BSF recruitment: ಬಿಎಸ್‌ಎಫ್‌ನಲ್ಲಿ ಗ್ರೂಪ್ ಬಿ ಹಾಗೂ ಸಿ ವಿಭಾಗಗಳ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ

Government jobs recruitment news BSF Recruitment Test for Group B and C Category Posts

BSF recruitment : ಗಡಿ ಭದ್ರತಾ ಪಡೆ (ಬಿಎಸ್‌ಎಫ್)ನಲ್ಲಿರುವ ಗ್ರೂಪ್ ಬಿ ಹಾಗೂ ಸಿ ವಿಭಾಗಗಳ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಲಿಖಿತ ಪರೀಕ್ಷೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಪ್ರವೇಶಾತಿ ಪತ್ರ ಬಿಡುಗಡೆ ಮಾಡಲಾಗಿದ್ದು, ಅಭ್ಯರ್ಥಿಗಳು ವೆಬ್‌ಸೈಟ್ ಮೂಲಕ ಪಡೆದುಕೊಳ್ಳಬಹುದು. ಅಭ್ಯರ್ಥಿಯು ಮೊದಲು ಬಿಎಸ್‌ಎಫ್‌ನ(BSF recruitment) ವೆಬ್‌ ಸೈಟ್ https://bsf.gov.in/ಗೆ ಲಾಗಿನ್ ಮಾಡಿಕೊಳ್ಳಬೇಕು.

ಈ ವೇಳೆ ಪ್ರವೇಶಾತಿ ಪತ್ರ ಕಾಣಿಸಿಕೊಳ್ಳಲಿದ್ದು, ಪರೀಕ್ಷಾ ಕೊಠಡಿಗೆ ಹಾರ್ಡ್‌ಕಾಪಿ ತರಬೇಕಿರುವುದರಿಂದ ಡೌನ್ ಲೋಡ್ ಮಾಡಿಕೊಳ್ಳಬೇಕು.ಆ.6ರಿಂದ 1ನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ ಆರಂಭವಾಗಲಿದ್ದು, 3 ಶಿಷ್ಟ್‌ಗಳಲ್ಲಿ ನಡೆಯಲಿವೆ.

ಬೆಳಗ್ಗೆ 8.30ರಿಂದ 10.30 ತನಕ, ಮಧ್ಯಾಹ್ನ 12.30ರಿಂದ 2.30ರವರೆಗೆ ಹಾಗೂ 4.30ರಿಂದ 6 ಗಂಟೆಯವರೆಗೆ ಪರೀಕ್ಷೆ ನಡೆಯಲಿವೆ.

ಇದನ್ನೂ ಓದಿ: ಮಂಗಳೂರು : ಕೆಎಸ್‌ಆರ್‌ಟಿಸಿ ಶಿಶಿಕ್ಷು ತರಬೇತಿಗೆ ಅರ್ಜಿ ಆಹ್ವಾನ

Comments are closed.