ಸೋಮವಾರ, 26 ಅಕ್ಟೋಬರ್ 2026
Trending

Salman khan: 57 ವರ್ಷವಾದರೂ ನಟ ಸಲ್ಮಾನ್ ಮದುವೆ ಆಗದಿರಲು ಅದರ ಸಮಸ್ಯೆಯೇ ಕಾರಣ: ರಹಸ್ಯ ಮಾಹಿತಿ ಹೊರಬಿಟ್ಟ ಸಲ್ಮಾನ್ ಅಪ್ಪ!!

Salman khan Marriage: ವಯಸ್ಸು 60ರ ಸನಿಹವಾಗುತ್ತಿದ್ದರೂ ಸಲ್ಮಾನ್ ಇನ್ನೂ ಮದುವೆಯಾಗದಿರುವುದಕ್ಕೆ ಅದರ ಸಮಸ್ಯೆಯೇ ಮುಖ್ಯ ಕಾರಣವಂತೆ

Salman Khan Marriage
Image source- Times of India

Salman khan Marriage : ಬಾಲಿವುಡ್ ನಲ್ಲಿ (Bollywood) ಸಾಕಷ್ಟು ಕುತೂಹಲ ಮೂಡಿಸಿರೋ ಪ್ರಶ್ನೆಗಳಲ್ಲಿ (Question) ಒಂದು ಅಂದ್ರೆ ಅದು ಸಲ್ಮಾನ್ ಖಾನ್ (Salman khan) ಮದುವೆ (Marriage) ಯಾವಾಗ ಅನ್ನೋದು. ಅದ್ರಲ್ಲೂ ಸಲ್ಮಾನ್ ಖಾನ್ ಅಭಿಮಾನಿಗಳು ಸಲ್ಮಾನ್ ಖಾನ್ ಯಾವಾಗ ಮದುವೆಯಾಗಿ (Salman khan Marriage), ತಮ್ಮ ಹೆಂಡತಿಯನ್ನ ನಮಗೆ ಪರಿಚಯ ಮಾಡ್ತಾರೆ ಅಂತ ಸದಾ ಕುತೂಹಲದಿಂದ ಕಾಯ್ತಾನೆ ಇದ್ದಾರೆ. ಆದರೆ ವಯಸ್ಸು 60ರ ಸನಿಹವಾಗುತ್ತಿದ್ದರೂ ಸಲ್ಮಾನ್ ಇನ್ನೂ ಮದುವೆಯಾಗದಿರುವುದಕ್ಕೆ ಅದರ ಸಮಸ್ಯೆಯೇ ಮುಖ್ಯ ಕಾರಣವಂತೆ!!

Sponsored

ಹೌದು, ಬಾಲಿವುಡ್ ಬ್ಯಾಡ್ ಬಾಯ್(Bollywood bad boy)ಸಲ್ಲು ಇಂದಿಗೂ ಬ್ರಹ್ಮಚಾರಿ. ಸಲ್ಮಾನ್ ಗೆ ಹಲವು ನಟಿಯರ ಜೊತೆ ಅಫೇರ್ ಇತ್ತು ಎನ್ನುವುದು ಬಾಲಿವುಡ್ ನಲ್ಲಿ ಸದಾ ಚಾಲ್ತಿಯಲ್ಲಿರುವ ಗಾಸಿಪ್. ಅಷ್ಟೊಂದು ಗರ್ಲ್ ಫ್ರೆಂಡ್ಸ್(Girl friend) ಇದ್ದರೂ ಕೂಡಾ ಸಲ್ಮಾನ್ ಇಂದಿಗೂ ಬ್ರಹ್ಮಚಾರಿ. ಇದು ಯಾಕೆ ಹೀಗೆ ಎನ್ನುವುದು ಸಲ್ಮಾನ್ ಅಭಿಮಾನಿಗಳ ಮನದಲ್ಲಿ ಮೂಡುವ ಅತಿ ದೊಡ್ಡ ಪ್ರಶ್ನೆ. ಆದರೀಗ ಬಹಳ ಕುತೂಹಲದ ಈ ಪ್ರಶ್ನೆಗೆ ಸಲ್ಮಾನ್ ತಂದೆ ಸಲೀಂ ಖಾನ್ ಅವರೆ ಉತ್ತರಿಸಿದ್ದಾರೆ.

