Bantwala news

ಸಾಫ್ಟ್ ಮಾತಿನ ಸಾಫ್ಟ್ ವೆರ್ ಇಂಜಿನಿಯರ್!! ಬಂಟ್ವಾಳದ ಯುವತಿಯ ಫೇಸ್ಬುಕ್ ಪ್ರೇಮದಲ್ಲಿ ನಡೆಯಿತು ಮಹಾಮೋಸ

ಬಂಟ್ವಾಳ:ಫೇಸ್ಬುಕ್ ಬುಕ್ ಪ್ರೇಮವೊಂದು ಕೈಕೊಟ್ಟು,ಯುವತಿ ಕಂಗಾಲಾದ ಘಟನೆಯೊಂದು ಜಿಲ್ಲೆಯ ಬಂಟ್ವಾಳದಿಂದ ವರದಿಯಾಗಿದೆ.ಇಲ್ಲಿನ ಯುವತಿಯೋರ್ವಳು ಕಳೆದ ಕೆಲ ವರ್ಷಗಳಿಂದ ಫೇಸ್ಬುಕ್ ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಪ್ರೀತಿಸಿದ್ದು,ಸದ್ಯ ಆಕೆಯ ಪ್ರಿಯಕರನ ನಿಜಬಣ್ಣ ಬಯಲಾಗುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ. ಹೌದು, ಕಳೆದ ಕೆಲ ವರ್ಷಗಳ ಹಿಂದೆ ಇಲ್ಲಿನ ಯುವತಿಗೆ ಫೇಸ್ಬುಕ್ ನಲ್ಲಿ ಪರಿಚಯವಾದ ಮಂಗಳಮುಖಿಯು ಗಂಡಸಿನ ಧ್ವನಿಯಲ್ಲಿ ಮಾತನಾಡಿ ಪ್ರೀತಿಯ ನಾಟಕವಾಡಿದ್ದ.ತಾನು ಸಾಫ್ಟ್ ವೆರ್ ಇಂಜಿನಿಯರ್ ಎನ್ನುತ್ತಾ ಮಾತನಾಡುತ್ತಿದ್ದ ಮಂಗಳಮುಖಿ ಹಾಗೂ ಯುವತಿಯ ನಡುವೆ ಚಾಟಿಂಗ್, ದೂರವಾಣಿ ಕರೆಗಳು ಮಾಮೂಲಾಗಿತ್ತು. ಹೀಗೆ ಮುಂದುವರಿದ …

ಸಾಫ್ಟ್ ಮಾತಿನ ಸಾಫ್ಟ್ ವೆರ್ ಇಂಜಿನಿಯರ್!! ಬಂಟ್ವಾಳದ ಯುವತಿಯ ಫೇಸ್ಬುಕ್ ಪ್ರೇಮದಲ್ಲಿ ನಡೆಯಿತು ಮಹಾಮೋಸ Read More »

ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ

ಭಾರಿ ಮಳೆಯ ಹಿನ್ನೆಲೆಯಿಂದ ಬಂಟ್ವಾಳ ಮತ್ತು ಬೆಳ್ತಂಗಡಿಯ ರಾಷ್ಟ್ರೀಯ ಹೆದ್ದಾರಿ 73ರ ಕೆಲವು ಕಡೆಗಳಲ್ಲಿ ಗುಡ್ಡ ಮತ್ತು ಅಲ್ಲಲ್ಲಿ ಮಣ್ಣು ಕುಸಿದು ಸಂಚಾರಕ್ಕೆ ಸಮಸ್ಯೆ ಉಂಟಾದ ಘಟನೆ ವರದಿಯಾಗಿದೆ. ಹಳೆಗೇಟು, ವಗ್ಗದ ಬಳಿ ಗುಡ್ಡವು ಕುಸಿತಗೊಂಡಿದ್ದು, ರಸ್ತೆಯಲ್ಲಿ ಬಂಡೆಗಳು ಮತ್ತು ಮರಗಳು ಬಿದ್ದು ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಈ ಗುಡ್ಡ ಕುಸಿತದಿಂದ ಸ್ಥಳೀಯರಲ್ಲಿ, ವಾಹನ ಸವಾರರಲ್ಲಿ ಆತಂಕ ಎದುರಾಗಿದೆ. ಇತ್ತ ಶಿರಾಡಿ ಘಾಟ್ನಲ್ಲಿ ರಸ್ತೆ ಸಂಚಾರ ಬಂದ್ ಆದ ಕಾರಣ, ಈಗ ಈ ರಸ್ತೆಗಳಲ್ಲಿ ಹೆಚ್ಚು ವಾಹನಗಳು …

ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ Read More »

ಬಂಟ್ವಾಳ: ಸಾಲದ ಹಣ ಮರು ಪಾವತಿಸದೆ ವಂಚನೆ!! ಕೇಳಲು ಬಂದ ಮಹಿಳೆಗೆ ಅವಾಚ್ಯ ನಿಂದನೆ-ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲು

ಬಂಟ್ವಾಳ:ಸಾಲ ನೀಡಿದ ಹಣವನ್ನು ಮರಳಿಸದೇ ವಂಚಿಸಿದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಯೊಂದು ಬೆಳಕಿಗೆ ಬಂದಿದ್ದು ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಬಂಟ್ವಾಳ ಠಾಣಾ ವ್ಯಾಪ್ತಿಯ ಸಜೀಪಮುನ್ನೂರು ನಿವಾಸಿ ಜೀನತ್ ಎನ್ನುವ ಮಹಿಳೆಯೊಬ್ಬರು ಪಾಣೆಮಂಗಳೂರು ಮೂಲದ ಆಲಿಯಮ್ಮ ಎಂಬಾಕೆಗೆ ಹಣ ಸಾಲದ ರೀತಿಯಲ್ಲಿ ಸುಮಾರು 7,55000 ಹಣವನ್ನು ನೀಡಿದ್ದು, ಮೊದಲ ಕಂತನ್ನು ಬಿಟ್ಟು ಉಳಿದೆಲ್ಲಾ ಕಂತಿಗೆ ಬಿಸಿರೋಡ್ ನ ವಕೀಲರೊಬ್ಬರ ಮುಖಾಂತರ ಕರಾರು ಪತ್ರಗಳನ್ನು ಮಾಡಿ ಇಬ್ಬರು ಸಾಕ್ಷಿದಾರರನ್ನು …

ಬಂಟ್ವಾಳ: ಸಾಲದ ಹಣ ಮರು ಪಾವತಿಸದೆ ವಂಚನೆ!! ಕೇಳಲು ಬಂದ ಮಹಿಳೆಗೆ ಅವಾಚ್ಯ ನಿಂದನೆ-ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲು Read More »

ಬಂಟ್ವಾಳ: ಅಪಾಯದ ಮುನ್ಸೂಚನೆ ಅರಿತರೂ ಆಕೆಯ ನಿರ್ಲಕ್ಷ್ಯಕ್ಕೆ ಬಲಿಯಾಯಿತು ಮೂರು ಅಮಾಯಕ ಜೀವ!! | ಗುಡ್ಡ ಕುಸಿದು ಕಾರ್ಮಿಕರ ಸಾವು ಪ್ರಕರಣಕ್ಕೆ ತಿರುವು

ಬಂಟ್ವಾಳ:ಕಾರ್ಮಿಕರು ತಂಗಿದ್ದ ಶೆಡ್ ಒಂದರ ಮೇಲೆ ಭಾರೀ ಮಳೆಗೆ ಗುಡ್ಡ ಕುಸಿದು, ಮೂವರು ಸ್ಥಳದಲ್ಲೇ ಮೃತಪಟ್ಟು ಓರ್ವ ಗಂಭೀರ ಗಾಯಗೊಂಡ ಘಟನೆಯು ತಾಲೂಕಿನ ಪಂಜಿಕಲ್ಲು ಎಂಬಲ್ಲಿ ನಡೆದಿದೆ. ಈ ಘಟನೆಗೆ ಮನೆಯ ಮಾಲಕಿಯ ನಿರ್ಲಕ್ಷವೇ ಕಾರಣವೆಂದು ಸಾರ್ವಜನಿಕರ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜುಲೈ 5 ರಂದು ಸಂಜೆ ಗುಡ್ಡ ಕುಸಿತದ ಪ್ರದೇಶಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಹಳೆಮನೆ ಕಟ್ಟಡದಲ್ಲಿ ವಾಸವಿದ್ದ ಕಾರ್ಮಿಕರನ್ನು ತೆರವುಗೊಳಿಸುವಂತೆ, ಜಾಗ್ರತೆವಹಿಸಲು ಸೂಚನೆಗಳನ್ನು ನೀಡಲಾಗಿತ್ತು. ಆದರೂ ಕೂಡ …

