Nandini Milk price hike: ಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ತರಕಾರಿಗಳ ಬೆಲೆ ಗಗನಕ್ಕೇರಿರುವ ಮಧ್ಯೆ ಇದೀಗ ಹಾಲಿನ ದರವೂ ಹೆಚ್ಚಳವಾಗಿದೆ. ನಂದಿನಿ ಹಾಲಿನ (Nandini Milk price hike) ದರ 3 ರೂ. ಏರಿಕೆಗೆ ನಿನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆ ಆಗಸ್ಟ್ 1 ರಿಂದ ಈ ಹೊಸ ದರ ಜಾರಿಗೆ ಬರಲಿದೆ.
Sponsoredಈ ಹಿಂದೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಏರ್ಪಡಿಸಿದ್ದ ಹಾಲು ಒಕ್ಕೂಟಗಳು ಮತ್ತು ಕೆಎಂಎಫ್ (KMF) ಪದಾಧಿಕಾರಿಗಳ ಸಭೆಯಲ್ಲಿ ಹಾಲಿನ ದರ ಹೆಚ್ಚಳದ ಬಗ್ಗೆ ಪ್ರಸ್ತಾಪಿಸಿ, ತೀರ್ಮಾನ ಕೈಗೊಳ್ಳಲಾಗಿತ್ತು. KMF ಪ್ರತಿ ಲೀಟರ್ ಹಾಲಿನ ದರದಲ್ಲಿ 5 ರೂ. ಹೆಚ್ಚಳ ಮಾಡುವಂತೆ ಪ್ರಸ್ತಾವ ಸಲ್ಲಿಸಿತ್ತು. ಕೊನೆಗೆ ಸರ್ಕಾರ 3 ರೂ. ಹೆಚ್ಚಳಕ್ಕೆ ಒಪ್ಪಿಗೆ ನೀಡಿತ್ತು. ಆದರೆ, ಇದಕ್ಕೆ ನಿನ್ನೆ ಸಂಪುಟ ಸಭೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹಾಗಾಗಿ ಆಗಸ್ಟ್ 1 ರಿಂದ ನಂದಿನಿ ಹಾಲಿನ ದರ ಹೆಚ್ಚಳ ಜಾರಿಗೆ ಬರಲಿದೆ.
ಪರಿಷ್ಕೃತ ಹಾಲಿನ ದರ:-
ಹೋಮೋಜಿನೈಸ್ಟ್ ಟೋನ್ಸ್ ಹಾಲು :40 ರೂ ದಿಂದ 43 ರೂ.
ಶುಭಂ ಹಾಲು: 45 ರೂ ದಿಂದ 48 ರೂ.
ಮೊಸರು: 47- 50 ರೂ.
ಟೋನ್ಸ್ ಹಾಲು: 39 ರೂದಿಂದ 42 ರೂ.
ಶುಭಂ ಹಾಲು (ಹಸಿರು): 45 ರೂದಿಂದ 48 ರೂ.
ಸ್ಪೆಷಲ್ ಹಾಲು (ಆರೆಂಜ್) : 45 ರೂ ದಿಂದ 48 ರೂ,
ಸಮೃದ್ಧಿ ಹಾಲು : 50 ರೂ ದಿಂದ 53 ರೂ.
ಸಂತೃಪ್ತಿ ಹಾಲು : 52 ರೂ ದಿಂದ 55 ರೂ. ಆಗಿದೆ
ಇದನ್ನು ಓದಿ: Coocking oil price: ಗ್ರಾಹಕರಿಗೆ ಸಿಹಿ ಸುದ್ದಿ ಮೇಲೆ ಸಿಹಿ ಸುದ್ದಿ! ಅಡುಗೆ ಎಣ್ಣೆ ಬೆಲೆ ಇಳಿಕೆ!!!!





