ಸೋಮವಾರ, 26 ಅಕ್ಟೋಬರ್ 2026
Trending

Sapthami Gowda: ಡಾಲಿ ಧನಂಜಯನ ‘ಪೋಲಿ’ ವಿಚಾರಗಳನ್ನು ಬಿಚ್ಚಿಟ್ಟ ಕಾಂತಾರ ಬೆಡಗಿ

ಕಾಂತಾರ’ (Kantara) ಬೆಡಗಿ ಸಪ್ತಮಿ ಗೌಡ ಕೂಡ ಭಾಗಿಯಾಗಿ, ಧನಂಜಯರನ್ನು ಹಾಡಿ ಹೊಗಳುವುದಲ್ಲದೆ ಕೆಲವು ಪೋಲೀ ವಿಚಾರಗಳನ್ನೂ ಹಂಚಿಕೊಂಡಿದ್ದಾರೆ.

Sapthami Gowda

Sapthami Gowda : ಕಿರುತೆರೆಯ ಜನಪ್ರಿಯ ಶೋ ಆಗಿರುವ ವೀಕೆಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮದಲ್ಲಿ ಈ ವಾರದ ಸಾಧಕರ ಸೀಟ್ ಅನ್ನು ಕನ್ನಡ ಇಂಡಸ್ಟ್ರಿಯ ನಟ ರಾಕ್ಷಸ ಡಾಲಿ ಧನಂಜಯ (Daali Dhananjay) ಅವರು ಅಲಂಕರಿಸಿದ್ದಾರು. ಈ ವೇಳೆ ಡಾಲಿ ತಮ್ಮ ರಂಗಭೂಮಿ, ಸಿನಿಮಾ ಜರ್ನಿ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಂತೆಯೇ ಇದೇ ಸಮಯದಲ್ಲಿ ‘ಕಾಂತಾರ’ (Kantara) ಬೆಡಗಿ ಸಪ್ತಮಿ ಗೌಡ ಕೂಡ ಭಾಗಿಯಾಗಿ, ಧನಂಜಯರನ್ನು ಹಾಡಿ ಹೊಗಳುವುದಲ್ಲದೆ ಕೆಲವು ಪೋಲೀ ವಿಚಾರಗಳನ್ನೂ ಹಂಚಿಕೊಂಡಿದ್ದಾರೆ.

Sponsored

ಜಗತ್ಪ್ರಸಿದ್ದವಾದ, ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಸಿನಿಮಾದ ಮೂಲಕ ಸಂಚಲನ ಮೂಡಿಸಿದ ಸಪ್ತಮಿ ಗೌಡ ಅವರು ಮೊದಲು ಚಂದನವಕ್ಕೆ ಕಾಲಿರಿಸಿದ್ದು ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಮೂಲಕ. ಅದು ಕೂಡ ಡಾಲಿಗೆ ನಾಯಕಿಯಾಗಿ. ಇಲ್ಲಿಂದಲೇ ಇವರಿಬ್ಬರ ಗೆಳೆತನ ಶುರುವಾಗಿದೆ. ಹೀಗಾಗಿ ವೀಕೆಂಡ್ ಟೆಂಟ್‌ನಲ್ಲಿ ಭಾಗಿಯಾಗಿರುವ ಸಪ್ತಮಿ ಗೌಡ ಅವರು ಧನಂಜಯ್ ಅವರ ಗುಣಗಳನ್ನು ಗುನಗಾನಮಾಡಿದ್ದಾರೆ.

