Mrunal Thakur: ‘ನನ್ನ ಬಾಳಲ್ಲೂ ಓದಲಾಗದ ಒಂದಷ್ಟು ಪುಟಗಳಿವೆ’ ; ನಟಿ ಮೃಣಾಲ್ ಠಾಕೂರ್ ಕಣ್ಣೀರು !

Mrunal Thakur: ‘ಸೀತಾ ರಾಮಂ’ (Sita Ramam) ಸಿನಿಮಾದ ಮೂಲಕ ಸೌತ್ ಸಿನಿಮಾ ಇಂಡಸ್ಟಿಯಲ್ಲಿ ಜನಪ್ರಿಯತೆ ಪಡೆದ ಮೃಣಾಲ್ ಠಾಕೂರ್ (Mrunal Thakur) ಇದೀಗ ತಮ್ಮ ಜೀವನದ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ. ‘ನನ್ನ ಬಾಳಲ್ಲೂ ಅಂಥ ಪುಟಗಳಿವೆ’ ಎಂದು ಹೇಳುತ್ತಾ, ನಗುಮುಖದ ಸುಂದರಿ ಮೃಣಾಲ್ ಠಾಕೂರ್ ಬೇಸರದ, ಕಣ್ಣೀರು ಹಾಕುತ್ತಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಅರೆ!! ಏನಾಯಿತು? ಎಂದು ಆಶ್ಚರ್ಯಚಕಿತರಾಗಿ ಪ್ರಶ್ನೆ ಕೇಳುತ್ತಿದ್ದಾರೆ. ನಟಿಯ ಜೀವನದಲ್ಲಿ ನಡೆದ ಆ ಘಟನೆ ಏನಿರಬಹುದು?.

‘ಸೀತಾ ರಾಮಂ’ ಸಿನಿಮಾದಿಂದ ಸಾಕಷ್ಟು ಜನಪ್ರಿಯತೆ ಪಡೆದ ನಟಿ,
ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಟಾಲಿವುಡ್​ನಲ್ಲಿ (tollywood) ನಟಿ ಮೃಣಾಲ್ ಠಾಕೂರ್​ಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಸೀತಾ ರಾಮಂ ಸಿನಿಮಾದಲ್ಲಿನ ಅತ್ಯದ್ಭುತ ಅಭಿನಯದಿಂದ ಮೃಣಾಲ್ ಠಾಕೂರ್ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಹನು ರಾಘವಪುಡಿ ನಿರ್ದೇಶನದ ಈ ಚಿತ್ರದಲ್ಲಿ ದುಲ್ಕರ್ ಸಲ್ಮಾನ್​ಗೆ (Dulquer Salmaan) ಮೃಣಾಲ್ ನಾಯಕನಾಗಿ ಕಾಣಿಸಿಕೊಂಡಿದ್ದರು.

ಕಿರುತೆರೆಯಲ್ಲಿ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮೃಣಾಲ್ ಠಾಕೂರ್ ಅವರು ಮರಾಠಿ ಚಿತ್ರ ‘ವಿಟ್ಟಿ ದಂಡು’ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ಆ ನಂತರ ಮರಾಠಿ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಜನರು ಮನಸ್ಸು ಕದ್ದ ನಗುಮುಖದ ಸುಂದರಿ ಇದೀಗ ಕಣ್ಣೀರು ಹಾಕಿದ ಫೊಟೋ ಪೋಸ್ಟ್ ಮಾಡಿದ್ದು, ಅಭಿಮಾನಿಗಳಿಗೆ ಆತಂಕ ಮೂಡಿಸಿದ್ದಾರೆ.

‘ನನ್ನ ಬಾಳಲ್ಲೂ ಅಂಥ ಪುಟಗಳಿವೆ’ ಎಂದು ಹೇಳುತ್ತಾ ಪ್ರೇಕ್ಷಕರನ್ನು ಆಶ್ಚರ್ಯಗೊಳಿಸಿದ್ದಾರೆ. ಹೌದು, ಪ್ರತಿಯೊಬ್ಬರ ಬಾಳಲ್ಲೂ ಕಹಿ ಘಟನೆಯ ನೆನಪುಗಳು ಇರುತ್ತವೆ. ಅದನ್ನು ಹಂಚಿಕೊಳ್ಳಲು ಎಷ್ಟೋ ಜನರು ಹಿಂಜರಿಯುತ್ತಾರೆ. ಆದರೆ, ನಟಿ ತಮ್ಮ ಜೀವನದಲ್ಲೂ ಕಹಿ ಘಟನೆ ನಡೆದಿದೆ ಎಂದು ಅಭಿಮಾನಿಗಳಲ್ಲಿ ಹೇಳಿಕೊಂಡಿದ್ದಾರೆ.

ಮೃಣಾಲ್ ಅಳುತ್ತಿರುವ ಫೋಟೋನ ಸ್ಟೇಟಸ್​ನಲ್ಲಿ ಶೇರ್ ಮಾಡಿಕೊಂಡಿದ್ದು, ಅದಕ್ಕೆ ಕ್ಯಾಪ್ಶನ್ ನೀಡಿದ್ದಾರೆ . “ನಿನ್ನೆ ಕಠಿಣವಾಗಿತ್ತು. ಆದರೆ ಇಂದು ನಾನು ಬಲಶಾಲಿ, ಬುದ್ಧಿವಂತೆ ಮತ್ತು ಸಂತೋಷವಾಗಿದ್ದೇನೆ. ಪ್ರತಿಯೊಬ್ಬರ ಕಥೆಗಳಲ್ಲೂ ದೊಡ್ಡದಾಗಿ ಓದಲಾಗದ ಒಂದಷ್ಟು ಪುಟಗಳು ಇದ್ದೇ ಇರುತ್ತದೆ. ಆದರೆ, ನಾನು ಆ ಪುಟಗಳನ್ನು ಏರು ಧ್ವನಿಯಲ್ಲಿ ಓದುತ್ತಿದ್ದೇನೆ. ನಾನು ಕಲಿತ ಪಾಠವನ್ನು ಯಾರಾದರೂ ಕಲಿಯಬೇಕಾಗಿ ಬರಬಹುದು. ನಿಷ್ಕಪಟ ಮತ್ತು ದುರ್ಬಲವಾಗಿರುವುದು ಒಳ್ಳೆಯದೇ”ಎಂದು ನಟಿ ಬರೆದುಕೊಂಡಿದ್ದಾರೆ.

ನಂತರ ಮತ್ತೊಂದು ವಿಡಿಯೋ ಹಂಚಿಕೊಂಡಿರುವ ಮೃಣಾಲ್, “ಕಣ್ಣೀರು ಹಾಕುತ್ತಿರುವುದು ಹಳೆಯ ಫೋಟೋ, ತುಂಬಾನೇ ಕಷ್ಟದ ದಿನಗಳಲ್ಲಿ ತೆಗೆದ ಫೋಟೋ ಎಂದು ಹೇಳಿದ್ದಾರೆ. ಹಾಗೆಯೇ ಇಂದು ನಾನು ಖುಷಿಯಾಗಿದ್ದೇನೆ. ಎಲ್ಲವನ್ನೂ ಎದುರಿಸಿದ್ದೇನೆ”ಎಂದು ಹೇಳಿದ್ದಾರೆ. ಸದ್ಯ ನಟಿಯ ಪೋಸ್ಟ್ ವೈರಲ್ ಆಗಿದೆ.

Leave A Reply

Your email address will not be published.