Car Accident: ಬಂಟ್ವಾಳ: ಕಾರು ಡಿಕ್ಕಿ ಪಾದಚಾರಿ ಮಹಿಳೆ ಸಾವು

woman died in a car accident

Car Accident: ಮಂಗಳೂರು: ಬಂಟ್ವಾಳ ತಾಲೂಕಿನ ವಗ್ಗದಲ್ಲಿ ಕಾರು ಡಿಕ್ಕಿಯಾಗಿ ಪಾದಾಚಾರಿ ಮಹಿಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತಪಟ್ಟ ಮಹಿಳೆಯನ್ನು ಸೇಸಮ್ಮ ಎಂದು ಗುರುತಿಸಲಾಗಿದೆ.

ಸೇಸಮ್ಮ ಅವರು ವಗ್ಗ ಪೇಟೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಮಂಗಳೂರಿನ ಕಡೆ ವೈದ್ಯೆಯೊಬ್ಬರು ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿದೆ.

ಅಜಾಗರೂಕತೆ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಪಾದಾಚಾರಿ ಮಹಿಳೆ ಸೇಸಮ್ಮ ಅಪಘಾತದಲ್ಲಿ ಗಂಭೀರ ಗಾಯಗೊಂಡು, ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ.

 

ಇದನ್ನು ಓದಿ: DK Shivakumar: ಡಿಕೆ ಶಿವಕುಮಾರ್ ಖರ್ಗೆ ಮಾತುಕತೆ ಅಂತ್ಯ, ಸಿಎಂ ಹುದ್ದೆಯನ್ನು ತಮಗೇ ನೀಡಬೇಕು, ಬೇರೆ ಯಾವುದೇ ಹುದ್ದೆ ನನಗೆ ಬೇಡ – ಡಿಕೆಶಿ ಬಿಗಿಪಟ್ಟು 

Leave A Reply

Your email address will not be published.