ ಖಾಲಿ ಹುದ್ದೆ, 2 ತಿಂಗಳಲ್ಲಿ 22,000 ಹುದ್ದೆಗಳ ಶೀಘ್ರ ಭರ್ತಿ- ಸರಕಾರದ ಆದೇಶ

ಸರ್ಕಾರದಲ್ಲಿ 1 ಲಕ್ಷ ಸರ್ಕಾರಿ ಹುದ್ದೆಗಳ ನೇಮಕಾತಿ ಯೋಜನೆಯಡಿ 2 ತಿಂಗಳೊಳಗೆ 22 ಸಾವಿರ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ಸಿಎಂ ಹೇಳಿದರು

Govt job

 

Sponsored

Govt job : ಸರ್ಕಾರಿ ಉದ್ಯೋಗ ಪಡೆಯಬೇಕೆನ್ನುವ ಯುವಕರಿಗೆ ಸಿಹಿ ಸುದ್ದಿಯೊಂದು ಬಂದಿದೆ. ರಾಜ್ಯದಲ್ಲಿ ಖಾಲಿ ಇರುವ 22 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಅಸ್ಸಾಂ ಸರ್ಕಾರ ಇತ್ತೀಚೆಗೆ ಘೋಷಿಸಿದೆ. ರಾಜ್ಯದಲ್ಲಿ ಪ್ರಸ್ತುತ ಭಾರತೀಯ ಜನತಾ ಪಕ್ಷದ ಸರ್ಕಾರದಲ್ಲಿ 1 ಲಕ್ಷ ಸರ್ಕಾರಿ ಹುದ್ದೆಗಳ(Govt job) ನೇಮಕಾತಿ ಯೋಜನೆಯಡಿ 2 ತಿಂಗಳೊಳಗೆ 22 ಸಾವಿರ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ಸಿಎಂ ಹೇಳಿದರು. ಇದನ್ನು ಸ್ವತಃ ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಖಚಿತಪಡಿಸಿದ್ದಾರೆ.

ಸಿಎಂ ಹಿಮಂತ ಬಿಸ್ವ ಶರ್ಮಾ ತಮ್ಮ ಅವಧಿಯಲ್ಲಿ ಒಟ್ಟು 87,402 ಸರ್ಕಾರಿ ಉದ್ಯೋಗಗಳನ್ನು ಯುವಕರಿಗೆ ನೀಡಲಾಗಿದೆ ಎಂದು ತಮ್ಮ ಕಾರ್ಯಕ್ರಮದಲ್ಲಿ ಹೇಳಿದರು. ಇನ್ನೆರಡು ತಿಂಗಳೊಳಗೆ ಖಾಲಿ ಇರುವ 22 ಸಾವಿರ ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಲಾಗುವುದು ಎಂದು ತಿಳಿಸಿದರು. ಅಸ್ಸಾಂನ ನಿರುದ್ಯೋಗಿ ಯುವಕರಿಗೆ ಒಂದು ಲಕ್ಷ ಸರ್ಕಾರಿ ಉದ್ಯೋಗಗಳನ್ನು ಒದಗಿಸುವ ಗುರಿಯು ಪೂರ್ಣಗೊಳ್ಳುತ್ತಿದೆ ಎಂದು ಸಿಎಂ ಶರ್ಮಾ ಹೇಳಿದರು.

ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಇಲಾಖೆ ಅಧಿಸೂಚನೆ ಹೊರಡಿಸಲಿದೆ. ಕಾರ್ಯಕ್ರಮವೊಂದರಲ್ಲಿ ಸಿಎಂ ಹಿಮಂತ ಬಿಸ್ವ ಶರ್ಮಾ ಮಾತನಾಡಿ, ವಿವಿಧ ಇಲಾಖೆಗಳಲ್ಲಿ ಕ್ಲಾಸ್-3 ಮತ್ತು ಕ್ಲಾಸ್-4 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಇದಕ್ಕಾಗಿ ಹಿಂದಿನ ಅಸ್ಸಾಂ ನೇರ ನೇಮಕಾತಿ ಪರೀಕ್ಷೆಯ ಮೂಲಕ 514 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: OMG! ಐನ್‌ಸ್ಟೈನ್‌ ಮೆದುಳು ಆನ್‌ಲೈನ್‌ನಲ್ಲಿ ಮಾರಾಟ! ಖರೀದಿಯ ಭರಾಟೆ ಜೋರು!!!

Comments are closed.