ಭಾರಿ ಮಳೆಯ ಹಿನ್ನೆಲೆಯಿಂದ ಬಂಟ್ವಾಳ ಮತ್ತು ಬೆಳ್ತಂಗಡಿಯ ರಾಷ್ಟ್ರೀಯ ಹೆದ್ದಾರಿ 73ರ ಕೆಲವು ಕಡೆಗಳಲ್ಲಿ ಗುಡ್ಡ ಮತ್ತು ಅಲ್ಲಲ್ಲಿ ಮಣ್ಣು ಕುಸಿದು ಸಂಚಾರಕ್ಕೆ ಸಮಸ್ಯೆ ಉಂಟಾದ ಘಟನೆ ವರದಿಯಾಗಿದೆ.
ಹಳೆಗೇಟು, ವಗ್ಗದ ಬಳಿ ಗುಡ್ಡವು ಕುಸಿತಗೊಂಡಿದ್ದು, ರಸ್ತೆಯಲ್ಲಿ ಬಂಡೆಗಳು ಮತ್ತು ಮರಗಳು ಬಿದ್ದು ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಈ ಗುಡ್ಡ ಕುಸಿತದಿಂದ ಸ್ಥಳೀಯರಲ್ಲಿ, ವಾಹನ ಸವಾರರಲ್ಲಿ ಆತಂಕ ಎದುರಾಗಿದೆ.
ಇತ್ತ ಶಿರಾಡಿ ಘಾಟ್ನಲ್ಲಿ ರಸ್ತೆ ಸಂಚಾರ ಬಂದ್ ಆದ ಕಾರಣ, ಈಗ ಈ ರಸ್ತೆಗಳಲ್ಲಿ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ಇಲ್ಲಿಯೂ ಸಂಚಾರ ಬಂದ್ ಆದರೆ ವಾಹನ ಸಂಚಾರಕ್ಕೆ ಮತ್ತು ಜನರಿಗೆ ತುಂಬಾನೇ ಕಷ್ಟಕರವಾಗಲಿದೆ.
You must log in to post a comment.