ಸಾಫ್ಟ್ ಮಾತಿನ ಸಾಫ್ಟ್ ವೆರ್ ಇಂಜಿನಿಯರ್!! ಬಂಟ್ವಾಳದ ಯುವತಿಯ ಫೇಸ್ಬುಕ್ ಪ್ರೇಮದಲ್ಲಿ ನಡೆಯಿತು ಮಹಾಮೋಸ

ಬಂಟ್ವಾಳ:ಫೇಸ್ಬುಕ್ ಬುಕ್ ಪ್ರೇಮವೊಂದು ಕೈಕೊಟ್ಟು,ಯುವತಿ ಕಂಗಾಲಾದ ಘಟನೆಯೊಂದು ಜಿಲ್ಲೆಯ ಬಂಟ್ವಾಳದಿಂದ ವರದಿಯಾಗಿದೆ.ಇಲ್ಲಿನ ಯುವತಿಯೋರ್ವಳು ಕಳೆದ ಕೆಲ ವರ್ಷಗಳಿಂದ ಫೇಸ್ಬುಕ್ ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಪ್ರೀತಿಸಿದ್ದು,ಸದ್ಯ ಆಕೆಯ ಪ್ರಿಯಕರನ ನಿಜಬಣ್ಣ ಬಯಲಾಗುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ.

ಹೌದು, ಕಳೆದ ಕೆಲ ವರ್ಷಗಳ ಹಿಂದೆ ಇಲ್ಲಿನ ಯುವತಿಗೆ ಫೇಸ್ಬುಕ್ ನಲ್ಲಿ ಪರಿಚಯವಾದ ಮಂಗಳಮುಖಿಯು ಗಂಡಸಿನ ಧ್ವನಿಯಲ್ಲಿ ಮಾತನಾಡಿ ಪ್ರೀತಿಯ ನಾಟಕವಾಡಿದ್ದ.ತಾನು ಸಾಫ್ಟ್ ವೆರ್ ಇಂಜಿನಿಯರ್ ಎನ್ನುತ್ತಾ ಮಾತನಾಡುತ್ತಿದ್ದ ಮಂಗಳಮುಖಿ ಹಾಗೂ ಯುವತಿಯ ನಡುವೆ ಚಾಟಿಂಗ್, ದೂರವಾಣಿ ಕರೆಗಳು ಮಾಮೂಲಾಗಿತ್ತು.


Ad Widget

Ad Widget

Ad Widget

Ad Widget

Ad Widget

Ad Widget

ಹೀಗೆ ಮುಂದುವರಿದ ಪ್ರೇಮ ಕಥೆಯು ಯುವತಿಯ ತಾಯಿಗೆ ತಿಳಿದ ಪರಿಣಾಮ ಬಂಟ್ವಾಳದ ನ್ಯಾಯವಾದಿ ಶೈಲಜಾ ರಾಜೇಶ್ ಗಮನಕ್ಕೆ ತರಲಾಗಿತ್ತು. ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಾಗ ವಿಚಾರಣೆ ಆರಂಭಗೊಂಡಿತ್ತು.

ನ್ಯಾಯವಾದಿ ಶೈಲಜಾ ರಾಜೇಶ್

ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಮೊಬೈಲ್ ಲೊಕೇಶನ್ ನಲ್ಲಿ ಯುವತಿಯ ಪ್ರಿಯಕರ ಉಡುಪಿಯಲ್ಲಿರುವುದು ತಿಳಿದ ಪರಿಣಾಮ ಉಡುಪಿಯ ಶಂಕರನಾರಾಯಣ ಎಂಬಲ್ಲಿಗೆ ತೆರಳಿದಾಗ ಅಲ್ಲಿ ಅಚ್ಚರಿ ಕಾದಿತ್ತು.

ಯುವತಿಯನ್ನು ನಂಬಿಸಿ ಪ್ರೀತಿಯ ನಾಟಕವಾಡಿದ್ದ ಸಾಫ್ಟ್ ವೆರ್ ಇಂಜಿನಿಯರ್ ಮಂಗಳಮುಖಿ ಎನ್ನುವುದು ಗೊತ್ತಾಗಿದ್ದು,ಕೂಡಲೇ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಫೇಸ್ಬುಕ್ ಪ್ರೇಮ ಪ್ರಕರಣದ ಜಾಡು ಹಿಡಿದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ನ್ಯಾಯವಾದಿ ಶೈಲಜಾ ರಾಜೇಶ್, ವಿಟ್ಲ ಠಾಣಾ ಇನ್ಸ್ಪೆಕ್ಟರ್ ನಾಗರಾಜ್ ಹಾಗೂ ಸಿಬ್ಬಂದಿ, ಶಂಕರನಾರಾಯಣ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗದ ಸಮಯಪ್ರಜ್ಞೆ ಹಾಗೂ ಕ್ಷಿಪ್ರ ಕಾರ್ಯಾಚರಣೆಯಿಂದ ಯುವತಿಯ ಬಾಳ್ವೆ ಉಳಿದಂತಾಗಿದೆ.

error: Content is protected !!
Scroll to Top
%d bloggers like this: