Courtney Tilia: ನಾನು ಪೋರ್ನ್ ಸ್ಟಾರ್ ಆಗಲು ಆ ದೇವರೆ ಕಾರಣ! ದೇವರು ಹೇಳಿದ್ರಿಂದ ನಾನು ನೀಲಿ ತಾರೆಯಾದೆ ಎಂದ ಸ್ಕೂಲ್ ಟೀಚರ್!

Courtney Tilia: ಪಡ್ಡೆ ಹುಡುಗರದ್ದು ಮಾತ್ರವಲ್ಲದೇ ಕೆಲ ಅಜ್ಜಂದಿರ ನಿದ್ದೆಯನ್ನೂ ಕದ್ದ ಲಾಸ್​ ಏಂಜಲಿಸ್​ನ ಕರ್ಟ್ನಿ ಟಿಲಿಯಾ(Courtney Tilia) ಅವರು ಶಿಕ್ಷಕಿಯಾಗಿದ್ದ ತಾನು ನೀಲಿ ಚಿತ್ರ ತಾರೆಯಾದದ್ದು ಹೇಗೆ? ಅನ್ನೋದ್ರು ಬಗ್ಗೆ ಮನ ಬಿಚ್ಚಿ ಮಾತಾಡಿದ್ದಾರೆ.

ತನ್ನ ಅಂಗ ಪ್ರದರ್ಶನದಿಂದಲೇ ಫೇಮಸ್​ ಆಗಿ ಸದ್ಯ ನೀಲಿ ಚಿತ್ರ ತಾರೆಯಾಗ ಮಿಂಚುತ್ತಿರೋ ನಟಿ ಕರ್ಟ್ನಿ ಟಿಲಿಯಾ, ತನ್ನ ಪೋರ್ನ್ ಫಿಲಂ ಗಳ ಹಿನ್ನೆಲೆಯನ್ನು ತೆರೆದಿಟ್ಟಿದ್ದಾಳೆ. ಅದೂ ಅಲ್ಲದೆ ಅಸಲಿಗೆ ತಾನು ಶಿಕ್ಷಕಿ ಎನ್ನುವ ಕುತೂಹಲದ ವಿಷಯವನ್ನೂ ಕೂಡ ಈಕೆ ಬಹಿರಂಗಪಡಿಸಿದ್ದಾಳೆ. ಸಮಾಜದಲ್ಲಿ ಅಪಾರ ಗೌರವವಿರುವ ಶಿಕ್ಷಕ ವೃತ್ತಿಯನ್ನು ತೊರೆದು ಪೋರ್ನ್​ ಸ್ಟಾರ್​ (Porn Star) ಆಗಿದ್ದು ಹೇಗೆ ಎಂಬ ಬಗ್ಗೆ ಕರ್ಟ್ನಿ ಟಿಲಿಯಾ ಈಗ ಮಾಹಿತಿ ನೀಡಿದ್ದು, ಅದೀಗ ವೈರಲ್​ ಆಗಿದೆ.

ಅಂದಹಾಗೆ ಲಾಸ್ ಏಂಜಲೀಸ್ ಮೂಲದ ಕರ್ಟ್ನಿ ಟಿಲಿಯಾ ಶಿಕ್ಷಕಿಯಾಗಿದ್ದವರು, ಈಗ ವಯಸ್ಕ ಸೈಟ್ ಓನ್ಲಿ ಫ್ಯಾನ್ಸ್‌ನಲ್ಲಿ ಮೂರು ಚಾನೆಲ್‌ಗಳನ್ನು ಹೊಂದಿದ್ದಾರೆ. ಇದರಲ್ಲಿ 25 ಸಾವಿರಕ್ಕೂ ಅಧಿಕ ಚಂದಾದಾರರನ್ನು ಈಕೆ ಹೊಂದಿರೋ ಈಕೆ ಪೋರ್ನ್​ ಸ್ಟಾರ್​ ಆಗಲು ಕಾರಣರಾದವರು ಯಾರೆಂದು ತಿಳಿದರೆ ನೀವೇ ಹೌಹಾರುತ್ತೀರ! ಯಾಕೆಂದರೆ ಇದಕ್ಕೆ ಕಾರಣ ದೇವರಂತೆ!