ಬಂಟ್ವಾಳ: ಅಪಾಯದ ಮುನ್ಸೂಚನೆ ಅರಿತರೂ ಆಕೆಯ ನಿರ್ಲಕ್ಷ್ಯಕ್ಕೆ ಬಲಿಯಾಯಿತು ಮೂರು ಅಮಾಯಕ ಜೀವ!! | ಗುಡ್ಡ ಕುಸಿದು ಕಾರ್ಮಿಕರ ಸಾವು ಪ್ರಕರಣಕ್ಕೆ ತಿರುವು Read More »

ಬಂಟ್ವಾಳ : ಮಹಿಳೆಗೆ ಫೋನಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ | ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶ

ಬಂಟ್ವಾಳ: ಮಹಿಳೆಗೆ ಪೋನಿನಲ್ಲಿ ಅವಾಚ್ಯ ಶಬ್ದಗಳಿಂದ ಬೈದು, ಅಶ್ಲೀಲವಾಗಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ತನಿಖೆ ನಡೆಸುವಂತೆ ಬಂಟ್ವಾಳ ವೃತ್ತ ನಿರೀಕ್ಷಕರಿಗೆ, ಬಂಟ್ವಾಳ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರು ಆದೇಶಿಸಿದ್ದಾರೆ. ಆರೋಪಿ ವಲ್ಲಿ ಯಾನೆ ವಾಲ್ಟರ್. ತಾಲೂಕಿನ ಬರಿಮಾರು ಗ್ರಾಮದ ಕೃಷಿಕ ಕುಟುಂಬದ ಮಹಿಳೆಯೋರ್ವರಿಗೆ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ, ಫೋನ್ ಮುಖಾಂತರ ಆರೋಪಿ ವಲ್ಲಿ ಯಾನೆ ವಾಲ್ಟರ್ ಕೊಲೆ ಬೆದರಿಕೆ ಒಡ್ಡಿ ಅವ್ಯಾಚ್ಯ ಶಬ್ದಗಳಿಂದ ಬೈದು, ಅಶ್ಲೀಲ ವಾಗಿ ನಿಂದಿಸಿದ್ದಾನೆ. ಈ ಬಗ್ಗೆ ಪೋಲೀಸ್ ಠಾಣೆಗೆ ಹಾಗು ದ.ಕ …

ಬಂಟ್ವಾಳ : ಮಹಿಳೆಗೆ ಫೋನಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ | ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶ Read More »

ಬಂಟ್ವಾಳ: ನೇತ್ರಾವತಿ ನದಿಗೆ ಈಜಲು ತೆರಳಿದ್ದ ಯುವಕರ ತಂಡ ನೀರುಪಾಲು!!