Advertisement

ಯಸ್ ಚಾಟ್ ಶೋವೊಂದರಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರವಾಗಿ ಸಲೀಂ ಖಾನ್(Salim khan) ಸತ್ಯ ಹೊರ ಹಾಕಿದ್ದಾರೆ. ಸಲ್ಮಾನ್ ಖಾನ್ ಮದುವೆಯಾಗದೇ ಇರುವುದಕ್ಕೆ ಏನು ಕಾರಣ ಎನ್ನುವುದನ್ನು ಹೇಳಿದ್ದಾರೆ. ಸಲ್ಮಾನ್ ಖಾನ್ ಇನ್ನೂ ಬ್ರಹ್ಮಚಾರಿಯಾಗಿರುವುದಕ್ಕೆ ಕಾರಣ ಏನು ಎನ್ನುವುದನ್ನು ಈ ಶೋನಲ್ಲಿ ಕೇಳಲಾಗಿದೆ. ಈ ಸಂದರ್ಭದಲ್ಲಿ ಈ ಪ್ರಶ್ನೆಗೆ ಸಲ್ಮಾನ್ ತಂದೆ ಸಲೀಂ ಉತ್ತರ ನೀಡಿದ್ದಾರೆ. ಹೌದು, ಸಲ್ಮಾನ್ ಖಾನ್ ಮದುವೆಯಾಗದಿರಲು ಅವರ ತಾಯಿ ಸಲ್ಮಾ ಖಾನ್(Salma khan) ಕಾರಣ ಎಂದು ಸಲೀಂ ಖಾನ್ ಹೇಳಿದ್ದಾರೆ. ಆದರೆ ಸಲ್ಮಾನ್ ಮದುವೆಯಾಗದೇ ಇರುವುದಕ್ಕೆ ಸಲ್ಮಾ ಖಾನ್ ಹೇಗೆ ಹೊಣೆ ಎನ್ನುವ ಪ್ರಶ್ನೆ ಮೂಡುತ್ತದೆ. ಇದನ್ನೂ ಕೂಡಾ ಸಲೀಂ ವಿವರವಾಗಿ ವಿವರಿಸಿದ್ದಾರೆ.

ಸಲ್ಮಾನ್ ಖಾನ್ ಇಲ್ಲಿಯವರೆಗೆ ಅನೇಕ ಮಂದಿ ಹುಡುಗಿಯರ ಜೊತೆ ಪ್ರೀತಿ ಸಂಬಂಧ ಇರಿಸಿಕೊಂಡಿದ್ದಾರೆ. ಆದರೆ ಯಾವ ಹುಡುಗಿಯನ್ನು ಸಲ್ಮಾನ್ ಪ್ರೀತಿಸುತ್ತಾರೋ, ಆ ಹುಡುಗಿಯಲ್ಲಿ ತನ್ನ ತಾಯಿಯನ್ನು ಹುಡುಕಲು ಪ್ರಾರಂಭಿಸುತ್ತಾರಂತೆ. ಇದರ ಪರಿಣಾಮವಾಗಿಯೇ ಆ ಹುಡುಗಿ ಸಲ್ಮಾನ್ ಅನ್ನು ಬಿಟ್ಟು ಹೋಗುತ್ತಾಳೆ. ಪ್ರೀತಿ ಮದುವೆಯಾಗಿ ಪರಿವರ್ತನೆಯಾಗಲೇ ಇಲ್ಲ. ಈ ಕಾರಣದಿಂದಾಗಿಯೇ 57 ವರ್ಷಗಳಾದರೂ ಸಲ್ಮಾನ್ ಇಲ್ಲಿಯವರೆಗೆ ಬ್ರಹ್ಮಚಾರಿಯಾಗಿಯೇ ಉಳಿದಿದ್ದಾರೆ.

ಇದಲ್ಲದೆ ಈ ಹಿಂದೆ ಅಂದರೆ ಸುಮಾರು 2014ರಲ್ಲಿ ಬಿಗ್ ಬಾಸ್(Bigg boss) ಸೆಟ್ ನಲ್ಲಿ ನಟಿ ರೇಖಾ(Rekha) ಸೂಪರ್ ನಾನಿ ಚಿತ್ರದ ಪ್ರಚಾರಕ್ಕೆ ಆಗಮಿಸಿದ್ರು. ಈ ವೇಳೆ ಸಲ್ಮಾನ್ ಖಾನ್ ಮದುವೆ ಯಾಕೆ ಆಗಿಲ್ಲ, ಮದುವೆ ಯಾವಾಗ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಸಲ್ಮಾನ್, ನಾನು ಮದುವೆ ಆಗದೆ ಇರೋದಕ್ಕೆ ಕಾರಣ ರೇಖಾ ಅಂತ ಹೇಳಿದ್ದರು. ಸಲ್ಮಾನ್ ಖಾನ್ ಅವರಿಗೆ ಬಾಲ್ಯದಿಂದಲೂ ರೇಖಾ ಅವರನ್ನ ಮದುವೆಯಾಗುವ ಆಸೆ ಇತ್ತಂತೆ. ಈ ಬಗ್ಗೆ ತಮ್ಮ ಗೆಳೆಯರ ಬಳಿ ಹಲವು ಬಾರಿ ಸಲ್ಮಾನ್ ಖಾನ್ ಹೇಳಿಕೊಂಡಿದ್ರಂತೆ. ಅಲ್ಲದೆ ರೇಖಾರಿಂದಾಗಿಯೇ ನಾನಿನ್ನು ಮದುವೆಯಾಗದೆ ಒಂಟಿಯಾಗಿದ್ದೇನೆ ಅಂತ ಸ್ವತಃ ಸಲ್ಮಾನ್ ಖಾನ್ ಅವರೇ ಆಗ ಹೇಳಿಕೊಂಡಿದ್ದರು.

ಇದನ್ನೂ ಓದಿ: Tipu sulthan: 1.5 ಕೋಟಿಗೆ ವಿಜಯ್ ಮಲ್ಯ ಖರೀದಿಸಿದ್ದ ಟಿಪ್ಪು ಸುಲ್ತಾನ್‌ ಖಡ್ಗವೀಗ 140 ಕೋಟಿಗೆ ಮಾರಾಟ!! ಏನಿದರ ವಿಶೇಷತೆ?