ಹೌದು. ತಾನು ನೀಲಿ ತಾರೆ ಆಗಲು ದೇವರೇ ಕಾರಣ ಎಂದಿದ್ದಾರೆ ಕರ್ಟ್ನಿ ಟಿಲಿಯಾ. “ನಾನೀಗ ಈ ವೃತ್ತಿಯಿಂದ ಹೆಚ್ಚು ಖ್ಯಾತಿ, ಹಣ ಮತ್ತು ಸಂತೋಷವನ್ನು ಪಡೆದಿದ್ದೇನೆ. ನಾನು ಪೋರ್ನ್ ಸ್ಟಾರ್ ಆಗಬೇಕೆಂಬುದು ದೇವರ ಇಚ್ಛೆ. ಆತನ ಹೇಳಿಕೆಯಿಂದಲೇ ನಾನು ಈ ಸ್ಟಾರ್​ ಆಗಿದ್ದೇನೆ. ಇದಕ್ಕೂ ಮೊದಲು ಆಗಬೇಕು ಎಂಬ ಕನಸಿತ್ತು. ಆದರೆ ಅದಾಗಲೇ ಶಿಕ್ಷಕಿಯಾಗಿದ್ದೆ.(Teacher) ಆದರೆ ಅದೇ ವೇಳೆಗಾಗಲೆ ದೇವರೇ ಬಂದು ನನಗೆ ಪೋರ್ನ್​ ಸ್ಟಾರ್​ ಆಗಲು ಹೇಳಿದ. ಆತನ ಇಚ್ಛೆಯಂತೆ ಇಂದು ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಸಂಪೂರ್ಣ ಖುಷಿಯಿಂದ ಇದ್ದೇನೆ” ಎಂದು ಹೇಳಿದ್ದಾರೆ.

ಅಲ್ಲದೆ “ನನ್ನ ಬೌದ್ಧಿಕತೆ ಬೆಳೆದಾಗಿನಿಂದ ನಾನು ದೇವರೊಂದಿಗೆ ಸಂಪರ್ಕದಲ್ಲಿದ್ದೇನೆ‌. ದೇವರು ಸರ್ವಾಂತರ್ಯಾಮಿ. ಆದ್ದರಿಂದ ದೇವರನ್ನು ಸೇರಲು, ದೇವರ ಸಂದೇಶಗಳನ್ನು ಪಡೆಯಲು ಅಥವಾ ದೇವರು ಯಾರು, ದೇವರೊಂದಿಗಿನ ಸಂಬಂಧ ಹೇಗಿರಬೇಕು ಎಂದು ಹೇಳಲು ನನಗೆ ಯಾವ ಸಂಘ-ಸಂಸ್ಥೆಗಳ ಅಗತ್ಯವಿಲ್ಲ” ಫಿಲೋಸಫಿಯನ್ನೂ ಬಿಟ್ಟಿದ್ದಾರೆ.

ಇದಿಷ್ಟೇ ಅಲ್ಲದೆ ತನಗೆ ಎರಡೂ ಲಿಂಗದವರ ಮೇಲೆ ಆಸೆ ಇರುವುದಾಗಿ ಕರ್ಟ್ನಿ ಹೇದ್ದಾಳೆ. ಇದರಿಂದಾಗೇ ಈಕೆ ಅಲ್ಪಾವಧಿಯಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದಳಂತೆ. 36 ವರ್ಷ ವಯಸ್ಸಿನ ಕರ್ಟ್ನಿ ಟಿಲಿಯಾ ಒಂದು ಮಗುವಿನ ತಾಯಿಯೂ ಹೌದು. ಈಕೆಯ ಈ ಕಾರ್ಯಕ್ಕೆ ಪತಿಯ (Husband) ಸಹಾಯವೂ ಇದೆಯಂತೆ. ಇನ್ನು ಈ ನೀಲಿ ತಾರೆ ಪ್ರತಿ ತಿಂಗಳು 50 ಸಾವಿರದಿಂದ 100 ಸಾವಿರ ಡಾಲರ್‌ಗಳನ್ನು ಗಳಿಸುತ್ತಾಳಂತೆ!

 

ಇದನ್ನೂ ಓದಿ: ಸಮಂತಾ ದೇವೋ ಭವ ಎನ್ನುತ್ತ ಆಕೆಗೆ ಗುಡಿ ಕಟ್ಟಿದ ಅಭಿಮಾನಿ, ಅದ್ಕೆ ಆತ ಖರ್ಚು ಮಾಡಿದ್ದೆಷ್ಟು ಲಕ್ಷ ಗೊತ್ತಾ ?!

Leave A Reply

Your email address will not be published.