ಬಂಟ್ವಾಳ: ತಾಲೂಕಿನ ಪಡು ಸಜೀಪ ಗ್ರಾಮದ ತಲೆಮೊಗರು ಎಂಬಲ್ಲಿನ ನೇತ್ರಾವತಿ ನದಿಗೆ ಈಜಲು ತೆರಳಿದ್ದ ಐವರ ತಂಡವೊಂದು ನೀರುಪಾಲಾಗಿದ್ದು,ಸ್ಥಳೀಯರ ಸಮಯ ಪ್ರಜ್ಞೆಯಿಂದ ನಾಲ್ವರ ರಕ್ಷಣೆ ನಡೆದು ಓರ್ವನಿಗಾಗಿ ಶೋಧ ಮುಂದುವರಿದಿದೆ. ನೀರುಪಾಲಾದ ಯುವಕನನ್ನು ತಲೆಮೊಗರು ನಿವಾಸಿ ರುಕ್ಮಯ್ಯ ಎಂಬವರ ಪುತ್ರ ಅಶ್ವಿತ್ (19) ಎಂದು ಗುರುತಿಸಲಾಗಿದ್ದು,ಯುವಕನ ಪತ್ತೆಗಾಗಿ ಮುಳುಗು ತಜ್ಞರ ಸಹಿತ ಅಗ್ನಿ ಶಾಮಕ ದಳ ಕಾರ್ಯಾಚರಣೆ ಪ್ರಾರಂಭಿಸಿದೆ. ಘಟನೆ ವಿವರ:ಸ್ಥಳೀಯ ಯುವಕರಾದ ಅಶ್ವಿತ್, ಹರ್ಷಿತ್,ಲಿಖಿತ್, ವಿಕೇಶ್, ಹಾಗೂ ವಿಶಾಲ್ ಎಂಬ ಸ್ನೇಹಿತರ ತಂಡವೊಂದು ತಲೆಮಾರು ಎಂಬಲ್ಲಿ …

ಬಂಟ್ವಾಳ: ನೇತ್ರಾವತಿ ನದಿಗೆ ಈಜಲು ತೆರಳಿದ್ದ ಯುವಕರ ತಂಡ ನೀರುಪಾಲು!! Read More »

ವಿ.ಹಿಂ.ಪ ಬಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಬೃಹತ್ ರಕ್ತದಾನ ಶಿಬಿರ!! ದಾಖಲೆಯ 108 ಯುನಿಟ್ ರಕ್ತ ಸಂಗ್ರಹ

ವಿಶ್ವಹಿಂದುಪರಿಷದ್ ಬಜರಂಗದಳ ಪರಶುರಾಮ ಶಾಖೆ ಬಂಟ್ವಾಳ ನಗರ ಬಂಟ್ವಾಳ ಪ್ರಖಂಡದ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ ಕೆ.ಎಮ್.ಸಿ ಮಂಗಳೂರು ಮತ್ತು ವೆನ್ ಲಾಕ್ ಆಸ್ಪತ್ರೆ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು.ಶಿಬಿರದಲ್ಲಿ 180 ಯೂನಿಟ್ ರಕ್ತ ಸಂಗ್ರಹ ಮಾಡಲಾಗಿದ್ದು,ರಕ್ತದಾನದ ವಿಷಯಗಳಲ್ಲಿ ತಕ್ಷಣ ಸ್ಪಂದಿಸುವ ಬಂಟ್ವಾಳ ಪ್ರಖಂಡದ ಸೇವಾ ಪ್ರಮುಖ್ ಪ್ರಸಾದ್ ಶಿವಾಜಿನಗರ ಬೆಂಜನಪದವು ಹಾಗೂ ಕಿರಣ್ ಕಾಪಿಕಾಡ್ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಪುತ್ತೂರು ಜಿಲ್ಲಾ ಅಧ್ಯಕ್ಷರು ಡಾ ಕೃಷ್ಣ ಪ್ರಸನ್ನ ಪ್ರಸಾದ್ …

ವಿ.ಹಿಂ.ಪ ಬಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಬೃಹತ್ ರಕ್ತದಾನ ಶಿಬಿರ!! ದಾಖಲೆಯ 108 ಯುನಿಟ್ ರಕ್ತ ಸಂಗ್ರಹ Read More »