ಹೌದು, ಧನಂಜಯ (Dhananjay) ಅವರು ಮುಗ್ಧರ ರೀತಿ ಕಾಣ್ತಾರೆ, ಆದರೆ ಅವರು ಮುಗ್ಧರಲ್ಲ, ತುಂಬಾ ಪೋಲಿ. ನಾವೆಲ್ಲ ಅವರ ಜೋಕ್‌ಗಳನ್ನು ಕೇಳಿದ್ದೇವೆ. ನಮ್ಮ ಕಾಲೇಜ್‌ಗೆ ಮುಖ್ಯ ಅತಿಥಿಯಾಗಿ ಧನಂಜಯ ಅವರು ಬಂದಿದ್ದರು. ಆಗಲೇ ನಾನು ಅವರನ್ನು ಮೊದಲು ಭೇಟಿ ಮಾಡಿದ್ದೆ. ಸ್ವಲ್ಪ ದಿನದ ಹಿಂದೆ ಲಿಫ್ಟ್‌ನಲ್ಲಿದ್ದಾಗ ಯಾರೋ ಬಂದು ಧನಂಜಯ ಜೊತೆ ಸೆಲ್ಫಿ ತಗೊಂಡರು. ಆಗ ಡಾಲಿ ಇಲ್ಲಿ ಸಪ್ತಮಿ ಗೌಡ ಕೂಡ ಇದ್ದಾರೆ ಎಂದರು. ನಾನು ಬೆಳೆಯಬೇಕು, ನಮ್ಮವರೂ ಬೆಳೆಯಬೇಕು ಎನ್ನುವ ಗುಣ ಧನಂಜಯ ಅವರಿಗೆ ಇದೆ. ಸೆಲ್ಫ್ ಮೇಡ್ ವ್ಯಕ್ತಿಗೆ ಕಷ್ಟ ಬರಬಾರದು, ಯಾವಾಗಲೂ ನಗುತ್ತಾ ಇರಬೇಕು. ಇನ್ನು ನಾನು ಅವರ ಹೆಸರನ್ನು ನನ್ನ ಫೋನ್‌ನಲ್ಲಿ ದಕ್ಷಿಣಾಪಥೇಶ್ವರ ಅಂತ ಸೇವ್ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಕಾಂತಾರ’ ನಟಿ ಬಗ್ಗೆ ಡಾಲಿ ಮಾತನಾಡಿ, ಸಪ್ತಮಿ ಗೌಡ(Saptami Gowda) ಅವರು ಇಲ್ಲಿಗೆ ಬರುತ್ತಾರೆ ಅಂತ ಅಂದುಕೊಂಡಿರಲಿಲ್ಲ. ‘ಕಾಂತಾರ’ ಸಿನಿಮಾ ಹಿಟ್ ಆದ ನಂತರ ಹಿಂದಿಯವರೆಲ್ಲ ನಿಮ್ಮ ಜೊತೆ ಫೋಟೋ ತೆಗೆಸಿಕೊಳ್ತಾರೆ ಅಂತ ರೇಗಿಸುತ್ತಿರುತ್ತೇವೆ. ಸಪ್ತಮಿಯನ್ನು ನಾನು ಉಮೇಶಣ್ಣನ ಮಗಳು ಅಂತ ಕರಿತೀನಿ ಎಂದರು.

ಅಲ್ಲದೆ ಸಪ್ತಮಿ ಗೌಡ ಇರೋ ಕಾಲೇಜ್‌ಗೆ ಬರಬೇಕು ಅಂತ ನಂಗೆ ಹೇಳಿದಾಗ ನಾನು ಹೋದೆ, ಅಲ್ಲಿ ಸಪ್ತಮಿ ಎಲ್ಲ ಹುಡುಗರನ್ನು ಕಂಟ್ರೋಲ್ ಮಾಡ್ತಿದ್ರು, ಡಾನ್ ತರ ಅವಾಜ್ ಹಾಕ್ತಿದ್ರು. ಆಗಲೇ ಪೊಲೀಸಪ್ಪನ ಮಗಳು ಅಂತ ಗೊತ್ತಾಯ್ತು. ‘ಪಾಪ್‌ಕಾರ್ನ್ ಮಂಕಿ ಟೈಗರ್’ ಪಾತ್ರದಲ್ಲಿ ಸಪ್ತಮಿಯನ್ನು ಹಾಕಿಕೊಳ್ತೀನಿ ಅಂತ ಸೂರಿ ಸರ್ (Director Soori) ಹೇಳಿದಾಗ ಸಪ್ತಮಿ ಕಾಲೇಜಿನಲ್ಲಿ ವರ್ತಿಸಿದ್ದು ನೆನಪಾಯ್ತು. ಆಗಲೇ ಕ್ಯಾರೆಕ್ಟರ್‌ಗೆ ಹೊಂದಿಕೆ ಆಗುತ್ತೆ ಅಂತಾ ಫಿಕ್ಸ್ ಆದೆ ಎಂದು ಧನಂಜಯ ಹೇಳಿದ್ದಾರೆ.

ಇದೀಗ ‘ಉತ್ತರಾಕಾಂಡ’ ಸಿನಿಮಾದಲ್ಲಿ ಮತ್ತೆ ಡಾಲಿ ಮತ್ತು ಸಪ್ತಮಿ ಗೌಡ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಮೋಹಕ ತಾರೆ ರಮ್ಯಾ (Ramya) ಕೂಡ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Actress Sapthami Gowda : ಡಾಲಿ ಹೆಸರನ್ನು ಕಾಂತಾರ ನಟಿ ಸೇವ್‌ ಮಾಡಿದ್ಹೇಗೆ?

Comments are closed.