ಬಂಟ್ವಾಳ : ಗೋ ಕಳ್ಳತನ ಹಾಗೂ ಮಾಂಸದ ಅಡ್ಡೆಗೆ ಪೊಲೀಸ್ ದಾಳಿ, ಆರೋಪಿಗಳ ಬಂಧನ

ಬಂಟ್ವಾಳ: ಗೋ ಕಳ್ಳತನ ಮಾಡಿ, ಕಡಿದು ಮಾರಾಟ ಮಾಡುತ್ತಿದ್ದ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳು ಸಹಿತ ದನದ ಮಾಂಸವನ್ನು ವಶಪಡಿಸಿಕೊಂಡಿರುವ ಘಟನೆ ಗೋಳ್ತಮಜಲು ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿಗಳು ಗೋಳ್ತಮಜಲು ನಿವಾಸಿಗಳಾದ ಮಹಮ್ಮದ್ ಮತ್ತು ಸಾಧಿಕ್. ಗೋಳ್ತಮಜಲು ಮಹಮ್ಮದ್ ಎಂಬವರ ಮನೆಯಲ್ಲಿ ಕದ್ದು ತಂದ ದನಗಳನ್ನು ವಧೆ ಮಾಡಿದ ಬಳಿಕ, ಮಾಂಸಗಳನ್ನು ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಸ್ಥಳೀಯರಿಂದ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್ ಐ.ಅವಿನಾಶ್ ನೇತೃತ್ವದ ನಗರ ಠಾಣಾ …

ಬಂಟ್ವಾಳ : ಗೋ ಕಳ್ಳತನ ಹಾಗೂ ಮಾಂಸದ ಅಡ್ಡೆಗೆ ಪೊಲೀಸ್ ದಾಳಿ, ಆರೋಪಿಗಳ ಬಂಧನ Read More »

ಬಂಟ್ವಾಳ : ತೀವ್ರವಾದ ಜ್ವರದಿಂದ ಬಳಲುತ್ತಿದ್ದ ಬಾಲಕಿ ಸಾವು

ಬಂಟ್ವಾಳ: ಬಾಲಕಿಯೋರ್ವಳು ತೀವ್ರವಾದ ಜ್ವರಕ್ಕೆ ಬಲಿಯಾಗಿರುವ ಘಟನೆ ಕಲ್ಲಡ್ಕದಲ್ಲಿ ನಡೆದಿದೆ. ಮೃತ ಬಾಲಕಿ ಕಲ್ಲಡ್ಕದ ಹನುಮಾನ್ ನಗರ ನಿವಾಸಿ ರವಿ ಆಚಾರ್ಯ ಎಂಬವರ ಪುತ್ರಿ ಆರಾಧ್ಯ(6). ಈಕೆ ಮಾಣಿಯ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದು, ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಬಾಲಕಿಗೆ ಸ್ಥಳೀಯ ವೈದ್ಯರಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಎರಡು ದಿನಗಳ ಹಿಂದೆ ಜ್ವರ ಏಕಾಏಕಿ ಹೆಚ್ಚಳವಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ.

ಬಂಟ್ವಾಳ : ನಿಷೇಧಿತ ಮಾದಕ ದ್ರವ್ಯ ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯ ಬಂಧನ!

ಬಂಟ್ವಾಳ: ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾದ ನಿಷೇಧಿತ ಮಾದಕ ದ್ರವ್ಯ ಸೇವಿಸಿ ನಶೆಯಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಜಂಕ್ಷನ್ ಬಳಿ ನಡೆದಿದೆ. ಬಂಧಿತ ಆರೋಪಿ ಸಜೀಪನಡು ನಿವಾಸಿ ಮೊಹಮ್ಮದ್ ಜಾಫರ್ (34) ಎಂದು ತಿಳಿದು ಬಂದಿದೆ. ಪಿಎಸ್ ಐ ಹರೀಶ್ ಎಂ ಆರ್ ತನ್ನ ಸಿಬ್ಬಂದಿಯ ಜೊತೆ ರೌಂಡ್ಸ್ ಕರ್ತವ್ಯದಲ್ಲಿದ್ದ ಸಂದರ್ಭ ಸಜೀಪ ಜಂಕ್ಷನ್ ಬಳಿ ಅಮಲಿನಂತೆ ವರ್ತಿಸುತ್ತಿರುವ ವ್ಯಕ್ತಿಯನ್ನು ಕಂಡು ವಿಚಾರಿಸಿದಾಗ, ಈತ ಕಾನೂನು ಬಾಹಿರವಾದ ನಿಷೇಧಿತ ಮಾದಕ ದ್ರವ್ಯ ಸೇವನೆ …

ಬಂಟ್ವಾಳ : ನಿಷೇಧಿತ ಮಾದಕ ದ್ರವ್ಯ ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯ ಬಂಧನ! Read More »

error: Content is protected !!
Scroll to Top